ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಹಣಮಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ತೇಜಾ ಸಂಗಪ್ಪ ಕುಬಕಡ್ಡಿ, ಉಪಾಧ್ಯಕ್ಷೆಯಾಗಿ ಸರಸ್ವತಿ ನಿಂಗಪ್ಪ ಬಿರಾದಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ ಮುದ್ದಿನ ಘೋಷಿಸಿದರು.
ಒಟ್ಟು 18 ಸದಸ್ಯರ ಬಲಾಬಲದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಬ’, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರಗಳಿಗೆ ಶುಭಾಶಯ ಕೋರಿದರು.
ಇದನ್ನು ಓದಿದ್ದೀರಾ? ವಿಜಯಪುರ | ಆರೋಗ್ಯ ಪೂರ್ಣ ಸಮಾಜಕ್ಕೆ ದೇಶದ ಸಂವಿಧಾನವೇ ಅಡಿಗಲ್ಲು; ಗಾಯಕ ಜನಾರ್ದನ
ಕಾಂಗ್ರೆಸ್ ಮುಖಂಡ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ. ಪಕಾಲಿ, ತಾನಾಜಿ ನಾಗರಾಳ, ಗುರುನಗೌಡ ಬಿರಾದಾರ, ಸಂಗಪ್ಪ ಕುಬಕಡ್ಡಿ, ಮಹೇಶ ತೋಟಗೇರ, ಶ್ರೀಕಾಂತ ಗಣಿ, ಮುತ್ತು ಸಾಹುಕಾರ ಹಳ್ಳೂರ, ಸಂಗಮೇಶ ಚಲವಾದಿ ಇದ್ದರು.