“ಆಳುವ ಸರ್ಕಾರಗಳು ಸಾರ್ವಜನಿಕ ನ್ಯಾಯ ಕೊಟ್ಟಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕ, ಶೋಷಿತ ಸಮುದಾಯದ ಪರ ಎಂದು ಹೇಳುತ್ತಾ ಮೇಲ್ವರ್ಗದ ಗುಲಾಮರಾಗಿ ಕೆಲಸ ಮಾಡುವುದನ್ನು ಬಿಟ್ಟು ಒಳ ಮೀಸಲಾತಿ ಜಾರಿ ಮಾಡಬೇಕು” ಎಂದು ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಒಳ ಮೀಸಲಾತಿ ಜಾರಿ ಮಾಡುವಂತೆ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ ಕಛೇರಿ ವರೆಗೆ ರ್ಯಾಲಿ ನಡೆಸಿ ಪ್ರತಿಭಟನೆ ಮಾಡಿದರು.
ವಕೀಲ ಕೆ ಬಿ ದೊಡಮನಿ ಮಾತನಾಡಿ, “ನಮ್ಮ ಸಮಾಜದ ಶಾಸಕ, ಸಂಸದರು ಸಮಾಜವನ್ನು ಸರ್ಕಾರಗಳ ಮುಂದೆ ಅಡ ಇಟ್ಟಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಮಾರುತಿ ಸಿದ್ದಾಪೂರ ಮಾತನಾಡಿ, ‘ಮೀಸಲಾತಿ ಹೆಸರಿನಲ್ಲಿ ಬಲಾಡ್ಯ ಸಮುದಾಯದವರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ” ಎಂದು ದೂರಿದರು.
ಮುಖಂಡ ದುರಗಪ್ಪ ದೊಡಮನಿ ಮಾತನಾಡಿ, “ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಲು ಬಯಸುವ ನಿಜವಾದ ನಾಯಕರು ಮಾತ್ರ ಈ ಹೋರಾಟಕ್ಕೆ ಬರಲಿ” ಎಂದರು.
ಮುಖಂಡರಾದ ಹುಲ್ಲೂರ, ಶೇಖಪ್ಪ ಮಾದರ, ಆನಂದ ಬಾಲಚಂದ್ರ ಮುದೂರ, ವಕೀಲ ಪಿ.ಬಿ.ಮ್ಯಾಗೇರಿ ಮನವಿ ಪತ್ರ ಓದಿದರು. ವಕೀಲರು ಮಹೇಶ ದೊಡಮನಿ, ರಮೇಶ ತಳವಾರ, ಮಲ್ಲಪ್ಪ ಬಸರಕೋಡ, ನೀಲಪ್ಪ ಸಿದ್ದಾಪೂರ, ಡಿ.ಡಿ. ಯರಝೇರಿ, ಮುತ್ತು ಅಮರಗೋಳ, ತಳಗೆ, ಲಕ್ಷ್ಮಣ ಕಾಳಗಿ, ಪರಶು ನಾಗೂರು, ಮಾರುತಿ ಧನ್ನೂರ, ಕಾಲಪ್ಪ ಅರ್ಜಿ, ಪ್ರಭು ಮುತ್ತು ಸಿದ್ದಾಪೂರ, ಶಂಕ್ರಪ್ಪ ತಂಗಡಗಿ, ಬಸವರಾಜ ಅರಸನಾಳ ಇದ್ದರು.