ಬಾರ್‌ನಲ್ಲಿ ಮದ್ಯ ಸೇವನೆಗೆ ಹೋಗಿದ್ದ ವ್ಯಕ್ತಿ ನೀರು ಎಂಬುದಾಗಿ ಭಾವಿಸಿ ಮದ್ಯಕ್ಕೆ ಆ್ಯಸಿಡ್ ಬೆರೆಸಿಕೊಂಡು ಕುಡಿದು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಬಾರ್ ಮಾಲೀಕ, ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಿಜಯಪುರದ ನಿವಾಸಿ ಮಹಮ್ಮದ್ ಶಫೀಕ್ ಮೃತ ದುರ್ದೈವಿ. ಅವರು ನಗರದ ಸಿದ್ಧಾರ್ಥ್ ಬಾರ್‌ಗೆ ಮದ್ಯ ಸೇವನೆಗೆಗ ತೆಳಿದ್ದರು. ಈ ವೇಳೆ, ಗ್ರಾಹಕರು ಕುಳಿತುಕೊಳ್ಳುವ ಟೇಬಲ್ ಮೇಲೆ ಇಟ್ಟಿದ್ದ ಆ್ಯಸಿಡ್ಅನ್ನು ನೀರೆಂದು ಭಾವಿಸಿ ಮದ್ಯಕ್ಕೆ ಬೆರೆಸಿಕೊಂಡು ಕುಡಿದಿದ್ದಾರೆ. ಕೂಡಲೇ ಅವರಿಗೆ ಹೊಟ್ಟೆ ಉರಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಬಾರ್‌ನಲ್ಲಿ ನೆಲ ಸ್ವಚ್ಛಗೊಳಿಸಲು ಕ್ಲೀನಿಂಗ್ ಆ್ಯಸಿಡ್ಅನ್ನು ಬಾಟಲಿಯಲ್ಲಿ ತುಂಬಿಸಿ, ಟೇಬಲ್ ಮೇಲೆ ಇಟ್ಟಿದ್ದರು. ಅದನ್ನು ನೀರು ಎಂದು ಭಾವಿಸಿದ್ದ ಶಫೀಕ್ ಮದ್ಯದೊಂದಿಗೆ ಬೆರೆಸಿಕೊಂಡು ಕುಡಿದಿದ್ದಾರೆ ಎಂದು ತಿಳಿದುಬಂದಿದೆ.
ಶಫೀಕ್ ಸಾವಿಗೆ ಬಾರ್‌ನ ಮಾಲೀಕ, ಮ್ಯಾನೇಜರ್ ಹಾಗೂ ವೇಟರ್ ನಿರ್ಲಕ್ಷವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಶಫೀಕ್ ಅವರ ಪತ್ನಿ ದೂರು ದಾಲಿಸಿದ್ದಾರೆ. ಅವರದೂರಿನ ಆಧಾರದ ಮೇಲೆ ಬಾರ್ ಮಾಲೀಕ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್, ಮ್ಯಾನೇಜರ್ ಅಪ್ಪಾಸಾಬ್ ಮಮದಾಪೂರ, ವೇಟರ್ ಆನಂದ ಶಿಂಧೆ ವಿರುದ್ಧ ಬಿಎನ್ಎಸ್ ಸೆಕ್ಷನ್ 106(1), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.