ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 134ನೇ ಜನ್ಮ ಜಯಂತಿ ನಿಮಿತ್ತ ಕೊಡುಗೆಯಾಗಿ ನಾಡಿನ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಅನುಕೂಲವಾಗಲು ಪರೀಕ್ಷಾ ಸಹಾಯಕ ಕೈಪಿಡಿ ಬಿಡುಗಡೆಗೊಳಿಸಲಾಗಿದೆ.
ವಿಜಯಪುರ ನಗರದ ಗಾಂಧಿ ಚೌಕ ಚರ್ಚ್ ಸಭಾಂಗಣದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ, ದಲಿತ ವಿದ್ಯಾರ್ಥಿ ಪರಿಷತ್ತಿನ ಹಿತೈಶಿ ಶಿಕ್ಷಕ ಶಕರುಂದ ಸಿದ್ದಗೊಳಿಸಿರುವ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಟಿಯೋಲೋ ಮೆಚಾದೊ ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಗುರಿಯನ್ನ ಸಾಧಿಸಬೇಕಾದರೆ ಛಲ ಬಿಡದೆ ಓದಬೇಕು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಶಿಸ್ತು ಪಾಲಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ” ಎಂದರು.
ವಿದ್ಯಾರ್ಥಿ ಪರಷತ್‌ನ ಸಂಸ್ಥಾಪಕ, ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, “ವಿದ್ಯಾರ್ಥಿಗಳು ದೇಶದ ಭವಿಷ್ಯತ್ತಿನ ಪ್ರಜೆಗಳು. ಸೈನಿಕರು ಯುದ್ಧಕ್ಕೆ ಹೋಗಬೇಕಾದರೆ ಯಾವರೀತಿ ತಯಾರಿ ಮಾಡುತ್ತಾರೋ ಅದೇ ರೀತಿ ಪರೀಕ್ಷೆ ಬರೆಯಲು ತಾವುಕೂಡ ತಯಾರಿ ಮಾಡಬೇಕು. ಇಂದಿನ ವಿದ್ಯಾರ್ಥಿಗಳು ಮುಂದಿನ ನಾಗರಿಕ ಸಮಾಜದ ಉನ್ನತ ಅಧಿಕಾರಿಗಳಾಗಿಯೂ ಕೆಲಸ ನಿರ್ವಹಿಸುವ ಗುರಿಯನ್ನು ಹೊಂದಿರಬೇಕು. ಮಹಾನ್ ಚೇತನಗಳ ಬಗ್ಗೆ ನಮಗೆ ಅರಿವಿರಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಹಾಯಕ ಕೈಪಿಡಿ ಬಿಡುಗಡೆ
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯ ಕುಮಾರ ಅಜಮನಿ, ಪರಿಷತ್ ಮುಖಂಡ ಸಂದೇಶ್ ಕುಮುಟಗಿ, ಶಂಕರ ಬಸರಗಿ, ಯುವರಾಜ್ ಓಲೇಕಾರ್, ಪಂಡಿತ ಯಲಗೋಡ ಮತ್ತು ವಿದ್ಯಾರ್ಥಿಗಳು ಅನೌಪಚಾರಿಕ ಸಂಸ್ಥೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.
