ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದಲ್ಲಿ ಮಂಗಳವಾರ (ಜ.30) ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ಐದು ತಿಂಗಳು ಕಳೆದರೂ ಇನ್ನುವರೆಗೂ ಯಾವ ರೈತರಿಗೂ ಪರಿಹಾರ ಬಂದಿಲ್ಲ. ಫಸಲ್ ಭೀಮಾ ಯೋಜನೆಯಲ್ಲಿ ಭಾರಿ ಪ್ರಮಾಣದ ಅನ್ಯಾಯವಾಗುತ್ತಿದೆ, ಅದೇರೀತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಲವಾರು ಸಮಸ್ಯೆಗಳಿವೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ, ಸ್ಪಿಂಕಲರ್ ಪೈಪಗಳ ಸಮಸ್ಯೆ ದೊಡ್ಡದಾಗಿದೆ. ಕಳೆದ 2-3 ವರ್ಷಗಳ ಹಿಂದೆ ಡಿ.ಡಿ ತುಂಬಿದ ಹಣವನ್ನು ಮರಳಿ ಹಾಕಲಾಗಿದೆ, ಈಗ ಮತ್ತೆ ಡಿ.ಡಿ ತುಂಬುವಂತೆ ಹೇಳುತ್ತಿದ್ದಾರೆ, ಅದು ನಿಮ್ಮ ಸರದಿ ಬಂದಾಗ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಮನವಿಯಲ್ಲಿ ರೈತ ಸಂಘ ಉಲ್ಲೇಖಿಸಿದೆ.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದಶಿಗಳಾದ ರಾಹುಲ ಕುಬಕಡ್ಡಿ, ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ, ಜೊತೆಗೆ ವಿಮೆಯಲ್ಲಿ ದೊಡ್ಡಪ್ರಮಾಣದ ಅವ್ಯವಹಾರ ನಡೆಯುತ್ತಿದೆ. ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಬಗ್ಗೆ ಸರಿಯಾದ ಮಾರ್ಗಸೂಚಿ ಇಲ್ಲ. ಅದುಕೂಡಾ ಗೊಂದಲವಿದೆ ಎಂದರು.
ಇಲಾಖೆಯಲ್ಲಿ ವಿಜಿಲೇನ್ಸ್ ತಂಡವನ್ನು ಇನ್ನು ಹೆಚ್ಚಿಸಿ ಜಿಲ್ಲೆಯಲ್ಲಿ ಅಕ್ರಮವಾಗಿ ನಕಲಿ ಬೀಜ ಗೊಬ್ಬರ, ಕೀಟನಾಶಕ ಮಾರಾಟವಾಗುವುದು ತಡೆಯುವಂತೆ ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರಾದ ರಾಜಶೇಖರ ವಿಲಿಯಮ್ಸ್, ಬೆಳೆವಿಮೆಗೆ ಸರ್ಕಾರದ ಮಾರ್ಗಸೂಚಿಯಿದೆ. ಇಲ್ಲಿ ಕೇವಲ ಕೃಷಿ ಇಲಾಖೆ ಮಾತ್ರವಲ್ಲದೇ ಇನ್ನು 4-5 ಇಲಾಖೆಯ ಅಧಿಕಾರಿಗಳ ತಂಡ ಸರ್ವೇ ಮಾಡಿ ವರದಿ ಸಲ್ಲಿಸಲಾಗುತ್ತದೆ, ಇನ್ನು ಜಿಲ್ಲೆಗೆ ಸುಮಾರು 600ಕೋಟಿಗಳ ಬೇಡಿಕೆಯನ್ನು ಸಲ್ಲಿಸಲಾಗಿದೆ, ಅದ್ದರಿಂದ ಈ ವರ್ಷ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸ್ಪಿಂಕಲರ್ ಪೈಪ್ ಸೇರಿದಂತೆ ಎಲ್ಲಾ ವಸ್ತುಗಳ ಸರಿಯಾದ ಸಮಯಕ್ಕೆ ಹಾಗೂ ನೈಜ ರೈತರಿಗೆ ಸಿಗುವಂತಹ ವ್ಯವಸ್ಥೆ ಕಲ್ಪಿಸಲಾಗುವುದು, ನಾವೂ ಯಾವಾಗಲೂ ರೈತರ ಏಳ್ಗೆಗಾಗಿ ಇರುವವರು ಎಂದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರಾದ ರೇಖಾ ಪಾಟೀಲ, ಈರಪ್ಪ ಕುಳೆಕುಮಟಗಿ, ಸಾತಲಿಂಗಯ್ಯ ಸಾಲಿಮಠ, ಮಹಾದೇವ ಬನಸೋಡೆ, ಶ್ರೀಶೈಲ ವಾಲಿಕಾರ, ಸೇರಿದಂತೆ ಮುಖಂಡಾರಾದ ಶಿವಾನಂದಯ್ಯ ಹಿರೇಮಠ, ಸುಭಾಸ ಸಜ್ಜನ, ನಜೀರ ನಂದರಗಿ, ಶಾನೂರ ನಂದರಗಿ, ಖಾದರಸಾಬ ವಾಲಿಕಾರ, ರಾಮನಗೌಡ ಪಾಟೀಲ, ಮಹಾದೇವ ತೇಲಿ, ಅರುಣಗೌಡ ತೇರದಾಳ, ಸಂಗಪ್ಪ ಟಕ್ಕೆ, ಸಂಪತ್ತ ಜಮಾದಾರ, ಸಂಗಮೇಶ ಹುಣಸಗಿ, ಹಣಮಂತ ಬ್ಯಾಡಗಿ, ಎಚ್.ಎನ್.ಪಾಟೀಲ, ಮಹಾದೇವ ಕದಂ, ಸೇರಿದಂತೆ ಅನೇಕರು ಇದ್ದರು.