ವಿಜಯಪುರ ವಾರ್ಡ್ ನಂ:28 ರಲ್ಲಿ ಮಹಾನಗರ ಪಾಲಿಕೆ ವತಿಯಿಂದ ಆಗಬೇಕಾದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆಮ್ ಆದ್ಮಿ ಪಕ್ಷದ ವಿಜಯಪುರ ನಗರ ಉಪಾಧ್ಯಕ್ಷ ಆಮೀರ್ ಸೊಹೈಲ್ ಪಟೇಲ್ ಅವರ ನೇತೃತ್ವದಲ್ಲಿ ಇಂದು ರಸ್ತೆ ತಡೆದು, ಟಯರ್ʼಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಯಿತು.
ಕಳೆದ 10-12 ವರ್ಷಗಳಿಂದ ವಾರ್ಡಿನ ಜನತೆಗೆ ಮೂಲಭೂತ ಸೌಕರ್ಯಗಳಾದ ಶುದ್ಧ ನೀರು, ರಸ್ತೆ, ಬೀದಿ ದೀಪಗಳು ಹಾಗೂ ಸರಿಯಾದ ಒಳಚರಂಡಿ ವ್ಯವಸ್ಥೆ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಜನ ಹೈರಾಣಾಗಿದ್ದಾರೆ. ಬೀದಿ ನಾಯಿ ಮತ್ತು ದನಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರು ಓಡಾಡಲು ಭಯಪಡುವಂತಾಗಿದೆ. ಆದರೂ ಪಾಲಿಕೆ ಕಣ್ಮುಚ್ಚಿ ಕೂತಿದೆ ಎಂದು ಹರಿಹಾಯ್ದರು.

ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅವರು, “ವಾರ್ಡಿನ ನಾಗರಬಾವಡಿ ಪ್ಲಾಟ್ ಹಾಗೂ ತಾಜುದ್ದೀನ್ ಹೋಟೆಲ್ ದಿಂದ ಸರ್ಕಾರಿ ಬಾಲಕಿಯರ ಶಾಲೆ ನಂ: 4 ರ ವರೆಗಿನ ರಸ್ತೆಗಳು ಅತಿಕ್ರಮಣಗೊಂಡಿದ್ದು, ಅತಿಕ್ರಮಣ ತೆರವುಗೊಳಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು” ಎಂದು ಪಾಲಿಕೆ ಆಯುಕ್ತರಿಗೆ ಮನವಿ ಕೊಡುವ ಮೂಲಕ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲನ ಬಂಧನ
