ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಭಾಗದಲ್ಲಿರುವ ಶಬ್ದಮಣಿ ದರ್ಪಣಂ ಕೃತಿಯ ಕರ್ತೃ ಕೇಶಿರಾಜನ ಕಾಯಕ ಭೂಮಿಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ಕೊಂಡಗೂಳಿ ಗ್ರಾಮಸ್ಥರು ಮತ್ತು ಕೆಆರ್‌ಎಸ್ ಪಕ್ಷದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, “ಕನ್ನಡದ ಮೊಟ್ಟ ಮೊದಲ ವ್ಯಾಕರಣ ಕೃತಿಯನ್ನು ರಚಿಸಿರುವ ಕೇಶಿರಾಜನ ಕಾಯಕ ಭೂಮಿಯಾಗಿರುವ ಕೊಂಡಗೂಳಿ ಗ್ರಾಮದಲ್ಲಿ ಆತನ ಕುರುಹುಗಳು, ದೇಗುಲ, ಶಿಲ್ಪ ಕಲೆಗಳು ಮುಂತಾದ ಅವಶೇಷಗಳು ಐತಿಹಾಸಿಕ ಪ್ರಮುಖವಾಗಿವೆ. ಮುಂದಿನ ಪೀಳಿಗೆಗಾಗಿ ಈ ಕುರುಹುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ಈ ಭಾಗದ ರಾಜಕಾರಣಿಗಳ ಮತ್ತು ಅಧಿಕಾರಿಗಳ ತೀವ್ರ ನಿರ್ಲಕ್ಷಕ್ಕೆ ಒಳಗಾಗಿರುವ ಕೇಶಿರಾಜನ ಸ್ಮಾರಕವನ್ನು ಪುನಶ್ಚೇಚೇತನಗೊಳಿಸಿ ರಾಜ್ಯ ಸರ್ಕಾರ ಈ ಬಾರಿಯ ಕನ್ನಡ ರಾಜ್ಯೋತ್ಸವದ ತಿಂಗಳನ್ನು ಅರ್ಥಪೂರ್ಣವನ್ನಾಗಿ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಿಜಯೇಂದ್ರ ಬಿಜೆಪಿ ಅಧ್ಯಕ್ಷ ಆಯ್ಕೆ ಚುನಾವಣಾ ಗಿಮಿಕ್: ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ
ಮಡಿವಾಳಪ್ಪ ಕರದಾಳಿ, ಸಂತೋಷ ಅಗ್ನಿ ಚಿನ್ನಾರಡ್ಡಿ, ಮಲ್ಲಾಬಾದಿ ಶ್ರೀಶೈಲ ಚಳ್ಳಗಿ, ಕರಬಸಪ್ಪ ದೇಸಾಯಿ, ಮಲ್ಲಿಕಾರ್ಜುನ ಹೆಬ್ಬಾಳ ಸೇರಿದಂತೆ ಇತರರು ಇದ್ದರು.