ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಗೀಳಿಗೆ ಇಂದಿನಯುವಕರು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ಸರ್ಕಾರ ಬೆಟ್ಟಿಂಗ್ ಆ್ಯಪ್‌ಗಳನ್ನು ನಿಷೇಧ ಮಾಡಬೇಕು ಎಂದು ಬಲಿಷ್ಠ ಭಾರತ ನಿರ್ಮಾಣ ಸೇನೆ ಹಾಗೂ ಕರುನಾಡ ಕ್ರಾಂತಿ ಸೇನೆ ಪದಾಧಿಕಾರಿಗಳು ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಸೇನೆ ಅಧ್ಯಕ್ಷ ಪುನೀತ್ ಸಜ್ಜನ ಮಾತನಾಡಿ, “ಆನ್‌ಲೈನ್ ಜೂಜು, ಇಸ್ಪೀಟ್, ಲೂಡೊ, ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಅನೇಕ ಅಪ್ಲಿಕೇಷನ್‌ಗಳು ಹಣದ ವಂಚನೆ ಮಾಡುತ್ತಿವೆ. ಯುವಕರನ್ನು ಈ ಗೀಳಿಗೆ ಹಣ ಹಾಕುವಂತೆ ಪ್ರೇರೇಪಿಸಿ ನಂತರ ಅವರನ್ನು ಸಾಲಗಾರರನ್ನಾಗಿ ಮಾಡಿ ಪ್ರಾಣ ಬಿಡುವಂತೆ ಮಾಡುತ್ತಿವೆ. ಸರ್ಕಾರ ಆರ್ಥಿಕ ಅಪರಾಧಗಳನ್ನು ನಿಯಂತ್ರಿಸಲು ಆನ್‌ಲೈನ್ ಬೆಟ್ಟಿಂಗ್ ಹಾಗೂ ಬೆಟ್ಟಿಂಗ್ ಆ್ಯಪ್‌ಗಳನ್ನು ನಿಷೇಧ ಮಾಡಬೇಕು” ಎಂದು ಆಗ್ರಹಿಸಿದರು.
“ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ಆಟಗಳನ್ನು ಆಡಿಸುವಂತಹ ಆ್ಯಪ್‌ಗಳು ವಿಪರೀತ ಪ್ರಮಾಣದಲ್ಲಿ ಹುಟ್ಟಿಕೊಂಡಿವೆ. ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ವರ್ಗದ ಜನರು ಇವುಗಳ ಆಮಿಷಕ್ಕೆ ಒಳಗಾಗಿ, ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಕೂಡಲೇ ಸರ್ಕಾರ ಅಂತಹ ಆ್ಯಪ್‌ಗಳ ವಿರುದ್ಧ ಆರ್ಥಿಕ ಅಪರಾಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವುಗಳನ್ನು ನಿಷೇಧಗೊಳಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಜಯಪುರ | ರಂಜಾನ್, ಹೋಳಿ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಿ: ಪೊಲೀಸ್ ಸಿಪಿಐ ಮಹಮ್ಮದ್
ಕರುನಾಡ ಕ್ರಾಂತಿ ಸೇನೆಯ ಸಂಭಾಜಿ ಪಾಟೀಲ, ರವಿ ಗಾಯಕವಾಡಿ, ತೀರ್ಥಪ್ಪ ಪೂಜಾರಿ, ರವಿ ಗಾಯಕವಾಡ, ಭೀಮಾರೆಡ್ಡಿ ಬ್ಯಾಕೋಡ, ಉತ್ಕರ್ಷ ಪಾಟೀಲ, ದೀಪಕ ಸೂರ್ಯವಂಶಿ, ಪ್ರಶಾಂತ ಪಾಟೀಲ, ಮುತ್ತಣ್ಣ ಭೋವಿ, ಮಹೇಶ ಯಲ್ಲಕ್ಷ, ರಾಜು ರೂಗಿ, ಮುತ್ತು ಬಿರಾದಾರ. ರುದ್ರಗೌಡ ಪಾಟೀಲ, ಈರಣ್ಣ ಪಾಟೀಲ ಮತ್ತಿತರರು ಇದ್ದರು.
