ಕೃಷಿಮೇಳಗಳು ರೈತರ ಪಾಲಿಗೆ ಮಾಹಿತಿ ನೀಡುವ ಒಂದು ವ್ಯವಸ್ಥಿತ ಮಾರ್ಗವಾಗಿದೆ. ಕೃಷಿಯಲ್ಲಿ ಬದಲಾವಣೆ ಸಂದರ್ಭಕ್ಕೆ ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಬೇಕು” ಎಂದು ಕರ್ನಾಟಕ ರಾಜ್ಯ ಬೆಲೆ ಆಯೋಗದ ಅಧ್ಯಕ್ಷ ಡಾ. ಆರೋಕ ಎಮ್. ದಳವಾಯಿ ಹೇಳಿದರು.
ವಿಜಯಪುರ ಪಟ್ಟಣದ ಹೊರವಲಯದ ಹಿಟ್ನಳ್ಳಿ ಫಾರ್ಮದಲ್ಲಿ ನಡೆದ ಕೃಷಿಮೇಳದ ಸಮಾರೋಪ ಉದ್ದೇಶಿಸಿ ಮಾತನಾಡಿದರು.
“ರೈತರು ಪ್ರಸಕ್ತ ಸಂದರ್ಭದಲ್ಲಿ ಸಾವಯವ, ಸಿರಿಧಾನ್ಯ ಬೆಳೆಗಳನ್ನ ಬೆಳೆಯಬೇಕು. ನೈಸರ್ಗಿಕ ಕೃಷಿ ವಿಧಾನಗಳನ್ನು ಅನುಸರಿಸಬೇಕು. ರೈತರಿಗೆ ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕುವಂತೆ, ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು” ಎಂದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, “ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ಕಬ್ಬು ಹಾಗೂ ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತಮ ಮಾರ್ಗದರ್ಶನ ಈ ಕೃಷಿಮೇಳದಲ್ಲಿ ಸಿಕ್ಕಿದೆ ಎಂದುಕೊಂಡಿರುವೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಾಲುವೆಯಲ್ಲಿ ಈಜಲು ಹೋದ ಯುವಕ ನೀರುಪಾಲು
ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಅಶೋಕ ಸಜ್ಜನ ಸ್ವಾಗತಿಸಿ, ಕೃಷಿಮೇಳ ಕುರಿತು ವರದಿ ಮಂಡಿಸಿದರು. ಸಮಾರಂಭದಲ್ಲಿ ಕೃಷಿ ಸಹಾ ವಿಸ್ತರಣಾ ನಿರ್ದೇಶಕ ಡಾ. ರವಿ ಬೆಳ್ಳಿ, ಪಾರ್ವತಿ ಕುರ್ಲೆ,ಉಪ ಕೃಷಿ ನಿರ್ದೇಶಕ ಡಾ. ಪ್ರಕಾಶ ಚವ್ಹಾಣ ಡಾ.ಎಸ್.ವೈ. ನಾಡಗೌಡ, ಸರದೇಶಪಾಂಡೆ, ಡಾ. ಶೋಭಾ ನಾಗನೂರ, ಡಾ. ಎಮ್. ವಾಯ್. ತೆಗಿ, ಡಾ. ಎಸ್. ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ರೈತಭಾಂದವರು, ಆಗಮಿಸಿದ ರೈತಭಾಂದವರು, ಕೃಷಿ ವಿದ್ಯಾರ್ಥಿಗಳು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಪಾಟೀಲ, ಎಮ್. ಎಸ್. ರುದ್ರ ಗೌಡದ’, ಪ್ರಗತಿಪರ ರೈತ ಭಾಗವಹಿಸಿದ್ದರು.
