ಸಮಾಜದಲ್ಲಿ ನಾವೆಂಥ ಸ್ಥಾನಕ್ಕೆ ಏರಿದರೂ ನಮ್ಮ ಕುಟುಂಬದ ಹಿರಿಯ ಜೀವಿಗಳನ್ನು ಮರೆಯಬಾರದು ಎಂದು ಜ್ಞಾನ ಯೋಗಾಶ್ರಮದ ಜ್ಞಾನಾನಂದ ಸ್ವಾಮೀಜಿ ಹೇಳಿದರು.
ವಿಜಯಪುರ ನಗರದ ಬಿಎಲ್‌ಡಿ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ʼಅಲ್ಲಮ ಪ್ರಭುʼ ಜಯಂತಿ ಅಂಗವಾಗಿ ನಡೆದ ದತ್ತಿ ಕಾರ್ಯಕ್ರದಲ್ಲಿ ಮಾತನಾಡಿದರು.
“ವಚನಗಳಲ್ಲಿ ಆಧ್ಯಾತ್ಮ ಮತ್ತು ತಾತ್ವಿಕ ವಿಚಾರಗಳಿಗೆ ಹೆಚ್ಚಿನ ಮಹತ್ವವಿದೆ. ಅವುಗಳಿಗೆ ಇಂದಿಗೂ ಸರ್ವಕಾಲಿಕ
ಅಲ್ಲಮಪ್ರಭು, ಬಸವಣ್ಣ, ಶರಣ, ಶರಣೆಯರು ಭಕ್ತಿ ವೈರಾಗ್ಯವನ್ನು ಬೋಧಿಸಿದವರು. ಅಂತರಂಗ ಬಹಿರಂಗವನ್ನು ಶೋಧಿಸಲು ಯತ್ನಿಸಿದವರು. ಆದರೆ ಪ್ರಸ್ತುತ ಜಗತ್ತು ಸದಾ ಮೊಬೈಲ್‌ನಲ್ಲಿಯೇ ಮುಳುಗಿದ್ದು, ಗ್ರಹಿಸುವ ಆಸಕ್ತಿ ಇಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಹಿಳಾ ಪೌರ ಕಾರ್ಮಿಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮಾರ್ಚ್ 28 ರಂದು ‘ ಮಹಿಳಾ ದಿನಾಚರಣೆ ‘
ಈ ಕಾರ್ಯಕ್ರಮದಲ್ಲಿ ಶ್ರೀ ಜ್ಞಾನಾನಂದ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬೂನಾಥ್ ಕಂಚ್ಯಾಣಿ ಹಾಗೂ ವಕೀಲರೂ ದಾಸೋಹಿಗಳೂ ಆದ ಡಿ ಎಸ್ ಪಾಟೀಲ್, ಎಲ್ ಎಚ್ ಬಿದ್ರಿ, ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ ಆರ್ ಎಂ ಮೀರ್ದೆ ಹಾಗೂ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.