ವಿಜಯಪುರ | ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಯಾಗಿ ಘೋಷಣೆ

Date:

Advertisements

‘ನಮ್ಮ ಕರ್ನಾಟಕ-ನಮ್ಮ ಮಾದರಿ’, ‘ನಿರ್ಮಲಾ ಸೀತಾರಾಮನ್ ಕೃಷ್ಣ ಭೈರೇಗೌಡ ಮುಖಾಮುಖಿ’, ‘ಕರ್ನಾಟಕಕ್ಕೆ ಒಕ್ಕೂಟ ಸರ್ಕಾರದ ಅನ್ಯಾಯ’ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಗಮನಸೆಳೆದಿದ್ದ, ಜಾಗೃತ ಕರ್ನಾಟಕವು ಒಂದು ರಾಜಕೀಯ ಸಂಘಟನೆಯಾಗಿ ಘೋಷಣೆಯಾಗಿದೆ..

ವಿಜಯಪುರ ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಹಾಲ್‌ನಲ್ಲಿ ಭಾನುವಾರ ಕಾರ್ಯಕ್ರಮ ನಡೆದಿದ್ದು, ʼಬದಲಾವಣೆಗಾಗಿ ರಾಜಕೀಯ – ರಾಜಕೀಯದ ಬದಲಾವಣೆ’ ಎಂಬ ಘೋಷಣೆಯೊಂದಿಗೆ, ರಾಜಕೀಯದ ಪರಿವರ್ತನೆಯ ಗುರಿ ಹೊಂದಿರುವ ಜಾಗೃತ ಕರ್ನಾಟಕವು ರಾಜ್ಯದ ಆರು ವಲಯಗಳಲ್ಲಿ ಕಾರ್ಯಕ್ರಮ ಜರುಗಿಸಿತು. ಅದರ ಭಾಗವಾಗಿ ವಿಜಯಪುರ ವಲಯದ ಕಾರ್ಯಕ್ರಮವು ನಗರದ ಸಿಎನ್‌ಎಫ್‌ಇ ಕಚೇರಿಯಲ್ಲಿ ಜಾಗೃತ ಕರ್ನಾಟಕದ ಲೋಗೊ ಬಿಡುಗಡೆ ಮೂಲಕ ರಾಜಕೀಯ ಸಂಘಟನೆಯೆಂದು ಘೋಷಿಸಿಕೊಂಡಿತು.

ಕಾರ್ಯಕ್ರಮದ ಪ್ರಸ್ತಾವನೆ ಹಾಗೂ ಮುನ್ನೋಟದ ಕುರಿತು ಶ್ರೀನಾಥ ಎಸ್ ಪೂಜಾರಿ ಮಾತನಾಡಿದರು. ಕುಮಾರಿ ಭಾಗ್ಯಶ್ರೀ ಬಡಿಗೇರ, ವೇದಾ ಮುರಗೊಡ ಹಾಗೂ ಇತರರು ಲೋಗೊ ಬಿಡುಗಡೆ ಮಾಡಿದರು. ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆ ಕುಮಾರಿ ಆರತಿ ಶಹಾಪುರ, ಜಾಗೃತ ಕರ್ನಾಟಕದ ಸಂಕಲ್ಪ ಬೋಧಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಸಾಹಿತಿಗಳು ಸ್ವಾವಲಂಬಿಗಳಾಗಬೇಕು: ಶ್ರೀಧರ ಬಳಿಗಾರ

ಜಮಾಅತೆ ಇಸ್ಲಾಮೀ ಹಿಂದ್ ಮುಖಂಡ ಯು ಎಚ್ ಖದೀರ, ಅಸಂಘಟಿತ ಮಹಿಳಾ ಕಾರ್ಮಿಕರ ಸಂಘದ ಜಿಲ್ಲಾ ಮುಖಂಡೆ ಡಾ. ಭುವನೇಶ್ವರಿ ಕಾಂಬಳೆ, ಕೆಎಂಎ ಜಿಲ್ಲಾಧ್ಯಕ್ಷ ಇಮಾಮಸಾಬ ಮುಲ್ಲಾ, ಡಿವಿಪಿ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಲ್ಯಾಬ್ ಟೆಕ್ನಿಶಿಯನ್ ಅಶೋಷಿಯೇಷನ್ ಜಿಲ್ಲಾಧ್ಯಕ್ಷ‌ ಶ್ರೀಕಾಂತ ಚಿಮ್ಮಲಗಿ, ರಮೆಶ ಹಾದಿಮನಿ, ಎಚ್ ಎಚ್ ದೊಡಮನಿ, ಎಂ ಎ ಭಕ್ಷ್ಮೀ, ಸಂಜೀವ ಪಾಂಡೆ ಸೇರಿದಂತೆ ಹಲವರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X