ಬೆಂಬಲ ಬೆಲೆಯಡಿ ಕುಸುಬೆ ಉತ್ಪನ್ನ ಖರೀದಿಗೆ ಜಿಲ್ಲೆಯ ಕೆಓಎಫ್ ಸಂಸ್ಥೆಯ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿಯು ರೈತರು ನೋಂದಣಿ ಕಾರ್ಯ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಅಧ್ಯಕ್ಷ ಟಿ.ಭೂಬಾನ್ ತಿಳಿಸಿದ್ದಾರೆ.
ವಿಜಯಪುರ ಪಟ್ಟಣದಲ್ಲಿ ಮಾತನಾಡಿದ ಅವರು “2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 529 ಟ್ಯಾಕ್ಟರ್ ಕ್ಷೇತ್ರದಲ್ಲಿ ಕುಸುಬೆ ಬಿತ್ತನೆಯಾಗಿದ್ದು, 6600 ಕ್ವಿಂಟಲ್ ಇಳುವರಿ ಅಂದಾಜಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟ್ ಲ್ ಗೆ 5300 ರಿಂದ 5500 ವರೆಗಿನ ದರದಿಂದ ಮಾರಾಟವಾಗುತ್ತಿದ್ದು, ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ಕೊಸಬೆ ಉತ್ಪನ್ನಕ್ಕೆ 5940 ನಿರ್ಧರಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?
“ಜಿಲ್ಲೆಯಲ್ಲಿ ವಿಜಯಪುರ, ಬಬಲೇಶ್ವರ ತಾಲೂಕಿನ ಬಬಲೇಶ್ವರ, ಸವನಹಳ್ಳಿ ಹಾಗೂ ತಾಜಾಪುರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ವಿಜಯಪುರ ತಾಲೂಕಿನ ವಿಜಯಪುರ ಟಿಎಪಿಸಿಎಂಎಸ್, ಮುದ್ದೇಬಿಹಾಳ ತಾಲೂಕಿನ ತಂಗಡಗಿ, ಇಂಡಿ -ಚಡಚಣ ತಾಲೂಕಿನ ಚಡಚಣ, ಹಲಸಂಗಿ ಹೆಣ್ಣೆ ಬೀಜ ಬೆಳಗಾರರ ಸಹಕಾರ ಸಂಘ, ಸಿಂದಗಿ ತಾಲೂಕಿನ ಸಿಂದಗಿ, ಟಿ ಎ ಪಿ ಸಿ ಎಂ ಎಸ್ ಬಸವನಬಾಗೇವಾಡಿಯಲ್ಲಿ ಕರೆದು ಕೇಂದ್ರಗಳನ್ನು ಆರಂಭಿಸಲಾಗಿದೆ” ಎಂದು ತಿಳಿಸಿದರು.
