ಸಂಚಾರ ನಿರ್ವಹಣೆ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಪ್ರಾಣಾಪಾಯದಿಂದ ಮೂವರನ್ನು ರಕ್ಷಿಸಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದಿದೆ.
ನಗರದ ಬಸವೇಶ್ವರ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಇಬ್ರಾಹಿಂ ಅವಟಿ ಅವರ ಸಮಯ ಪ್ರಜ್ಞೆಯಿಂದ ಮೂವರ ಜೀವ ಉಳಿದಿದೆ. ವೃತ್ತದ ಬಳಿಯ ರಸ್ತೆಯಲ್ಲಿ ಕಡಿ ತುಂಬಿದ ಟಿಪ್ಪರ್ ಲಾರಿಯೊಂದು ವೇಗವಾಗಿ ಬರುತ್ತಿತ್ತು. ಅದನ್ನು ಗಮನಿಸದೇ ವೃದ್ಧ ದಂಪತಿ ಮತ್ತು ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದರು. ಇದನ್ನು ಗಮನಿಸಿದ ಪೇದೆ ಆ ಮೂವರನ್ನೂ ರಸ್ತೆ ಬದಿಗೆ ನೋಕಿದ್ದಾರೆ. ಮೂವರೂ ರಸ್ತೆ ಬದಿಗೆ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟಿಪ್ಪರ್‌ನ ಟಯರ್ ಸ್ಫೋಟಗೊಂಡು ಟಯರ್‌ನ ಚೂರು ಇಬ್ರಾಹಿಂ ಅವರ ಕಾಲಿಗೆ ತಗುಲಿ ಗಾಯವಾಗಿದೆ. ಇಬ್ರಾಹಿಂ ಅವರ ಸಮಯಪ್ರಜ್ಞೆಗೆ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.