ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ವ್ಯಾಪ್ತಿಯ ಕೃಷ್ಣಾ ಕಾಲುವೆ ನೀರು ಪೋಲಾಗದಂತೆ ಕ್ರಮ ವಹಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ರೈತರು ಪ್ರತಿಭಟನೆ ನಡೆಸಿ ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತದ ಮತ್ತು ತಹಶೀಲ್ದಾರ್ ಬಿ ಎಸ್ ಕಡಕಬಾವಿಯವರಿಗೆ ಮನವಿ ಸಲ್ಲಿಸಿದರು.
“ಗ್ರಾಮದ ರೈತರು ಕೃಷಿ ಪಂಪ್‌ಸೆಟ್ ಬಳಸಿ ಮತ್ತು ಕಾಲುವೆ ಒಡೆದು ಹೊಲಗಳಿಗೆ ಹಾಗೂ ಹಳ್ಳಕ್ಕೆ ವಾಲ್ ತಿರುಗಿಸಿ ಬಿಟ್ಟು ಅಲ್ಲಿಂದ ಕೃಷಿಗೆ ಬಳಸುತ್ತಿದ್ದಾರೆ. ಕಾಲುವೆ ನೀರು ದುರುಪಯೋಗವಾದರೆ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗುತ್ತದೆ. ಹಾಗಾಗಿ ಕೂಡಲೇ ವಿಶೇಷ ಪೊಲೀಸ್ ವ್ಯವಸ್ಥೆ ಮಾಡಿ, ನೀರು ಪೋಲಾಗದಂತೆ ಎಚ್ಚರವಹಿಸಬೇಕು” ಎಂದು ಗುರುನಾಥ ಬಗಲಿ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಮೆಗಾ ಡೇರಿ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಆಗ್ರಹ
ಎಸಿಯವರು ಮಾತನಾಡಿ. “ಸೂಕ್ತ ಪೊಲೀಸ್ ಭದ್ರತೆ ನೀಡಿ ಕೃಷ್ಣಾ ಕಾಲುವೆ ನೀರು ಪೋಲಾಗದಂತೆ ಕ್ರಮ ವಹಿಸಲು ತಿಳಿಸಲಾಗುವುದು” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಈರಣ್ಣ ಗೋಟ್ಯಾಳ, ಶರಣು ಶಹಾಪುರ, ಸಂತೋಷ ಸುರಾಗಡ್ಡೆ, ರಾಜು ಆನೂರ ಸೇರಿದಂತೆ ಇತರರು ಇದ್ದರು.