ವಿಜಯಪುರದ ಭೂತನಾಳ್ ಕ್ರಾಸ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕನಕದಾಸ ಜಯಂತೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ, ವಸತಿ ನಿಲಯ ಪಾಲಕ ಎಂ.ಎಸ್. ವಾಲಿಕಾರ್, ಭವಿಷ್ಯದ ದಾರಿಗೆ ಬೆಳಕು ಹಚ್ಚಿದ ದಾರ್ಶನಿಕ ದೃಷ್ಟಿಯ ಕವಿ, ಸಮ ಸಮಾಜದ ಕನಸು ಬಿತ್ತಿದ ಮಹಾ ಮಾನವತಾವಾದಿ ಸಂತ ಕನಕದಾಸರು. 15-16ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಇವರು ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದವರು ಎಂದು ಮಕ್ಕಳೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ವಸತಿ ನಿಲಯದ ಮಕ್ಕಳು ಮತ್ತು ವಸತಿ ನಿಲಯದ ಸಿಬ್ಬಂದಿ ಪಿ.ಜೆ. ಬನಸೋಡೆ, ಜೈ ಭೀಮ್ ಸುರಗಿಹಳ್ಳಿ, ಶ್ರೀಧರ್ ಅಂಜುಟಿಗಿ, ಗೌತಮ್ ಚೌದರಿ, ಶಿವಾನಂದ ಬಿಸನಾಳ, ಸಿದ್ದರಾಮ ಕಾಂಬಳೆ, ಸುವರ್ಣ ಕದಂಬ ಹಾಗೂ ಶಾಣು ಬಾಯಿ ಚೌಹಾಣ್ ಇನ್ನಿತರರು ಭಾಗಿಯಾಗಿದ್ದರು.