ವಿಜಯಪುರ | ಬಜೆಟ್‌ ಕುರಿತು ಬಿಜೆಪಿ ಟೀಕೆ; ತಿರುಗೇಟು ಕೊಟ್ಟ ಕೆಪಿಸಿಸಿ ವಕ್ತಾರ ಗಣಿಹಾರ

Date:

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವರಿಗೂ ಸಮಪಾಲು ಎಂಬ ನೀತಿಯಡಿ ಬಜೆಟ್ ಮಂಡಿಸಿದ್ದಾರೆ. ಆದರೆ, ಪ್ರತಿಪಕ್ಷ ಬಿಜೆಪಿಯವರು ‘ಹಲಾಲ್’ ಪದದ ಅರ್ಥ ಗೊತ್ತಿಲ್ಲದೆಯೇ ‘ಹಲಾಲ್ ಬಜೆಟ್’ ಎಂದು ಟೀಕಿಸಿದ್ದಾರೆ. ‘ಹಲಾಲ್’ ಎಂದರೆ ಪ್ರಮಾಣೀಕೃತ, ಕಾನೂನು ಬದ್ಧ ಎಂಬ ಅರ್ಥ ಹೊಂದಿದೆ. ಹಾಗಾದರೆ, ಬಿಜೆಪಿಯುವರು ಇದೊಂದು ಉತ್ತಮ ಬಜೆಟ್ ಎಂಬುವುದಾಗಿ ಒಪ್ಪಿಕೊಂಡಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಬಿಜೆಪಿಗರಿಗೆ ತಿರುಗೇಟು ನೀಡಿದರು.

- Advertisement -

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿಎಂ ಬಜೆಟ್ ಭಾಷಣ ಓದಿ ಮುಗಿಸುವ ಮೊದಲೇ ಮುಸ್ಲಿಮರ ಬಗ್ಗೆ ಟೀಕೆ ಮಾಡಲು ಬಿಜೆಪಿಯವರಿಗೆ ಆತುರ ಇತ್ತು. ಹೀಗಾಗಿಯೇ ಹಲಾಲ್ ಪದದ ಅರ್ಥವನ್ನೂ ತಿಳಿದುಕೊಳ್ಳದೇ ಹಲಾಲ್ ಬಜೆಟ್ ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ, ಪ್ರಧಾನಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕಡಿಮೆ ಅನುದಾನ ಸಿಕ್ಕಿರುವ ಬಗ್ಗೆ ರಾಜ್ಯ ಬಿಜೆಪಿಯವರು ಧ್ವನಿ ಎತ್ತಿದ್ದರೆ, ಪ್ರಧಾನಿಯವರ ಘೋಷಣೆಯಾದರೂ ಸಾಕಾರವಾಗುತ್ತಿತ್ತು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ 4.5 ಸಾವಿರ ಕೋಟಿ ರೂ. ಮೀಸಲಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ನಂತರ ಮುಸ್ಲಿಂ ಸಮುದಾಯವೇ ದೊಡ್ಡದಾಗಿದೆ. ವಾಸ್ತವವಾಗಿ ಅಲ್ಪಸಂಖ್ಯಾತ ಸಮಯದಾಯಕ್ಕೆ 20 ಸಾವಿರ ಕೋಟಿ ರೂ. ಅನುದಾನ ನೀಡಬೇಕಾಗಿತ್ತು. ಅಲ್ಲದೇ, ಜಮೀರ್ ಅಹ್ಮದ್ ಖಾನ್ ಬಜೆಟ್ ಮಂಡನೆ ಮಾಡಿದಂತಿದೆ ಎಂದೂ ಬಿಜೆಪಿಯವರು ಟೀಕಿಸಿದ್ದಾರೆ. ಮುಂದೊಂದು ದಿನ ಜಮೀರ್ ಸಹ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದರೂ ಅಚ್ಚರಿ ಇಲ್ಲ ಇದರೊಂದಿಗೆ ಬಿಜೆಪಿ ಬಯಕೆ ಸಹ ಈಡೇರಬಹದು” ಎಂದು ತಿರುಗಿ ಟೀಕಿಸಿದರು.

ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, “ರಾಜ್ಯದಲ್ಲಿ ವಿರೋಧ ಪಕ್ಷವೇ ಸರಿಯಿಲ್ಲ. ಈ ಸ್ಥಾನವನ್ನು ನಿಭಾಯಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಬಿಜೆಪಿಯವರಿಗೆ ಬಜೆಟ್ ಎಂದರೆ ಗೊತ್ತಿಲ್ಲ, ಬಜೆಟ್ ಅಭ್ಯಾಸ ಮಾಡಿಲ್ಲ. ರಾಜ್ಯ ಬಿಜೆಪಿ ನಾಯಕರಿಗೆ ಕೇವಲ ಹಿಜಾಬ್, ಹಲಾಲ್, ಹಿಂದೂ, ಮುಸ್ಲಿಂ ಜಗಳವೇ ಉಸಿರಾಟವಾಗಿದೆ. ಗ್ಯಾರಂಟಿ ಅನುದಾನ ಬಳಸಿಕೊಂಡಂತೆ ಅಲ್ಪಸಂಖ್ಯಾತ ಸಮುದಾಯದ ಹಣ ಬಳಸಿಕೊಳ್ಳಲಿ ಎಂದು ಮುತ್ಸದ್ದಿ ರಾಜಕಾರಣಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಹೇಳಿಕೆ ನೀಡಿದ್ದು ಸರಿಯಲ್ಲ. ಮುಸ್ಲಿಂ ಬೆಂಬಲದಿಂದಲೇ ರಾಜಕೀಯ ಪ್ರವೇಶ ಮಾಡಿದ್ದನ್ನು ಅವರು ಮರೆಯಬಾರದು. ಇತಿಹಾಸದಲ್ಲಿ ಇಂತಹ ವಿರೋಧ ಪಕ್ಷವನ್ನು ನೋಡಿಲ್ಲ ಕೇವಲ ಜಟಕಾ, ಹಲಾಲ್ ಎಂಬ ವಿಷಯವನ್ನೇ ಜನರ ಮುಂದೆ ತರುವ ಬಿಜೆಪಿಯುವರು ತಮ್ಮ ಪಕ್ಷವನ್ನು ಭಾರತೀಯ ಜನತಾ ಪಾರ್ಟಿ ಬದಲಿಗೆ ಭಾರತೀಯ ಜಟಕಾ ಪಾರ್ಟಿ ಎಂದು ಬದಲಾಯಿಸಿಕೊಳ್ಳಬೇಕು” ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಿಜಯಪುರ | ಬೆಟ್ಟಿಂಗ್‌ ಆ್ಯಪ್‌ಗಳನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗೆ ಮನವಿ

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಸಂತ ಹೊನಮೋಡೆ, ನಾಗರಾಜ ಲಂಬು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ದಸರಾ ವೀಕ್ಷಣೆಗೆ ಗೋಲ್ಡ್ ಕಾರ್ಡ್, ಆನ್ಲೈನ್‌ ಟಿಕೆಟ್ ಬುಕಿಂಗ್‌ ಆರಂಭ

ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಮೈಸೂರು ಜಿಲ್ಲಾಡಳಿತ ಇಂದಿನಿಂದ (ಸೆಪ್ಟೆಂಬರ್ 21)...

ಬಾಗಲಕೋಟೆ | ಗ್ರಾಮ ಒನ್ ಫ್ರಾಂಚೈಸಿಗಳಿಗೆ ಮೂಲಸೌಲಭ್ಯ, ರಕ್ಷಣೆ ನೀಡುವಂತೆ ಆಗ್ರಹ

ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗ್ರಾಮ ಒನ್ ಫ್ರಾಂಚೈಸಿಗಳಿಗೆ ಅಗತ್ಯ...

ಗದಗ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಸಿಎಂಗೆ ಎಚ್.ಕೆ.ಪಾಟೀಲ್ ಪತ್ರ

ಗದಗ ತಾಲೂಕನ್ನು ಬರಪಟ್ಟಿಗೆ ಸೇರಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ...

ಧಾರವಾಡ | ಕೃಷಿ ಮೇಳದಲ್ಲಿ ಫಲಪುಷ್ಪ ಪ್ರದರ್ಶನ

ಕೃಷಿ ವಿವಿಯಲ್ಲಿ ಸೆ.25ರಿಂದ 28ರವರೆಗೆ ನಡೆಯುವ ಕೃಷಿ ಮೇಳದಲ್ಲಿ ಹೈಟೆಕ್ ತೋಟಗಾರಿಕೆ...