ಅಲ್ಪಸಂಖ್ಯಾತ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ರಾಜ್ಯದ್ಯಂತ 200 ಮೌಲಾನಾ ಆಜಾದ್ ಮಾದರಿ ತೆರೆಯಲಾಗಿತ್ತು. ಅದರಲ್ಲಿ ಒಂದು ಶಾಲೆಯು ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಮಂಜೂರು ಮಾಡಲಾಗಿತ್ತು. ಅಧಿಕಾರಿಗಳ ನಿರ್ಲಕ್ಷತನ ಚುನಾಯಿತ ಪ್ರತಿನಿಧಿಗಳ ಮುಂತಾದ ಕಾರಣಗಳಿಂದ ಮಂಜೂರಾಗಿರುವ ಆಂಗ್ಲ ಮಾಧ್ಯಮ ಮೌಲಾನ ಅಜಾದ್ ಶಾಲೆಯನ್ನು ರದ್ದುಪಡಿಸಿ ನಮ್ಮ ಮತಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ ಎಂದು ಕೆಆರ್‌ಎಸ್ ಪಕ್ಷ ಆರೋಪಿಸಿದೆ.
ಮತಕ್ಷೇತ್ರದಲ್ಲಿ ಜೆಡಿಎಸ್ ಚುನಾಯಿತ ಶಾಸಕರು ಇರುವುದರಿಂದಾಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರುಗಳು ತಾಲೂಕಿಗೆ ಬಂದಿರುವ ಮೌಲಾನ ಆಜಾರ್ ಮಾದರಿ ಶಾಲೆಯನ್ನು ಬೇರೆ ಕಡೆಗೆ ಮಂಜೂರಾತಿಯನ್ನು ಪಡೆದಿರುವುದನ್ನು ಕೆ.ಆರ್.ಎಸ್. ಪಕ್ಷವು ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಮತಕ್ಷೇತ್ರದಲ್ಲಿ 40 ಸಾವಿರಕ್ಕಿಂತಲೂ ಹೆಚ್ಚು ಅಲ್ಪಸಂಖ್ಯಾತ ಮತದಾರರಿದ್ದಾರೆ. ಅದರಲ್ಲೂ ತುಂಬಾ ಬಡತನದ ಜೀವನ ಸಾಗಿಸುವ ಕುಟುಂಬಗಳ ಸಂಖ್ಯೆ ಹೆಚ್ಚಾಗಿದ್ದು, ಅವರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಲವಾರು ದಶಕಗಳಿಂದ ವಂಚಿತರಾಗಿದ್ದಾರೆ. ಅಂತ ಕುಟುಂಬಗಳ ಮಕ್ಕಳು ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದು ನಾಡಿನ ಮತ್ತು ದೇಶದ ಸಂಪನ್ಮೂಲ ನಾಗರಿಕರಾಗುವುದನ್ನು ತಪ್ಪಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಕೆ.ಆರ್.ಎಸ್. ಪಕ್ಷವು ಖಂಡಿಸುತ್ತದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ದಲಿತರ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಠಾಣೆ ಆರಂಭಿಸಲು ಆಗ್ರಹ
ಈ ಕೂಡಲೇ ರಾಜ್ಯ ಸರ್ಕಾರ ಶಾಲೆಯನ್ನು ಮಂಜೂರು ಮಾಡುವುದರ ಮೂಲಕ ನಮ್ಮ ಭಾಗದ ಬಡ ಮಕ್ಕಳ ಅನುಕೂಲ ಮಾಡಿಕೊಡಬೇಕಾಗಿ ಕೆ ಆರ್ ಎಸ್ ಪಕ್ಷವು ಅಗ್ರಹಿಸುತ್ತದೆ. ಒಂದು ವೇಳೆ ಮಂಜೂರಾತಿ ಮಾಡದೆ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ, ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೇ, ಈ ಸಂಬಂಧ ಮನವಿಪತ್ರವನ್ನು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಹಮೀದ್ ಅಬ್ದುಲ್ ಇನಾಮದಾರ, ದುರ್ಗಪ್ಪ ಬೂದಿಹಾಳ, ಶೀನು ಹಿಪ್ಪರಗಿ, ರಾಕೇಶ ಇಂಗಳಗಿ, ಪ್ರವೀಣ ಕನಸೇ, ಸುರೇಂದ್ರ ಕುನಸಲೇ, ಭೀಮಾಶಂಕರ ಕಾಂಬಳೆ ಇತರರು ಈ ವೇಳೆ ಉಪಸ್ಥಿತರಿದ್ದರು.
