ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆಯು ವಾಡಿಕೆ ಅವಧಿಗಿಂತ ಮೊದಲೇ ಪ್ರಾರಂಭವಾಗಿರುವುದರಿಂದ ಹೆಚ್ಚಿನ ಮಳೆ-ಗಾಳಿಯ ರಭಸಕ್ಕೆ ವಿದ್ಯುತ್ ಮೂಲಭೂತ ಸಲಕರಣೆಗಳು, ವಿದ್ಯುತ್ ಕಂಬಗಳು ಹರಿದು ಬಿದ್ದು, ಜನ-ಜಾನುವಾರುಗಳಿಗೆ ಹಾನಿಯನ್ನುಂಟುಮಾಡುವ ಸಂಭವಿಸಿರುವುದರಿಂದ ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಹೆಸ್ಕಾಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಜೀವಗಳ ಹಾನಿ ತಪ್ಪಿಸಲು ಸಹಕರಿಸುವಂತೆ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ತಿಳಿದ್ದಾರೆ.
ಮಳೆ-ಗಾಳಿಯ ರಭಸಕ್ಕೆ ಹಾಗೂ ಇತರೆ ಅನೇಕ ಕಾರಣಗಳಿಂದಾಗಿ, ಗಿಡಮರಗಳು, ವಿದ್ಯುತ್ ಕಂಬಗಳು ಪರಿವರ್ತಕಗಳ ಮೇಲೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಜತೆಗೆ ತಂತಿಗಳು ತುಂಡಾಗಿ ನೆಲದ ಮೇಲೆ ಬೀಳುತ್ತವೆ. ಇದನ್ನು ಅರಿಯದೇವಿಜಯಪುರ ಜನ-ಜಾನುವಾರುಯಗಳು ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕಕಕ್ಕೆ ಬಂದು ಅಪಘಾತಗಳು ಉಂಟಾಗುವ ಸಂಭವವಿರುತ್ತದೆ.
ಸಾರ್ವಜನಿಕರು ಇಂತಹ ತುಂಡಾಗಿ ಬಿದ್ದ ವಿದ್ಯುತ್ ಸಲಕರಣೆಗಳನ್ನು ನೋಡಿದ ತಕ್ಷಣ ಅವುಗಳನ್ನು ಮುಟ್ಟದೆ ತಮ್ಮ ಹತ್ತಿರದ ಮಾರ್ಗದಾಳು 9 (ಲೈನ್‌ಮನ್) ತನಿಖಾಧಿಕಾರಿ, ಉಪವಿಭಾಗಾಧಿಕಾರಿ ದೂರವಾಣಿ ಸಂಖ್ಯೆ ಅಥವಾ ದೂರುಗಳನ್ನು ಸ್ವೀಕರಿಸಲು ಸ್ಥಾಪಿಸಲಾದ ಉಚಿತ ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡಿ ತಿಳಿಸಿ, ಸಂಭವಿಸಬಹುದಾದ ಜೀವಹಾನಿಗಳನ್ನು ತಪ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಸಂಪರ್ಕ ಸಂಖ್ಯೆಗಳು: ವಿಜಯಪುರ ವಿಭಾಗದ ಎಂಜಿನಿಯರ್ ಕಾರ್ಯನಿರ್ವಾಹಕ ಮಹಾಂತೇಶ ಚನಗೊಂಡ ಮೊ: 9448370248, ವಿಜಯಪುರ ಗಾಂಧಿ ವೃತ್ತದಿಂದ ಉತ್ತರ ಈಶಾನ್ಯ ಮತ್ತು ವಾಯವ್ಯ ದಿಕ್ಕಿನ ಪ್ರದೇಶಕ್ಕಾಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೊಡ್ಡಪ್ಪ ಮೂಲಿಮನಿ ಮೊ: 9448370250, ವಿಜಯಪುರ ಮಹಾತ್ಮ ಗಾಂಧಿ ವೃತ್ತದಿಂದ ದಕ್ಷಿಣ, ನೈರುತ್ಯ ಮತ್ತು ಅಗ್ನಿ ದಿಕ್ಕಿನ ಪ್ರದೇಶಕ್ಕಾಗಿ ಪೂಜಾರ ಭಾರತಿ ಮೊ: 09448375711, ವಿಜಯಪುರ ತಾಲೂಕಿನ ಗ್ರಾಮೀಣ ಪ್ರದೇಶಕ್ಕಾಗಿ – ಬಾಲಾಜಿಸಿಂಗ ರಾಠೋಡ ಮೊ: 9448370251, ತಿಕೋಟಾ ಜಿ. ತಾಲೂಕಿನ ವ್ಯಾಪ್ತಿಯಲ್ಲಿ ಗೋವಿಂದ – ದೇಶಮುಖ ಮೊ: 9448971001 ಹಾಗೂ ಬಬಲೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿ ಮಹಾದೇವ ತಳವಾರ ಮೊ: 9449825955ಕ್ಕೆ ಸಂಪರ್ಕಿಸಬಹುದಾಗಿದೆ.
ఇంಡಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಸಿದ್ದಪ್ಪ :9448143362, ఇంಡಿ ತಾಲೂಕಿನ ವ್ಯಾಪ್ತಿಯಲ್ಲಿ 5 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಗಮೇಶ ಮೆಡೆಗಾರ ಮೊ: 9448370250, ಚಡಚಣ ತಾಲೂಕಿನ ವ್ಯಾಪ್ತಿಯಲ್ಲಿ ಈ ವಿಜಯಕುಮಾರ ಹವಾಲ್ದಾರ ಮೊ: 9449858124, ಸಿಂದಗಿ ಮತ್ತು ಅಲಮೇಲ ತಾಲೂಕಿನ ವ್ಯಾಪ್ತಿಯಲ್ಲಿ ಚಂದ್ರಕಾಂತ ನಾಯ್ಕ ಮೊ: 9448370254 ಹಾಗೂ ದೇವರಹಿಪ್ಪರಗಿ ತಾಲೂಕಿನ ವ್ಯಾಪ್ತಿಯಲ್ಲಿ ಪ್ರಭುಸಿಂಗ ಹಜೇರಿ ಮೊ: 9480882923 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾರುತಿ ಮಾನಪಡೆ 70ನೇ ಜನ್ಮದಿನ : ನೋಟ್‌ಬುಕ್, ಪೆನ್ ವಿತರಣೆ
ಬಸವನಬಾಗೇವಾಡಿ ವಿಭಾಗದ ಕಾರ್ಯನಿರ್ವಾಹಕ ಸಿದ್ದರಾಮ ಎಂಜಿನಿಯರ್ ಬಿರಾದಾರ ಮೊ: 9480882627, ಬಸವನಬಾಗೇವಾಡಿ ತಾಲೂಕಿನ ವ್ಯಾಪ್ತಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಕೊಟ್ರೇಶ ಹರನಾಳ 9448370256, ಎಂಜಿನಿಯರ್ ಮೊ: ಕೊಲ್ಲಾರ ತಾಲೂಕಿನ ವ್ಯಾಪ್ತಿಯಲ್ಲಿ ಪರಶುರಾಮ ನಾಗನೂರ ಮೊ: 9480883663.
ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ರಾಜಶೇಖರ ಹಾದಿಮನಿ ಮೊ: 9448370258 ಹಾಗೂ ತಾಳಿಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ವಿಜಯಕುಮಾರ ಬಿರಾದಾರ ಮೊ: 9480883664 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.