ವಿಜಯಪುರ | ರೈತರ ಪರವಾಗಿ ಧ್ವನಿ ಎತ್ತಿ; ಶಾಸಕರಿಗೆ ಸಂಗಮೇಶ ಸಗರ ಆಗ್ರಹ

Date:

Advertisements

ಬಜೆಟ್ ಪೂರ್ವ ಅಧಿವೇಶನದಲ್ಲಿ ಜಿಲ್ಲೆಯ ಎಲ್ಲಾ ಎಂಟೂ ಶಾಸಕರುಗಳು ರೈತರ ಪರವಾಗಿ ಧ್ವನಿ ಎತ್ತಿ, ರೈತರ ಶ್ರೇಯೋಭಿವೃದ್ಧಿಗಾಗಿ ಮಾತನಾಡಿ. ರೈತರ ಮತದಿಂದ ಆರಿಸಿ ಬಂದಿರುವ ತಾವು ಅವರ ಋಣ ತೀರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆಂದೂ ಕಂಡು ಕಾಣದಂತಹ ಬೀಕರ ಬರಗಾಲ ನಮ್ಮ ರಾಜ್ಯಕ್ಕೆ ಒಕ್ಕರಿಸಿದೆ. ಕಳೆದ 7-8 ತಿಂಗಳಿನಿಂದ ಮಳೆ ಕಾಣದೇ ಕಂಗಾಲಾಗಿರುವ ರೈತ ಸಮುದಾಯವನ್ನು ಗಣನೆಗೆ ತೆಗೆದುಕೊಂಡು, ನಾಳೆ ನಡೆಯಲಿರುವ ಬಜೆಟ್ ಪೂರ್ವ ಅಧಿವೇಶನದಲ್ಲಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ 8 ಶಾಸಕರುಗಳು ರೈತರ ಪರವಾಗಿ ಧ್ವನಿ ಎತ್ತಿ, ರೈತರ ಮತದಿಂದ ಆರಿಸಿ ಬಂದಿರುವ ತಾವುಗಳು ಅವರ ಋಣ ತೀರಿಸಬೇಕೆಂದರು.

ಅಧಿವೇಶನವೆಂದರೆ ಕೇವಲ ಜಗಳವಾಡುವುದು ಆಗಬಾರದು, ಜಿಲ್ಲೆಗೆ ಹಾಗೂ ಜಿಲ್ಲೆಯ ರೈತರಿಗೆ ಅವಶ್ಯವಾಗಿ ಬೇಕಾಗಿರುವ ಹೊಸ ಯೋಜನೆಗಳ ಕುರಿತು ಹಾಗೇ ನೆನಗುದಿಗೆ ಬಿದ್ದಿರುವ ಕಾಮಗಾರಿಗಳ ಹಣವನ್ನು ಮಂಜೂರು ಮಾಡುವಂತೆ ಜಿಲ್ಲೆಯ ಶಾಸಕರು ಸಧನದಲ್ಲಿ ಧ್ವನಿ ಎತ್ತಬೇಕು. ಕೇಳದಿದ್ದರೇ ಯಾರು ಏನು ಕೊಡುವುದಿಲ್ಲ ಈಗ ಸಮಯ ಬಂದಿದೆ. ಜಿಲ್ಲೆಯ ಶ್ರೇಯೋಭಿವೃದ್ದಿಗೆ ಧ್ವನಿಯಾಗುವಂತೆ ತಿಳಿಸಿದರು.

Advertisements

ಜಿಲ್ಲೆಯಲ್ಲಿ ಅನೇಕ ರೈತರು ಆತ್ಮಹತೈ ಮಾಡಿಕೊಂಡಿದ್ದಾರೆ, ರೈತರ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಕನಿಕರ ತೊರದೇ ಬರಗಾಲದಿಂದ ತತ್ತರಿಸಿರುವ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಳೆದಿರುವ ಎಲ್ಲಾ ಬೆಳೆಗಳಿಗೆ ವರ್ಷಪೂರ್ತಿ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಕೃಷಿಗೆ ಬಡ್ಡಿ ರಹಿತ ಬೇಷರತ್ತ ಸಾಲ ಸಿಗುವಂತಾಗಬೇಕು, ಕೃಷಿ ಚಟುವಟಿಕೆ ನಡೆಯದೇ ರೈತ ಕಾರ್ಮಿಕರು ಗುಳೆ ಹೋಗುತ್ತಿರುವುದನ್ನು ತಪ್ಪಿಸಲು ಉದ್ಯೋಗ ಸೃಷ್ಠಿಸಬೇಕು, ರೈತರಿಗೆ ಸಂಬಂಧಿಸಿದ ಕೃಷಿ, ಅರಣ್ಯ, ತೋಟಗಾರಿಕೆ, ಮೀನು, ಪಶುಸಂಗೋಪನೆ, ಇಲಾಖೆಯಲ್ಲಿ ಅವಶ್ಯವಿರುವ ಎಲ್ಲಾ ಸಾಧನ ಸಲಕರಣೆಗಳು, ಬೀಜ, ಗೊಬ್ಬರ, ಸ್ಪಿಂಕಲರ್ ಪೈಪ ಸೇರಿದಂತೆ ಎಲ್ಲ ಉಪಕರಣಗಳು ದೊರೆಯಬೇಕು ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಬೇಕು ಎಂದು ಆಗ್ರಹಿಸಿದರು.

ಆಲಮಟ್ಟಿ ಆಣೆಕಟ್ಟು 519.6ರಿಂದ 524.256ಕ್ಕೆ ಎತ್ತರಿಸಿ, ಪರಿಹಾರ ಹಾಗೂ ಪುರ್ನವಸತಿ ಕಲ್ಪಿಸಬೇಕು, ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ಗುಣಮಟ್ಟದಿಂದ ನಿರ್ಮಿಸಿ, ಜಿಲ್ಲೆಯ ಕಡೆಯ ಹಳ್ಳಿಯ ಕಟ್ಟಕಡೆಯ ರೈತರ ಜಮೀನಿಗೂ ನೀರು ಹರೆಯಬೇಕು.

ರೈತರಿಗೆ ಮರಣ ಶಾಸನವಾಗಿರುವ ಭೂ ಸುಧಾರಣಾ ಕಾಯ್ದೆ, ಕೃಷಿ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ, ಜಾನುವಾರ ಹತ್ಯೆ, ತಂದಿರುವ ಕೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ ಸರಕಾರ ತಂದಿರುವುದನ್ನು ದೇಶದ ಎಲ್ಲಾ ರೈತರು ವಿರೋಧಿಸಿರುವ ಪ್ರತಿಫಲವಾಗಿ ಕೇಂದ್ರದಲ್ಲಿ ಮರಳಿ ಪಡೆದಿದ್ದರು ರಾಜ್ಯ ಸರಕಾರಗಳು ಇನ್ನು ಮರಳಿ ಪಡೆದಿಲ್ಲ, ಅಧಿಕಾರಕ್ಕೆ ಬರುವ ಮುಂಚೆ ರೈತರಿಗೆ ನೀಡಿರುವ ಆಶ್ವಾಸನೆಯಂತೆ ಕೂಡಲೆ ಈ ಅಧಿವೇಶನದಲ್ಲಿ ಈ ಎಲ್ಲಾ ಕಾಯ್ದೆಗಲನ್ನು ಪಾವಸ ಪಡೆಯಬೇಕು ಎಂದು ಒತ್ತಾಯಿಸಿದರು.

ಸರಿಸುಮಾರು ಶೇ.75ರಷ್ಟು ರೈತರು  ಕೃಷಿಯನ್ನೇ ಅವಲಂಭಿಸಿರುವ ಈ ರಾಜ್ಯದಲ್ಲಿ ರೈತಪರ ಚಿಂತನೆಗಳನ್ನು ಮಾಡಿ. ತಜ್ಞರಿಂದ, ಹಿರಿಯ ರೈತ ಹೋರಾಟಗಾರರಿಂದ ಮಾರ್ಗದರ್ಶನ ಪಡೆದು ರೈತಪರ ಬಜೇಟ್ ಮಂಡನೆ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಸಮಸ್ತ ರೈತ ಬಾಂಧವರ ಪರವಾಗಿ ಕೇಳಿಕೊಳ್ಳುತ್ತೆವೆ ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X