ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ದಲಿತ ದಮನಿತರ ಧ್ವನಿ, ಸಾಹಿತಿ ಅನಿಲ ಹೊಸಮನಿ ಅವರಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಜುಲೈ 13ರ ಭಾನುವಾರ ಬೆಳಿಗ್ಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಲಡಾಯಿ ಪ್ರಕಾಶನದ ಬಸವರಾಜ ಸುಳಿಬಾವಿ ಹೇಳಿದರು.
ವಿಜಯಪುರ ನಗರದ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ವಿಜಯಪುರದ ಮೇ ಸಾಹಿತ್ಯ ಮೇಳ ಬಳಗದಿಂದ ನಡೆಯಲಿರುವ ಅನಿಲ ಎಂಬ ಬಿಸಿಲ ನೆಲದ ಸಂಘರ್ಷದ ಒಡನಾಡಿಯೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮದಲ್ಲಿ ಬಿ. ಶ್ರೀನಿವಾಸ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಉದ್ಘಾಟನೆಯನ್ನು ಮುಂಬಯಿಯ ವಿಜಯ ಸುರ್ವಾಡೆ ಮುಂಬಯಿ ನೇರವೇರಿಸುವರು. ಡಾ. ಮೂಡ್ನಾಕೂಡ ಚಿನ್ನಸ್ವಾಮಿಯವರು ‘ಡಾ. ಅಂಬೇಡ್ಕರ್ ಸಹವಾಸದಲ್ಲಿ’ ಪುಸ್ತಕದ 2ನೇ ಆವೃತ್ತಿ ಬಿಡುಗಡೆ ನೇರವೇರಿಸುವರು.
ಮುಖ್ಯ ಅತಿಥಿಗಳಾಗಿ ಡಾ. ಆರ್ ಸುನಂದಮ್ಮ, ರಾಜು ಅಲಗೂರ ಆಗಮಿಸುವರು. ಅಧ್ಯಕ್ಷತೆಯನ್ನು ರಾಜಶೇಖರ ಯಡಹಳ್ಳಿ ವಹಿಸುವರು. ಶೋಭಾ ಕಟ್ಟಿಮನಿ ಹೊಸಮನಿ ಉಪಸ್ಥಿತರಿರುವ. ಸುಜಾತ ಚಲವಾದಿ ಉಪನ್ಯಾಸ ನೀಡುವರು. ಮೋಹನ ಕಟ್ಟಿಮನಿ ಸಂಯೋಜಿಸುವರು. ಬಳಿಕಾ ಅಭಿಷೇಕ ಚಕ್ರವರ್ತಿಯವರಿಂದ ವಿಜಾಪುರ ಜಿಲ್ಲೆಯ ದಲಿತ ಚಳವಳಿ ಮತ್ತು ಅನಿಲ ಹೊಸಮನಿ ಎಂಬ ವಿಚಾರಗೋಷ್ಠಿ ನಡೆಸಿಕೊಡುವರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಅಧಿಕಾರಿಗಳ ಕಣ್ತಪ್ಪಿಸಿ ಮುನಗನಹಳ್ಳಿ ಕೆರೆಯ ಮಣ್ಣು ಅಕ್ರಮ ಸಾಗಣೆ: ಕ್ರಮಕ್ಕೆ ಒತ್ತಾಯ
ಅದಾದ ನಂತರ ಹಣಮಂತ ಚಿಂಚೋಳಿ ಇವರಿಂದ ಅನಿಲ ಹೊಸಮನಿ: ಜನಪರ ಚಳವಳಿಗಳ ಒಡನಾಟ, ಡಾ.ಓಂಕಾರ ಕಾಕಡೆ ಇವರಿಂದ ಅನಿಲ ಹೊಸಮನಿ: ಪತ್ರಿಕಾ ಬರಹ- ಬದುಕು ಎಂಬ ವಿಚಾರ ಗೋಷ್ಠಿ ನಡೆಯಲಿವೆ. ಸಾಯಂಕಾಲ ಅನಿಲ ಹೊಸಮನಿಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಬಳಿಕ ಗೌರವಾರ್ಪಣೆ ಮತ್ತು ಸಮಾರೋಪ ಹಾಗೂ ಒಡನಾಡಿಗಳ ಮಾತು ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅಭಿಷೇಕ್ ಚಕ್ರವರ್ತಿ, ರಾಜಶೇಖರ ಯಡಹಳ್ಳಿ, ಚೆನ್ನು ಕಟ್ಟಿಮನಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ಲು, ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ ಇದ್ದರು.