ಕೊಲ್ಕತ್ತಾ ಆರ್ ಜಿ ಕರ್ ಮೆಡಿಕಲ್ ಕಾಲೇಜ್‌ನ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಕೋರ್ಟ್‌ನ ಆದೇಶ ಸಮಾಧಾನ ತಂದಿಲ್ಲ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರವಿಕುಮಾರ ಬಿರಾದಾರ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ವಿಕಲಚೇತನರಿಗೆ ಅನುಕಂಪ ಬೇಡ; ಅವಕಾಶ ಬೇಕು: ಫಾದರ್ ಟಿಯೋಲ್ ಮಚಾದೊ
ಈ ಅತ್ಯಾಚಾರ ಪ್ರಕರಣ ಅತ್ಯಂತ ಅಮಾನುಷ ಹಾಗೂ ಇಡೀ ವೈದ್ಯಕೀಯ ಲೋಕವನ್ನು ತಲ್ಲಣಗೊಳಿಸಿದ್ದು, ಮಹಿಳಾ ವೈದ್ಯರಲ್ಲಿ ಅತೀವ ಭಯವನ್ನುಂಟು ಮಾಡಿದೆ. ಆದ್ದರಿಂದ ಆರೋಪಿಗೆ ಜೀವಾವಧಿ ಶಿಕ್ಷೆ ಸರಿಯಲ್ಲ. ಕೊಲ್ಕತ್ತಾ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜೊತೆಗೂಡಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಆರೋಪಿಗೆ ಗಲ್ಲುಶಿಕ್ಷೆ ಕೊಡಿಸಬೇಕು. ಆಗ ಮಾತ್ರ ಅತ್ಯಾಚಾರಕ್ಕೆ ಒಳಗಾದ ವೈದ್ಯೆಗೆ ನ್ಯಾಯ ಕೊಟ್ಟಂತಾಗುತ್ತದೆ ಮತ್ತು ದೇಶದ ವೈದ್ಯರಲ್ಲಿ ಆತ್ಮವಿಶ್ವಾಸ ತುಂಬಿದಂತೆ ಆಗಬಹುದು. ಅಲ್ಲದೆ.. ಕೊಲ್ಕತ್ತಾ ಸರ್ಕಾರವು ವೈದ್ಯೆಯ ಕುಟುಂಬದವರಿಗೆ 5 ಕೋಟಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
