ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮುಸ್ಲಿಮರು ವಕ್ಫ್ ತಿದ್ದುಪಡಿ ಮಸೂದೆ 2024ರ ವಿರುದ್ಧ ಕೈಯಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ ಶಾಂತಿಯುತ, ಮೌನ ಪ್ರತಿಭಟನೆ ನಡೆಸಿದರು.
ಜಮಾಅತೆ-ಇ-ಇಸ್ಲಾಮಿ ಹಿಂದ್ ಸಂಚಾಲಕ ನೂರೆ ನಬಿ ನದಾಫ್ ಮಾತನಾಡಿ, “ಸರ್ಕಾರವು ಈ ಸಂವಿಧಾನ ಬಾಹಿರ ವಕ್ಫ್ ತಿದ್ದುಪಡಿ ಮಸೂದೆ-2024ನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಈ ಮಸೂದೆಯು ಭಾರತದ ನಾಗರಿಕರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ದೇಶದ ನ್ಯಾಯವನ್ನು ಪ್ರೀತಿಸುವ ಜನರೂ ಕೂಡಾ ಈ ಮಸೂದೆಯನ್ನು ವಿರೋಧಿಸಬೇಕು” ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಮಾತನಾಡಿ, “ವಕ್ಫ್ ಆಸ್ತಿಯನ್ನು ಕಳೆಯುವುದಕ್ಕೆ ಮಸೂದೆ ತರುತ್ತಿದೆ. ಕೇವಲ ಈ ಮಸೂದೆ ವಕ್ಫ್ ಆಸ್ತಿಯನ್ನು ಕಳೆಯುವುದಕ್ಕಷ್ಟೇ ಅಲ್ಲದೇ ಇಡೀ ದೇಶದ ಮುಸಲ್ಮಾನರ ವಿರುದ್ಧವಾಗಿದೆ” ಎಂದು ಪ್ರತಿಪಾದಿಸಿದರು.
ವೈದ್ಯ ಡಾ. ಮುಲ್ಲಾ ಮಾತನಾಡಿ, “ವಕ್ಫ್ ಆಸ್ತಿ ಯಾರ ಸ್ವತ್ತೂ ಅಲ್ಲ. ಅಲ್ಲಾಹನ ಸ್ವತ್ತು. ಯಾವುದೇ ಕಾರಣಕ್ಕೂ ಯಾರೂ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರ ರಕ್ಷಣೆಗಾಗಿ ಮುಸ್ಲಿಮರು ಮುಂದೆ ಬರಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಶುದ್ಧ ಕಡಿಯುವ ನೀರಿನ ಘಟಕಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ
ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಅಧ್ಯಕ್ಷರ ಸೂಚನೆಗಳನ್ನು ಪಾಲಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುವಂತೆ ಮುಸ್ಲಿಮರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೌಲಾನಾ ಮಹಮ್ಮದ್ ರಫೀಕ್ ಮದನಿ ಖತೀಬ್, ಸಂದಲ್ ಮಸ್ಜಿದ್, ಪುರಸಭೆಯ ಸದಸ್ಯರಾದ ಅಬ್ದುಲ್ ಮಜಿದ್ ಮುಕಾಂದಾರ್, ಭಾಷಾ ನಾಯ್ಕೋಡಿ, ಬಾಬಾ ಮಕಾಂದರ್ ನಜೀರ್ ಮಕಾಂದಾರ್, ಸದ್ದಾಂ ನದಾಫ್ ಅತಾವುಲ್ಲಾ ಮಕಾಂದರ್, ಉಸುಮಾನ ಬಾಗವಾನ್ ಸೇರಿದಂತೆ ಹಲವಾರು ಯುವಕರು, ಗಣ್ಯರು, ಧಾರ್ಮಿಕ ಮುಖಂಡರು ಕಾನೂನು ವಿರುದ್ಧದ ಪ್ರತಿಭಟನೆಯಲ್ಲಿ ಇದ್ದರು.