ವಕ್ಫ್ ಹೆಸರಿನಲ್ಲಿ ರೈತರಿಗೆ ನೋಟಿಸ್ ನೀಡಿದ್ದನ್ನು ಹಾಗೂ ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯ ರೈತ ಸಂಘ- ಹಸಿರು ಸೇನೆ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಆಹೋರಾತ್ರಿ ಧರಣಿಯನ್ನು ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಹಮ್ಮಿಕೊಳ್ಳಲಾಯಿತು.
ಸರ್ಕಾರದ ಹುನ್ನಾರದಿಂದ ರೈತರಿಗೆ ದೀಪಾವಳಿ ಹಬ್ಬ ಕರಾಳವಾಗಿದೆ ಎಂದು ಆರೋಪಿಸಿದ ರೈತರು, ನೋಟಿಸ್‌ನಿಂದ ರೈತ ಕುಟುಂಬಗಳು ಆತಂಕಕ್ಕೀಡಾಗಿದ್ದಾರೆ. ವಕ್ಫ್ ಬೋರ್ಡ್ ಎಂದು ದಾಖಲಾಗಿರುವುದನ್ನು ಕೂಡಲೇ ತೆಗೆಯಬೇಕು. ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ಗಂಭೀರವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರೈತ ವಲಯಕ್ಕೆ ಆತಂಕಕ್ಕೀಡಾಗಿರುವ ವಿಷಯವನ್ನು ಸರ್ಕಾರ ಕೂಡಲೇ ಪರಿಹರಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಮುಖಂಡರಾದ ಅರವಿಂದ ಕುಲಕರ್ಣಿ ತಿಳಿಸಿದರು.
ಆಹೋರಾತ್ರಿ ಧರಣಿಗೂ ಮುನ್ನ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿ ಆರಂಭಿಸಿ, ಗಾಂಧಿಚೌಕ್ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ರೈತರು ಪ್ರತಿಭಟನಾ ರ್‍ಯಾಲಿ ನಡೆಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಭಾವಚಿತ್ರ ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದ್ದಾರೆ. ಅಥಣಿ ರಸ್ತೆಯಲ್ಲಿ ಧರಣಿಗೆ ಆಣಿಯಾದ ರೈತರು ರಸ್ತೆ ತಡೆ ನಡೆಸಿದರು. ಬಸವೇಶ್ವರ ಸರ್ಕಲ್. ಡಾ.ಅಂಬೇಡ್ಕರ್ ಸರ್ಕಲ್ ಮೂಲಕ ಡಿಸಿ ಕಚೇರಿವರೆಗೂ ಮೆರವಣಿಗೆ ಮಾಡಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸಲು ಪ್ರಯತ್ನಿಸಿದರು.
ಇದನ್ನೂ ಓದಿದ್ದೀರಾ;ಹಾಸನ | ವಿಪಕ್ಷದವರು ಏನೇ ಮಾಡಿದರು ಮುಖ್ಯಮಂತ್ರಿಯನ್ನು ಕುಂದಿಸಲು ಸಾಧ್ಯವಿಲ್ಲ: ಕಾಂಗ್ರೆಸ್ ಮುಖಂಡರು
ಹೋರಾಟವನ್ನು ರೈತರು ಮುಂದುವರಿಸಿದ್ದ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಭಾವಚಿತ್ರದ ಮುಂದೆ ದೀಪ, ಹಣತೆ ಇಟ್ಟು ರೈತರು ಕರಾಳ ದೀಪಾವಳಿ ಆಚರಣೆ ಮಾಡಿದ್ದಾರೆ. ಧರಣಿಯಲ್ಲಿ ರೈತ ಸಂಘಟನೆಯ ಮುಖಂಡರಾದ ಅರವಿಂದ ಕುಲಕರ್ಣಿ, ಸಂಗಮೇಶ ಇನ್ನಿತರರು ಉಪಸ್ಥಿತರಿದ್ದರು.