ವಿಜಯಪುರ | ಜ್ಯೋತಿಬಾ ಫುಲೆ ಅವರಿಗೂ ಅಸ್ಪೃಶ್ಯತೆಯ ಅಪಮಾನ ಅಂಟಿತ್ತು; ಸಿ.ಕೆ.ತೂರವಿ

Date:

Advertisements

ಈ ದೇಶದ ಮೊದಲ ಚಳುವಳಿಗಾರ ಜ್ಯೋತಿಬಾ ಫುಲೆ ಅವರಿಗೂ ಅಸ್ಪೃಶ್ಯತೆಯ ಅಪಮಾನ ಅಂಟಿತ್ತು. ಇದಕ್ಕೆಲ್ಲ ಶಿಕ್ಷಣವೇ ಪರಿಹಾರ ಎಂದು ಪ್ರಪ್ರಥಮ ಬಾರಿಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ದೇಶದಲ್ಲಿ ತೆಗೆದ ಮಹಾತ್ಮ ಜ್ಯೋತಿಬಾಪುಲೆ ಮಹನೀಯರು ಎಂದು ಬಿಎಸ್‌ಪಿ ರಾಜ್ಯ ವಕ್ತಾರ ಸಿ.ಕೆ. ತೂರವಿ ಅವರು ಹೇಳಿದರು.

ವಿಜಯಪುರ ನಗರದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪದ ಮೊದಲ ಐಬಿಯಲ್ಲಿ ದಲಿತ ಸಮರ ಸೇನೆ ಕರ್ನಾಟಕ ಜಿಲ್ಲಾ ಶಾಖೆ ದಲಿತ ಚಳವಳಿಯ ಐವತ್ತು ವರ್ಷಗಳು ಹಾಗೂ ಜಿಲ್ಲಾ ಸಂಚಾಲನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

1974ರಲ್ಲಿ ಪ್ರೊ. ಬಿ.ಕೃಷ್ಣಪ್ಪ, ದೇವನೂರು ಮಹಾದೇವ, ಡಾ. ಸಿದ್ದಲಿಂಗಯ್ಯ, ಮಂಗಳೂರು ವಿಜಯ, ಇನ್ನೂ ಮುಂತಾದ ಮಹನೀಯರಿಂದ ಸಂಘಟನೆಗೊಂಡ ಡಿಎಸ್ಎಸ್ ಹಕ್ಕು ವಂಚಿತರಿಗೆ, ನ್ಯಾಯ ವಂಚಿತರಿಗೆ, ಅಸಹಾಯಕರಿಗೆ, ಭೂ ರಹಿತರಿಗೆ ರಕ್ಷಾ ಕವಚವಾಗಿ ಕೆಲಸ ಮಾಡಿದ್ದು ಮಾನನೀಯ ಎಂದರು.

Advertisements

1974ರಲ್ಲಿ ಡಿಎಸ್ಎಸ್, ಶಿವಸೇನೆ ಕ್ರಮವಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ಚಾಲನೆಗೊಂಡರೂ ಮಹಾರಾಷ್ಟ್ರದಲ್ಲಿ ಶಿವಸೇನೆ ರಾಜಕಾರಣದ ಭಾಗವಾಯಿತು. ಆದರೆ, ಕರ್ನಾಟಕದಲ್ಲಿ ಡಿಎಸ್ಎಸ್ ರಾಜಕಾರಣ ಪ್ರವೇಶಿಸದಿದೇ ಇರುವುದು ಹಿನ್ನಡೆಗೆ ಕಾರಣವೂ ಆಗಿರಬಹುದು ಎಂದರು.

ಸಾಹಿತಿ ಪತ್ರಕರ್ತ ಅನಿಲ್ ಹೊಸಮನಿ ಮಾತನಾಡಿ, ಬೂಸಾ ಚಳುವಳಿ ಡಿಎಸ್ಎಸ್ ಹುಟ್ಟಿಗೆ ಕಾರಣ, ಅಂದಿನ ಪೌರಾಡಳಿತ ಸಚಿವರಾಗಿದ್ದ ಬಿ. ಬಸಲಿಂಗಪ್ಪನವರು ಕನ್ನಡ ಸಾಹಿತ್ಯ ಬೂಸಾ ಎಂದು ಹೇಳಿದ್ದಕ್ಕೆ, ಅಂದಿನ ಸಮಾನತ ವಿರೋಧಿಗಳು ಅವರ ಹೇಳಿಕೆಯನ್ನು ಖಂಡಿಸಿ ಅಶಾಂತಿ ಸೃಷ್ಟಿಸಿದರು. ಅದರ ಪ್ರತಿರೋಧವೇ ಡಿಎಸ್ಎಸ್ ಹಳ್ಳಿಹಳ್ಳಿಗೂ ಕ್ರಾಂತಿಕಾರಿ ಕೆಲಸಗಳನ್ನು ಸೃಷ್ಟಿಸಿದ್ದು ಇತಿಹಾಸ ವೆಂದರು. ಅಂದಿನ ಹಿರಿಯ ತಲೆಮಾರಿನ ಡಿಎಸ್ಎಸ್ ಕಾರ್ಯಕರ್ತರು ಸೈನಿಕರಂತೇ ಭೂಮಿ ಮತ್ತು ಸ್ವಾಭಿಮಾನಕ್ಕಾಗಿ ಕಂಕಣಭದ್ಧರಾಗಿದ್ದರು ಎಂದು ಸ್ಮರಿಸಿದರು. ಹನುಮಂತ ಮತ್ತು ರಾವಣರು ಪರಾಕ್ರಮಿ ಶೂದ್ರ ರಾಜರು. ಅವರ ಇತಿಹಾಸ ಹಿಂದಿನ ಪೀಳಿಗೆ ಅರಿಯಬೇಕಿದೆ ಎಂದರು.

ವಕೀಲರಾದ ಉತ್ತಮ್, ಆನಂದ್ ರವರು ಜಾಗೃತರಾಗಿ, ಚಿಂತಿಸಿ, ಒಂದಾಗಿ ಎಂದ ಬಾಬಾ ಸಾಹೇಬರ ನುಡಿಗಳೆ ನಮಗೆ ದಾರಿದೀಪಗಳು. ನ್ಯಾಯ ಪಡೆಯಬೇಕಾದ ನಾವುಗಳು ನ್ಯಾಯ ನೀಡುವಂತಾಗಲು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸೂಚಿಸಿದ ಶಕ್ತಿ ಶಿಕ್ಷಣವೇ ಕಾರಣ ಎಂದರು.

ಸಮಿತಿಯ ಜಿಲ್ಲಾಧ್ಯಕ್ಷ ಗೌಡಪ್ಪ ಬಸಪ್ಪ, ಜಿಲ್ಲಾಡಳಿತಕ್ಕೆ ಹಕ್ಕೂತ್ತಾಯಗಳಾದ ಸ್ಲಂ ನಿವಾಸಿಗಳಿಗೆ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವುದು, ವಿಜಯಪುರ ಜಿಲ್ಲೆಯಲ್ಲಿರುವ 139 ಸ್ಲಂಗಳಿಗೆ ಅಗತ್ಯ ಸೂರುಗಳನ್ನು ಕಲ್ಪಿಸಲು ಕ್ರಿಯಾ ಯೋಜನೆ ಕೈಗೊಳ್ಳುವುದು, ಸ್ಲಂ ಜನರಿಗೆ ವಂತಿಕೆ ರಹಿತ ಮನೆ ನಿರ್ಮಾಣಗೊಳಿಸುವುದು, ಖಾಸಗಿ ಮಾಲಿಕತ್ವದ ಕೊಳಚೆ ಪ್ರದೇಶಗಳಿಗೂ ಹಕ್ಕು ಪತ್ರ ಒದಗಿಸುವುದು, ಪ್ರತೀ ತಾಲೂಕಿನಲ್ಲೂ 50ಎಕರೆ ಸ್ಲಂ ನಿವಾಸಿಗಳಾಗಿ ಜಾಗೆ ಕಾಯ್ದಿರಿಸುವುದು, ಸ್ಲಂನಲ್ಲೇ ಕಡ್ಡಾಯವಾಗಿ ಪಡಿತರ ಚೀಟಿ ವಿತರಣಾ ಹಾಗೂ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸಭೆಯಲ್ಲಿ ಹಕ್ಕೋತ್ತಾಯಗಳನ್ನು ಮಂಡಿಸಿದರು.

ಈ ವಿಷಯದ ಕುರಿತು ವಿವಿಧ ಸ್ಲಂ ಗಳ ನಿವಾಸಿಗಳೂಂದಿಗೆ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಲಾಗುವುದೆಂದು ಹೇಳಿದರು. ಈ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕು, ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ಅಮೃತ, ಸಮಿತಿಯ ಕಾರ್ಯ ಸಾಧನೆಗಳು ಹಾಗೂ ಸುಸಂಘಟನಾತ್ಮಕ ಹೋರಾಟಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಮುಖಂಡರುಗಳಾದ ಯಾಸಿನ್, ಸಂಗಮೇಶ್, ಸಾಗರ್, ಪರಶುರಾಮ್, ಉದಯ್, ಕಿರಣ ಮುಂತಾದವರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X