ವಿಜಯಪುರ | ಪ್ಯಾಲೆಸ್ತೀನ್‌, ಲೆಬನಾನ್‌ ಮೇಲೆ ಇಸ್ರೇಲ್ ಆಕ್ರಮಣ ಖಂಡಿಸಿ ಪ್ರತಿಭಟನೆ

Date:

Advertisements

ಪ್ಯಾಲೆಸ್ತೀನ್ ಮತ್ತು ಲೆಬನಾನ್ ಮೇಲೆ ಇಸ್ರೇಲ್‌ನ ಅಕ್ರಮಣವನ್ನು ಖಂಡಿಸಿ ಎಸ್.ಯು.ಸಿ.ಐ ಕಮ್ಯೂನಿಸ್ಟ್‌ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಐ.ಸಿ.ಓ.ಆರ್. (ಇಂಟರ್ ನ್ಯಾಷನಲ್ ಕೋ ಆರ್ಡಿನೇಶನ್ ಆಪ್ ರೆವ್ಯೂಲುಷನರಿ ಪಾರ್ಟಿಸ್ ಆ್ಯಂಡ್ ಆರ್ಗನೈಜೇಷನ್) ಕರೆಯ ಮೇರೆಗೆ ಇಡೀ ದೇಶಾದ್ಯಂತ ಎಸ್.ಯು.ಸಿ.ಐ. ಕಮ್ಯುನಿಸ್ಟ್ ಇದರ ಭಾಗವಾಗಿ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಭಗವಾನರೆಡ್ಡಿ, “ಇಸ್ರೇಲ್ ಪ್ಯಾಲೆಸ್ತೀನ್‌ನ ಶಾಲೆ, ಆಸ್ಪತ್ರೆ, ಮಾಧ್ಯಮ ಕಚೇರಿಗಳು, ನಾಗರಿಕ ನಿವಾಸಗಳ ಮೇಲೆ ಬಾಂಬ್ ದಾಳಿ ಮಾಡುತ್ತಾ, 40 ಸಾವಿರಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆಗೈದಿದೆ. ಭಯಾನಕ ಮತ್ತು ಕ್ರೂರ ದಾಳಿಗಳು ಪ್ರಾದೇಶಿಕ ಯುದ್ಧದತ್ತ ಒಂದು ಹೆಜ್ಜೆಯಾಗಿದೆ. ಮಧ್ಯ ಪ್ರಾಚ್ಯದಲ್ಲಿ ಮಿಲಿಟರಿ ಅಧಿಪತ್ಯವನ್ನು ಸಾಧಿಸಲು ಅಮೇರಿಕ ಮೊದಲಿನಿಂದಲೂ ಪ್ರಯತ್ನಿಸುತ್ತಾ ಬಂದ ಭಾಗವಾಗಿ, ಈ ಯುದ್ಧಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಸ್ರೇಲ್ ವಿಶ್ವಸಂಸ್ಥೆಯ ಗೊತ್ತುವಳಿಗಳನ್ನು ಧಿಕ್ಕರಿಸುತ್ತಲೇ ಬಂದಿದೆ. ಪ್ಯಾಲೆಸ್ತೀನ್‌ ವಿಮೋಚನಾ ಹೋರಾಟವನ್ನು ಮಾನ್ಯಮಾಡಿ ಭಾರತ ಸರ್ಕಾರವು ಸಹ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ಪರಂಪರೆಯನ್ನು ಎತ್ತಿ ಹಿಡಿಯಬೇಕು” ಎಂದರು.

Advertisements

ಇದನ್ನು ಓದಿದ್ದೀರಾ? ತಮಿಳುನಾಡು | ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಪೈಲಟ್

ಯುದ್ಧಕೋರ ಇಸ್ರೇಲ್ ನ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಹೋರಾಟ ಮಾಡಲು ದೇಶದ ಶಾಂತಿ ಯುವಜನತೆ ಮುಂದಾಗಬೇಕು ಎಂದರು.

ಸಂಖ್ಯಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಸಿ.ಬಿ.ಪಾಟೀಲ ಮಾತನಾಡಿ, “1948ರಿಂದ ಭಾರತವು ಪ್ಯಾಲೆಸ್ತೀನ್‌ ಅನ್ನು ಬೆಂಬಲಿಸುತ್ತ ಬಂದಿದೆ. ಆದರೆ ವಾಜಪೇಯಿಯವರ ಕಾಲದಲ್ಲಿ ಭಾರತದ ವಿದೇಶಾಂಗ ನೀತಿ ಬದಲಾಗಿ ಯುದ್ಧಕೋರ ಇಸ್ರೇಲ್ ಪರವಾಗಿ ಬದಲಾಯಿತು. ಮುಂದಿನ ಎಲ್ಲ ಸರಕಾರಗಳು ಇದನ್ನೇ ಮುಂದುವರೆಸಿಕೊಂಡು ಹೋಗುತ್ತಿವೆ. ಇದು ಶಾಂತಿಪ್ರೀಯ ಭಾರತೀಯರ ವಿರೋಧಿ ನೀತಿಯಾಗಿದೆ” ಎಂದರು.

ವಿಜಯಪುರದ ಹಿರಿಯ ಪತ್ರಕರ್ತರಾದ ಅನಿಲ ಹೊಸಮನಿ ಮಾತನಾಡಿ, ಜಗತ್ತಿನಾದ್ಯಂತ ಇಂದು ಫ್ಯಾಸಿಸ್ಟ್ ಶಕ್ತಿಗಳ ಅಟ್ಟಹಾಸ ನಡೆಯುತ್ತಿದೆ. ಸ್ವಾತಂತ್ರ್ಯ ಮತ್ತು ಸೌಹಾರ್ದಪ್ರಿಯ ಜನತೆ ಒಂದಾಗಿ ಈ ಶಕ್ತಿಗಳನ್ನು ಸೋಲಿಸಬೇಕು ಎಂದರು.

ಸ್ಲಂ ಅಭಿವೃದ್ಧಿ ಸಮಿತಿಯ ರಾಜ್ಯ ಮುಖಂಡರಾದ ಅಕ್ರಮ ಮಾಶಾಳಕರ ಮಾತನಾಡಿ, “ಸಾಮ್ರಾಜ್ಯಶಾಹಿ ರಾಷ್ಟ್ರಗಳ ಬೆಂಬಲದೊಂದಿಗೆ ಇಸ್ರೇಲ್ ನಡೆಸುತ್ತಿರುವ ದಾಳಿ ಮನುಕುಲ ವಿರೋಧಿಯಾಗಿದೆ. ನಮ್ಮ ದೇಶದ ಯುದ್ಧವಿರೋಧಿ ಮತ್ತು ಶಾಂತಿಪ್ರಿಯ ಜನತೆ ಒಂದಾಗಿ ಅನ್ಯಾಯಕ್ಕೊಳಗಾದ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪ್ಯಾಲೆಸ್ತೀನ್‌ ಮತ್ತು ಲೆಬನಾನ್ ರಾಷ್ಟ್ರಗಳ ಪರವಾಗಿ ನಿಲ್ಲಬೇಕು” ಎಂದರು.

ಈ ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಹೆಚ್. ಟಿ. ಸಿದ್ಧಲಿಂಗ ಬಾಗೇವಾಡಿ, ಶಿವರಂಜಿನಿ ಎನ್. ಬಿ. ಪೀರ ಜಮಾದಾರ, ಪಕ್ಷದ ಸದಸ್ಯರುಗಳಾದ ಮಹಾದೇವಿ ಧರ್ಮ ಶೆಟ್ಟಿ, ಕಾಶಿಬಾಯಿ ಜನಗೊಂಡ, ಶರತ್ ಪಿ.ಕೆ.. ಕಾವೇರಿ, ಸಿದ್ರಾಮ ಹಿರೇಮಠ, ಅಶೋಕ ದೇಸಾಯಿ, ಮುಂತಾದವರು ಭಾಗವಹಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಹೋದವರ್ಷ ಅಕ್ಟೋಬರ್ರ್ ನಲ್ಲಿ ಶಾಂತಿಯಿಂದ ಹಬ್ಬ ಆಚರಿಸುತ್ತಿದ್ದ ಇಸ್ರೇಲ್ ಜನತೆಯ ಮೇಲೆ ದಾಳಿಮಾಡಿ 250 ಕ್ಕೂ ಹೆಚ್ಚು ಜನರನ್ನು ಅಪಹರಿಸಿದ್ದು ಶಾಂತಿಯ ಲಕ್ಷಣವೆ? ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಕರೆತಂದಿದ್ದಾರೆ! ಈಗಲಾದರೂ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಇಸ್ರೇಲ್ ಯುದ್ಧ ನಿಲ್ಲಿಸುವ ಭರವಸೆ ಕೊಡುತ್ತಿದೆ.
    ಹಮಾಸ್ ತನ್ನ ಜನರ ಮೇಲೆ ಹೇಗೆ ಅತ್ಯಾಚಾರ ನಡೆಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸನ್ ಆಫ್ ಹಮಾಸ್ ಪುಸ್ತಕ ಓದಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X