ಸ್ಲಂ ನಿವಾಸಿಗಳ ಹಕ್ಕುಪತ್ರಗಳಿಗಾಗಿ ಶಿಖರಖಾನೆ ಭಾಗ -2 ಹಾಗೂ ಭಾಗ 3ನ್ನು ಸರ್ವೇ ಮಾಡಿ ಹಕ್ಕುಪತ್ರ ಕೊಡಬೇಕು ಎಂದು ಆಗ್ರಹಿಸಿ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದಿಂದ ವಿಜಯಪುರದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಜನ ವೇದಿಕೆ(ಸಿಸಿಎಫ್‌ಎಫ್) ಮತ್ತು ಶಿಖಾರ ಖಾನೆ 2 ಹಾಗೂ 3ರ ಸ್ಲಂ ನಿವಾಸಿಗಳಿಗೆ ಶೀಘ್ರದಲ್ಲಿಯೇ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಮನವಿ ಮಾಡಿದರು.
ನಗರದ ಇಬ್ರಾಹಿಂಪುರ ಭಜಂತ್ರಿ ಗಲ್ಲಿ ಸ್ಲಂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯಿದೆ ಅಡಿ ಘೋಷಣೆಯಾಗಿದ್ದು, ಅಲ್ಲಿ ವಾಸಿಸುವ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರಕ್ಕಾಗಿ ಪ್ರತಿ ಮನೆಯ ಸರ್ವೆ ಮಾಡಿ ಎಷ್ಟು ಉದ್ದ, ಅಗಲ ಅಳತೆ ಮಾಡಿ, ಆ ಮನೆಯ ಚೆಕ್ ಬಂದಿ ಸರ್ವೇ ಮಾಡಿ ತಮಗೆ ಅರ್ಜಿ ಸಲ್ಲಿಸಿತ್ತಿದ್ದೇವೆ. ತಾವುಗಳು ಶೀಘ್ರದಲ್ಲಿಯೇ ಹಕ್ಕುಪತ್ರಗಳನ್ನು ತಯಾರಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮರಗಳ ಮೇಲೆ ಕೇಬಲ್, ಜಾಹೀರಾತು ಫಲಕ ಹಾಕುವವರ ವಿರುದ್ಧ ಕ್ರಮ: ಅರಣ್ಯ ಅಧಿಕಾರಿಗಳು
“ಹಕ್ಕುಪತ್ರ ಬರೆಯಲು ತಮಗೆ ಸಹಾಯ, ಸಹಕಾರ ಬೇಕೆಂದಲ್ಲಿ ನಾವುಗಳು ಸಹಕಾರ ನೀಡುತ್ತೇವೆ. ತಾವುಗಳು ಬೇಗನೆ ಹಕ್ಕುಪತ್ರ ವಿತರಣೆ ಮಾಡಬೇಕು” ಎಂದು ವಿನಂತಿಸಿಕೊಂಡರು.
ವಿಜಯಪುರ ಸ್ಲಂ ಸಮಿತಿ ಒಕ್ಕೂಟ ಅಧ್ಯಕ್ಷ ಮುತ್ತಣ್ಣ ಭೋವಿ, ಪಂಡಿತ, ಅಶೋಕ, ದಸ್ತಿಗಿರಿ ಹಾಗೂ ಇಬ್ರಾಹಿಂಪುರ ಸೇರಿದಂತೆ ಬಹುತೇಕರು ಇದ್ದರು.