ಶಾಸಕ ಯತ್ನಾಳ್‌ ಅವಹೇಳನಕಾರಿ ಹೇಳಿಕೆ; ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಖಂಡನೆ

Date:

ವಿಜಯಪುರ ನಗರ ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ್‌ ಅವರು, ʼಸಾಮಾನ್ಯ ದಲಿತ ಮಹಿಳೆ ಕೂಡ ಚಾಮುಂಡಿಯ ಮುಡಿಗೆ ಹೂವನ್ನು ಮುಡಿಸಲು ಯೋಗ್ಯರಲ್ಲ. ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕುʼ ಎಂದು ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಪ.ಜಾ. ಘಟಕ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಘಟಕವು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ.ಜಾ. ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ, “ಶಾಸಕ ಯತ್ನಾಳ್‌, ಮುಸ್ಲಿಂ ಹೆಣ್ಣುಮಕ್ಕಳು ಅಷ್ಟೇ ಅಲ್ಲ ದಲಿತ ಹೆಣ್ಣುಮಕ್ಕಳು ಕೂಡ ಚಾಮುಂಡೇಶ್ವರಿಗೆ ಹೂವನ್ನು ಮುಡಿಸಲು ಯೋಗ್ಯರಲ್ಲ ಎನ್ನುವುದರ ಮುಖಾಂತರ ದಲಿತ ಮಹಿಳೆಯನ್ನು ಅವಮಾನಿಸಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ ʼಹಿಂದು ನಾವೆಲ್ಲ ಒಂದು, ದಲಿತರು ಮತ್ತು ಹಿಂದುಳಿದವರು ಎಲ್ಲ ಜಾತಿ ಸಮುದಾಯದವರನ್ನು ಒಂದೇʼ ಎಂದು ಭಾಷಣ ಬಿಗಿಯುವ ಅವರು ದಲಿತರನ್ನು ಅವಮಾನಿಸಿ ಮಾತನಾಡಿರುವದನ್ನು ತೀವ್ರವಾಗಿ ಖಂಡಿಸುತ್ತೇವೆ. ದಲಿತರು ಕೂಡ ಹಿಂದುಗಳೇ ಎನ್ನುವುದು ತಮ್ಮ ನೆನಪಿನಲ್ಲಿರಲಿ. ಇವತ್ತು ಸಿದ್ದರಾಮಯ್ಯನವರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಲು ಮುಸ್ಲಿಂ ಮಹಿಳೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅವಕಾಶ ನೀಡಿದ್ದನ್ನು ಸ್ವಾಗತಿಸುತ್ತೇವೆ. ಮುಂದಿನ ದಿನಮಾನಗಳಲ್ಲಿ ದಲಿತರಿಗೂ ಕೂಡ ನಾಡಹಬ್ಬ ಮೈಸೂರು ದಸರಾ ಉತ್ಸವ ಉದ್ಘಾಟಿಸಲು ಅವಕಾಶ ದೊರೆಯುತ್ತದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...
WhatsApp Image 2025 09 18 at 5.57.36 PM

ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ ಮಾತನಾಡಿ, “ಎಲ್ಲ ಹೆಣ್ಣುಮಕ್ಕಳಿಗೆ ಸಮಾನವಾದ ಹಕ್ಕನ್ನು ನೀಡಿರುವ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನವನ್ನು ಧಿಕ್ಕರಿಸಿ ಯತ್ನಾಳರು ಮಾತನಾಡಿದ್ದಾರೆ. ಅವರ ಮಾತುಗಳು ಹೆಣ್ಣು ಕುಲಕ್ಕೆ ಮಾಡಿರುವ ಅವಮಾನ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಬ್ಲಾಕ್ ಕಾಂಗ್ರೆಸ್ ಪ.ಜಾ. ಘಟಕದ ಅಧ್ಯಕ್ಷ ಪರಶುರಾಮ ಹೊಸಮನಿ ಮಾತನಾಡಿ, “ನಗರ ಶಾಸಕ ಬಸನಗೌಡ ಆರ್. ಪಾಟೀಲ ಅವರು ಮೈಸೂರು ದಸರಾ ಉತ್ಸವದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕು ಮತ್ತು ಪೂಜೆ ಸಲ್ಲಿಸಬೇಕು ಅಂತಾ ದಲಿತ ವಿರೋಧಿ ಹೇಳಿಕೆ ನೀಡಿ ದಲಿತ ಮಹಿಳೆಯರಿಗೆ ಅವಮಾನಿಸಿದ್ದಾರೆ. ಇವರು ಜಾತಿ ವಿರೋಧಿ ಚಟುವಟಿಕೆ ಮತ್ತು ಜಾತಿ ಜಾತಿಗಳ ನಡುವೆ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದು, ಇವರ ಮೇಲೆ ಸರಕಾರವು ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ವಿಜಯಪುರ | ಅಭಿವೃದ್ಧಿ ಅನುದಾನದಿಂದ ಪರಿಹಾರ ನೀಡುವುದು ಯಾವ ನ್ಯಾಯ: ಪಾಲಿಕೆ ಸದಸ್ಯ ಪ್ರಶ್ನೆ

ಪ್ರತಿಭಟನೆಯಲ್ಲಿ ಜಲನಗರ ಬ್ಲಾಕ್ ಪ.ಜಾ. ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಛಲವಾದಿ, ಭಾರತಿ ಹೊಸಮನಿ, ವಕೀಲ ತಿಪ್ಪಣ್ಣ,
ಡಿ.ಸಿ.ಸಿ. ಉಪಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಚನ್ನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಸತೀಶ ಅಡವಿ, ಸರ್ಫರಾಜ ಮಿರ್ದೆ, ಯುವರಾಜ ಬಜಂತ್ರಿ, ಕೃಷ್ಣಾ ಲಮಾಣಿ, ಫಯಾಜ ಕಲಾದಗಿ, ಅಕ್ರಂ ಮಶಾಳಕರ, ಅಪ್ಪು ಪೂಜಾರಿ, ವಿರೇಶ ಕಲಾಲ, ಸಂತೋಷ ಶಹಾಪುರ, ಅಶ್ಫಾಕ ಮನಗೂಳಿ, ಮಹಾದೇವ ರಾವಜಿ, ಮಹಾದೇವ ಚಲವಾದಿ, ಶಬ್ಬೀರ ಪಾಟೀಲ, ತಾಜೋದ್ದೀನ ಖಲೀಫಾ, ಬಾಬು ಯಾಳವಾರ, ಅರುಣ ಬಜಂತ್ರಿ, ಕಲ್ಲಪ್ಪ ಕಲಶೆಟ್ಟಿ, ಗೌಸ ಮುಜಾವರ, ಮಹಾದೇವ ಲಿಂಗದಳ್ಳಿ, ಮಲ್ಲಿಕಾರ್ಜುನ ಸಿಂಗೆ, ಲಾಲಸಾಬ ಕೊರಬು, ಹಮೀದಾ ಪಟೇಲ, ಅಮಿನ ಸತ್ತಿಕರ, ದಸ್ತಗೀರ ಶಾನವಾಲೆ, ರಮೇಶ ಮುದಕಣ್ಣವರ, ಇಜಾಜ ಮುಕಬಿಲ್, ಸಂಜೀವ ಶಿವಪೂಜಿ, ಶಿವಕುಮಾರ ಪಿ. ವಗ್ಯಾನವರ, ಸಾಗರ ಎಂ. ಹದಗಲ್, ಸತೀಶ ಪಾಟೀಲ, ಸಂಜು ಗುನ್ನಾಪೂರ, ಸದು ಸಿದ್ದಾರ್ಥ, ರಾಜು ಭೂತನಾಳ, ರಾಕೇಶ ಗುನ್ನಾಪೂರ ಮುಂತಾದವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...