ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ವಿಜಯಪುರ ಜಿಲ್ಲೆಯ 13 ಗ್ರಾಮಗಳಲ್ಲಿ ಏ.5 ರಂದು ಬೆಳಗ್ಗೆ 11ಕ್ಕೆ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ವಿಜಯಪುರದ ಉಪ ವಿಭಾಗಾಧಿಕಾರಿಗಳು; ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು; ಇಂಡಿ ತಾಲೂಕಿನ ಶಿರಗೂರ ಇನಾಂ ಗ್ರಾಮದ ಸದ್ಧಬೀರ ದೇವಸ್ಥಾನದಲ್ಲಿ, ವಿಜಯಪುರದ ತಹಸೀಲ್ದಾರ್; ವಾರ್ಡ್ ನಂ.18ರ ಗೋಲಗುಂಬಜ್ ಬಳಿಯ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ, ತಿಕೋಟಾ ತಹಸೀಲ್ದಾರ್; ಬರಟಗಿ ಗ್ರಾಮದ ಅಮೋಘ ಸಿದ್ದೇಶ್ವರ ದೇವಸ್ಥಾನದಲ್ಲಿ, ಬಸವನಬಾಗೇವಾಡಿಯ ತಹಸೀಲ್ದಾರ್; ಹತ್ತರಕಿಹಾಳ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ನಿಡಗುಂದಿ ತಹಸೀಲ್ದಾರ್; ಬ್ಯಾಲ್ಯಾಳ ಗ್ರಾಮದ ಸಮುದಾಯ ಭವನದಲ್ಲಿ, ಕೊಲ್ದಾರ ತಹಸೀಲ್ದಾರ್; ಮಟ್ಟಿಹಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ, ಮುದ್ದೇಬಿಹಾಳ ತಹಸೀಲ್ದಾರ್; ಹುಲ್ಲೂರ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಮತ್ತು ತಾಳಿಕೋಟೆ ತಹಸೀಲ್ದಾರ್; ತಾಳಿಕೋಟೆ ಪಟ್ಟಣದ ವಾರ್ಡ್ ನಂ.9ರ ವ್ಯಾಪ್ತಿಯ ಮಾರುತಿ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸುವರು. ಚಡಚಣ ತಹಸೀಲ್ದಾರ್; ಕೊಂಕಣಗಾಂವ ಗ್ರಾಮದ ಹಿರೋಡೇಶ್ವರ ದೇವಸ್ಥಾನದಲ್ಲಿ, ಸಿಂದಗಿ ತಹಸೀಲ್ದಾರ್; ಢವಳಾರ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ, ದೇವರಹಿಪ್ಪರಗಿ ತಹಸೀಲ್ದಾರ್; ಸಲಾದಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಆಲಮೇಲ ತಹಸೀಲ್ದಾರ್; ಕಡ್ಲೆವಾಡ ಪಿ.ಎ.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಇದನ್ನೂ ಓದಿ: ವಿಜಯಪುರ | ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹ
ಪಿಂಚಣಿ ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆ ಪಿಂಚಣಿ ಫಲಾನುಭವಿಗಳಿಗೆ ಎನ್‌ಪಿಸಿಐ ಮ್ಯಾಪಿಂಗ್ ಕಾರ್ಯವನ್ನು ಸಂಬಂಧಿಸಿದ ಬ್ಯಾಂಕ್, ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದೊಂದಿಗೆ ತಪ್ಪದೆ ಮಾಡಿಸುವಂತೆ ಹಾಗೂ ಪಿಂಚಣಿ ಅದಾಲತ್‌ನಲ್ಲಿ ಪಿಂಚಣಿದಾರರ ಮಾಹಿತಿಯೊಂದಿಗೆ ಎಲ್ಲ ಗ್ರಾಮಗಳ ಗ್ರಾಮ ಲೆಕ್ಕಿಗರು, ಪಂಚಾಯಿತಿ ಕಾರ್ಯದರ್ಶಿಗಳು, ಪಿಡಿಒಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.