ಜೂಜು ಅಡ್ಡೆ ಮೇಲೆ ಏಕಾಏಕಿ ದಾಳಿ ನಡೆಸಿ ಜೂಜಿನಲ್ಲಿ ತೊಡಗಿದ್ದ 6 ಮಂದಿಯನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಂಡಿ ಪಟ್ಟಣದ ಸುತ್ತ ಮುತ್ತ ದಿನೇ ದಿನೇ ಪುಂಡ ಪೋಕರಿಗಳ ಹಾವಳಿ ಹೆಚ್ಚುತ್ತಿದ್ದು ನಗರದಲ್ಲಿ ಎಲ್ಲಿ ಬೇಕೆಂದರಲ್ಲಿ ಜೂಜಾಟ ಆಡುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ. ಇದಕ್ಕೆ ಕಡಿವಾಣ ಹಾಕಲು ಇಂಡಿ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಬೀಸೆ ತಂಡವೊಂದನ್ನು ರಚಿಸಿ ಪೋಕರಿಗಳ ಬೆನ್ನುಹತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ, ಆರೋಪಿಗಳ ಸಮೇತ 9090 ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.
ಹುಸೇನ ಹಾಜಿಮಲಂಗ ಸೌದಾಗಾರ, ಮೈಬೂಬ ಅಮೀನಸಾಬ ಮನಗೂಳಿ, ಚಾಂದ ಬಾಷಾಸಾಬ ಸಿಗನಳ್ಳಿ, ರಾಜು ಇಮಾಮಸಾಬ ಮೋಳಗೆ, ಹಸನ ಲಾಲಸಾಬ ಶೇಖ್, ಬಂದೇನವಾಜ ರಾಜೇಸಾಬ ಸಂಜವಾಡ ಬಂಧಿತರು. ಇಂಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಜಯಪುರ | ʼಏತ ನೀರಾವರಿ ಪೂರ್ಣಗೊಳಿಸಿ ರೈತರ ಹಿತ ಕಾಪಾಡಿʼ