ಪ್ರತಿ ವರ್ಷದಂತೆ ಪ್ರಸ್ತುತ ವರ್ಷದಲ್ಲಿಯೂ ಕೂಡ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಹಾಗೂ ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಆಚರಿಸುತ್ತಿದ್ದೇವೆ. ನನ್ನ ನೇತೃತ್ವದಲ್ಲಿ ಇದು ಐದನೇ ವರ್ಷದ ಕಾರ್ಯಕ್ರಮವಾಗಿದೆ. ಹಾಗಾಗಿ ನಾವು ಈಗ ವಿಶೇಷವಾಗಿ ಆಚರಿಸಬೇಕಾಗಿದೆ ಎಂದು ಡಿವಿಪಿ ಮುಖಂಡ ಅಕ್ಷಯ್ ಕುಮಾರ್ ಅಜಮನಿ ತಿಳಿಸಿದರು.
ವಿಜಯಪುರ ನಗರದ ಸರ್ಕಾರಿ ನೌಕರ ಸಂಘದ ಭವನದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಮತ್ತು ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆ ನಡೆಸಿದರು.
“ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಣ್ಯರು ಕಾರ್ಯಕ್ರಮಕ್ಕೆ ಬರುವುದರಿಂದ ನಾವು ತುಂಬಾ ಅಚ್ಚುಕಟ್ಟಾಗಿ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು ಬೆಂಬಲ ನೀಡಿರುವುದು ನಮಗೆ ದೊಡ್ದ ಶಕ್ತಿ ಸಿಕ್ಕಂತಾಗಿದೆ. ಬೆಂಬಲ ನೀಡಿರುವ ಎಲ್ಲ ಸಂಘಟನೆಗಳಿಗೆ ಧನ್ಯವಾದಗಳು. ಹಾಗೆಯೇ ನಮ್ಮ ಡಿವಿಪಿ ಸಂಘಟನೆಯ ಎಲ್ಲ ಸದಸ್ಯರೂ ಕೂಡ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ರೈತರ ದಿನಾಚರಣೆ ಮಾಡಿದರೆ ಸಾಲದು, ರೈತರ ಹಕ್ಕಿಗೆ ಹೋರಾಟ ಮಾಡಿ: ಅಯ್ಯಣ್ಣ ಹಾಲಬಾವಿ
ಈ ಸಂಧರ್ಭದಲ್ಲಿ ಸತೀಶ್ ಅಂಜುಟಗಿ, ಮಾದೇಶ ಚಲವಾದಿ, ಆನಂದ ಮುದುರ, ಯುವರಾಜ್, ಆಕಾಶ್, ಪ್ರಕಾಶ, ಶಿಲ್ಪಾ ವಾಲ್ಮೀಕಿ, ಪ್ರೀತಿ, ಸಾವಿತ್ರಿ ಸೇರಿದಂತೆ ಬಹುತೇಕರು ಇದ್ದರು.