ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಭೂಸ್ವಾಧೀನಕ್ಕೆ ಒಳಪಡುವ ಸಂತ್ರಸ್ತರಿಗೆ ನೀಡುವ ಪರಿಹಾರ ಧನದ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, “ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಎಕರೆ ಒಣ ಬೇಸಾಯ ಜಮೀನುಗಳು 40 ರಿಂದ 50 ಲಕ್ಷ ರೂಪಾಯಿವರೆಗೆ, ನೀರಾವರಿ ಜಮೀನುಗಳು 60 ರಿಂದ 70 ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತಿವೆ. ಆದರೆ, ಸರ್ಕಾರ ಅಲ್ಪ ಮೊತ್ತ ದರ ನಿಗದಿ ಪಡಿಸಿದೆ” ಎಂದು ಅಸಮಾಧಾನ ಹೊರಹಾಕಿದರು.
“ಭವಿಷ್ಯದಲ್ಲಿ ಪ್ರತಿ ಎಕರೆ ಭೂಮಿಗೆ ಕೋಟಿ ಕೊಟ್ಟರೂ ಸಿಗದಂತಹ ಪರಿಸ್ಥಿತಿ ಬರಲಿದೆ. ಹೀಗಿರುವಾಗ ರೈತರು ತಮ್ಮಲಿದ್ದ ಅಲ್ಪಸ್ವಲ್ಪ ಭೂಮಿಯನ್ನು ಕಳೆದುಕೊಂಡು, ಸರ್ಕಾರ ನೀಡುವ ಅಲ್ಪ ಹಣದಲ್ಲಿ ಬದುಕುವುದಾದರೂ ಹೇಗೆ? ಕೆಲವು ರಾಜಕೀಯ ರೈತರ ಅಭಿಪ್ರಾಯ ಪಡೆದು, ಸರ್ಕಾರ ರೈತರಿಗೆ ಮಂಕು ಬೂದಿ ಎರಚಿದೆ. ಹೀಗಾಗಿ ಭೂಮಿಗೆ ಹೆಚ್ಚಿನ ದರ ನಿಗದಿಪಡಿಸಲು, ಮತ್ತೊಮ್ಮೆ ಸಚಿವ ಸಂಪುಟ ಸಭೆ ಕರೆದು ಪರಿಶೀಲಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ
ತಾಳಿಕೋಟೆ ಹುಣಶ್ಯಾಳದ ಸಂಗನ ಬಸವ ಮಹಾಸ್ವಾಮಿಗಳು, ತಾಲೂಕಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ವಿಠಲ ಬಿರಾದಾರ, ರೈತ ಹೋರಾಟಗಾರ ಮಲ್ಲಿಕಾರ್ಜುನ ಬಟಗಿ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವರಾಜ ಮಸರಕಲ್ಲ, ಗುರುರಾಜ ಪಡಶೆಟ್ಟಿ ಲಾಲಸಾಬ ಹಳ್ಳೂರ, ಮಲಿಗೆಪ್ಪ ಸಾಸಲಗಿ, ಗುರುಲಿಂಗಪ್ಪ ಪಡಸಲಗಿ ಇದ್ದರು.