ವಿಜಯಪುರ | ಕಾವ್ಯವೆಂದರೆ ಹೀಗಿರಬೇಕು.. ಸಾಹಿತಿ ದೊಡ್ಡಣ್ಣ ಭಜಂತ್ರಿ ಉವಾಚ

Date:

ಸಾಹಿತ್ಯದ ಎಲ್ಲಾ ಪ್ರಕಾರಗಳಿಗಿಂತ ಕಾವ್ಯ ಪ್ರಕಾರವು ಬೇಗನೆ ಜನಮನ ಮುಟ್ಟುತ್ತದೆ. ಕಾವ್ಯಗಳು ಜನರಿಗೆ ಸಂದೇಶ ಕೊಡುವಂತಿರಬೇಕು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕು ಎಂದು ಹಿರಿಯ ಸಾಹಿತಿ ದೊಡ್ಡಣ್ಣ ಭಜಂತ್ರಿ ಅಭಿಪ್ರಾಯಪಟ್ಟರು.

- Advertisement -

ವಿಜಯಪುರದ ಕರ್ನಾಟಕ ಲೇಖಕಿಯರ ಸಂಘವು ನಗರದ ವನಿತಾ ಉತ್ಕರ್ಷ ಮಂಡಳಿಯಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿಉದ್ದ ಕವಿಗೋಷ್ಠಿ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕಾವ್ಯ ಪ್ರಕಾರವು ಬಹು ಬೇಗನೇ ಜನಮಾನಸದಲ್ಲಿ ನಿಲ್ಲುತ್ತದೆ. ದಲಿತ, ಬಂಡಾಯ ಸಾಹಿತ್ಯವೇ ಇದಕ್ಕೆ ಸಾಕ್ಷಿ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಕರ್ನಾಟಕದ ಲೇಖಕಿಯರ ಸಂಘದ ಕಾರ್ಯದರ್ಶಿ ಡಾ.ಸುಜಾತಾ ಚಲವಾದಿ ಮಾತನಾಡಿ, “ದಿನನಿತ್ಯದ ಬದುಕಲ್ಲಿ ಮಹಿಳೆಯ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಮಹಿಳೆ ಜಾಗೃತಳಾಗಬೇಕು ಹಾಗೇ ಸಂಘಟಕಳಾಗಬೇಕು ಆಗ ಮಹಿಳಾ ದಿನಾಚರಣೆಯಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ” ಎಂದರು.

ಬಾದಾಮಿಯ ಹಿರಿಯ ಲೇಖಕಿ ಜಯಶ್ರೀ ಭಂಡಾರಿ ಅವರು ಮಾತನಾಡಿ, “ಸುನಿತಾ ವಿಲಿಯಮ್ಸ್, ಇಂದಿರಾಗಾಂಧಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ಜೀಜಾಮಾತೆ, ಸ್ವಾತಂತ್ರ್ಯದ ಕಿಡಿ ಹಚ್ಚಿದ ಕಿತ್ತೂರುರಾಣಿ ಚೆನ್ನಮ್ಮಾದಿಯಾಗಿ ಮಹಿಳೆಯರು ಎಲ್ಲ ರಂಗದಲ್ಲೂ ಮುಂದಿದ್ದಾರೆ, ಮಾದರಿಯಾಗಿದ್ದಾರೆ. ಕಾಲ ಕಾಲಕ್ಕೆ ನಡೆಯುವ ಆಪತ್ತುಗಳನ್ನು ಎದುರಿಸಲು ಇಂಥ ಮಹಿಳೆಯರೇ ಸ್ಪೂರ್ತಿಯಾಗಿದ್ದಾರೆ. ಜಾನಪದವು ಎಲ್ಲ ಸಾಹಿತ್ಯದ ತಾಯಿಬೇರಾಗಿದ್ದು, ಇದು ಅನಕ್ಷರ ಮಹಿಳೆಯರಿಂದ ರಚಿಸಲ್ಪಟ್ಟಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವವರು ಹೆಣ್ಣು ಮಕ್ಕಳೇ” ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಕ್ಷಾಯಿಣಿ ಹುಡೇದ ಮಾತನಾಡಿ, “ಹೆಣ್ಣು ಮತ್ತು ಗಂಡಿನಲ್ಲಿ ಜೈವಿಕ ವ್ಯತ್ಯಾಸ ಬಿಟ್ಟರೆ ಉಳಿದಂತೆ ಎಲ್ಲದರಲ್ಲಿಯೂ ಸಮಾನರು. ಮಹಿಳೆಯರ ಉಡುಗೆ ತೊಡುಗೆ, ಬದುಕಿನ ನಿರ್ಧಾರಗಳ ಮೇಲೆಲ್ಲಾ ಪುರುಷ ಪಾರಮ್ಯ ಯಾಕೆ? ನಮಗೆ ಬೇಕೆ ಇದು ಎಂಬ ಜಿಜ್ಞಾಸೆಯೊಂದಿಗೆ ಮಹಿಳೆಯು ವೈಚಾರಿಕತೆಗೆ ಮಹತ್ವ ಕೊಡಬೇಕು. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.

ಹಲಸಂಗಿ ಗೆಳೆಯರ ಟ್ರಸ್ಟ್ ನ ಸದಸ್ಯರಾದ ದಾಕ್ಷಾಯಿಣಿ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಲತಾ ವಸ್ತ್ರದವರು ಮಾತನಾಡಿ, “ಕಾಲದ ಕುಲುಮೆಯಲ್ಲಿ ಬೆಂದು ಉಳಿದದ್ದು ಮಾತ್ರ ಗಟ್ಟಿ ಕಾವ್ಯ. ಕವಿಗೆ ಅಧ್ಯಯನಶೀಲತೆ ಅಗತ್ಯ. ವ್ಯಾಪಕ ಓದು ಇರಬೇಕು. ಪರಕಾಯ ಪ್ರವೇಶ ಮಾಡಿ ಬರೆಯಬೇಕಾಗುತ್ತದೆ. ಬರಹವೆಂದರೆ ಅದೊಂದು ಧ್ಯಾನ, ತಪಸ್ಸು ಇದ್ದಂತೆ. ಜೊತೆಗೆ ಒಳ್ಳೆಯ ಕಿವಿಯಾದರೆ ಮಾತ್ರ ಸಶಕ್ತ ಕವಿಯಾಗಬಹುದು” ಎಂದರು.

ಕವಿಗೋಷ್ಠಿಯಲ್ಲಿ ಮೀನಾಕ್ಷಿ ಪಾಟೀಲ, ಸಿದ್ಧಾರೂಢ ಕಟ್ಟೀಮನಿ, ಗೀತಾ ಕುದುರಕರ್, ಲಕ್ಷ್ಮಿ ತೊರವಿ, ಭಾಗ್ಯಶ್ರೀ ಸಕನಾದಗಿ, ರುಕ್ಮಿಣಿ ಅಗಸರ, ಶಾನುಬಿ ಮುಜಾವರ್, ದಿವ್ಯಪಾರ್ವತಿ ಹಸ್ಮಕಲ್, ರುದ್ರಮ್ಮ ಗಿಡ್ಡಪ್ಪಗೋಳ, ಸದ್ದಾಂ ಮುಜಾವರ್, ಪ್ರಿಯಾ ಹರಿದಾಸ್, ಶೋಭಾ ಕಬಾಡೆ, ವಿಶಾಲಾಕ್ಷಿ ಪಾಟೀಲ, ಸುನಂದಾ ಕೋರಿ, ಶಶಿಕಲಾ ಬುಯ್ಯಾರ,  ದೀಪಾ ಗೊಣಸಗಿ, ಧನಲಕ್ಷ್ಮಿ ದೊಡ್ಡಮನಿ, ವಿಜಯಲಕ್ಷ್ಮಿ ದಿವಾನಜಿ,  ಎಲ್ಲರೂ ಮಹಿಳಾ ಪರವಾದ ಹಾಗೂ ಮಹಿಳಾ ಸಂವೇದನೆಯುಳ್ಳ ಕವಿತೆಗಳನ್ನು ವಾಚಿಸಿದರು.

ಇದನ್ನೂ ಓದಿ: ವಿಜಯಪುರ | ಬಜೆಟ್‌ ಕುರಿತು ಬಿಜೆಪಿ ಟೀಕೆ; ತಿರುಗೇಟು ಕೊಟ್ಟ ಕೆಪಿಸಿಸಿ ವಕ್ತಾರ ಗಣಿಹಾರ

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಇಂದುಮತಿ ಲಮಾಣಿ, ಖ್ಯಾತ ಗಜಲ್ಕಾರ್ತಿ ಪ್ರಭಾವತಿ ದೇಸಾಯಿ, ಅನುರಾಧಾ ಅಡುರಾಜೂರ, ನಿವೃತ್ತ ಡೈಟ್ ಉಪನ್ಯಾಸಕ ಆರ್ ವೈ ಕೊಣ್ಣೂರ, ರವಿ ಗೋಲಾ, ಎಸ್ ಎಸ್ ಬಬಲೇಶ್ವರ, ಚೆನ್ನಪ್ಪ ಹಂಚಿನಾಳ, ಮಿನಾಜಬೇಗಂ ಸುಂಬಡ ಸೇರಿ ಹಲವರು ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭೀಕರ ಅಪಘಾತ: ಇಬ್ಬರಿಗೆ ಗಂಭೀರ 

ವಾಹನ ಅಪಘಾತ,ಜೆಸಿಬಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು...

ಬಾಗೇಪಲ್ಲಿ: ಅಂತರರಾಜ್ಯ ಮಟ್ಟದ ಬಹುಭಾಷಾ ದಸರಾ ಕವಿಗೋಷ್ಠಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಪಟ್ಟಣಕ್ಕೆ ಸಮೀಪದ ಗಡಿದಂ ರಾಜರಾಜೇಶ್ವರಿ...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...