ವಿದ್ಯಾರ್ಥಿ ಬದುಕೆಂಬುದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಕ್ರಿಯಾಶೀಲ ಅವಧಿ. ಇದು ಮಕ್ಕಳ ಮೌಲ್ಯಾತ್ಮಕ ವ್ಯಕ್ತಿತ್ವ ರೂಪಿಸುವ ಕಾಲಘಟ್ಟ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ವಿಜಯಪುರದಲ್ಲಿ ಹೇಳಿದರು.
ವಿಜಯಪುರ ನಗರದ ಕಾಳಿಕಾ ಮಂದಿರದಲ್ಲಿ ಉನ್ನತಿ ವಿದ್ಯಾವರ್ಧಕ ಸಂಘದಿಂದ ಆಯೋಜಿಸಿದ್ದ ಉನ್ನತಿ ಕೋಚಿಂಗ್ ಕ್ಲಾಸ್‌ನ ಸಮಾರೋಪ ಹಾಗೂ ನಿರಂತರ ತರಬೇತಿಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಇಂದಿನ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ-ತಾಯಿಗಳ ಮುಖ್ಯ ಆದ್ಯತೆಯಾಗಬೇಕು” ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, “ಮಕ್ಕಳು ಶ್ರಮವಹಿಸಿ ಅಧ್ಯಯನ ಮಾಡುವ ಪ್ರವೃತ್ತಿ ರೂಡಿಸಿಕೊಳ್ಳಬೇಕು.ಸ್ವಾವಲಂಬಿ ಬದುಕಿಗೆ ಅಗತ್ಯವಾದ ಮಾನವಿಯ ಮೌಲ್ಯ ಮತ್ತು ಜೀವನ ಕೌಶಲ್ಯ ಬೆಳಸಿಕೊಳ್ಳಬೇಕು” ಎಂದರು.
ಸಾಹಿತಿ ಆರ್ ಎಸ್ ಪಟ್ಟಣಶೆಟ್ಟಿ ಮಾತನಾಡಿ, “ಮಕ್ಕಳಿಗೆ ಆಚಾರ, ವಿಚಾರ ಕಲಿಸಿ ಉತ್ತಮ ಸಂಸ್ಕಾರ ನೀಡುವ ಜತೆಗೆ ಅಕ್ಷರ ಅಭ್ಯಾಸ ಮಾಡಲು ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು. ಪಾಲಕರ ಪ್ರೀತಿ, ವಿದ್ಯಾರ್ಥಿಗಳ ನಿರಂತರ ಪರಿಶ್ರಮದಿಂದ ಖಂಡಿತ ಗುರಿ ತಲುಪಲು ಸಾಧ್ಯ” ಎಂದರು.
ಇದನ್ನೂ ಓದಿದ್ದೀರಾ? ಟ್ರಾಫಿಕ್ ನಿಯಮಗಳಲ್ಲಿ ಈ ತಂತ್ರಜ್ಞಾನ ಬಳಸಿಕೊಂಡರೆ ಮಂಡ್ಯದಂತ ಪ್ರಕರಣ ಮರುಕಳಿಸುವುದಿಲ್ಲ
ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಕುಮಾರ ಆತನೂರ, ಸಂಘದ ಅಧ್ಯಕ್ಷ ಸಂಗಣ್ಣ ಆತನೂರ, ಮಂಜುನಾಥ ಕಾಮಗೊಂಡ, ಪುರುಷೋತ್ತಮ ಗಲಗಲಿ, ಈರಯ್ಯ ಮಠಪತಿ, ಪ್ರಕಾಶ ಬೆನೋರ, ಷಣ್ಮುಗ ಕಲಶೆಟ್ಟಿ, ರಾಜುಗೌಡ, ಗುರಪ್ಪ ಅವಟಿ, ಸುರೇಶ ಕೌಲಗಿ, ಮಲ್ಲಿಕಾರ್ಜುನ ಅತನೂರ, ಮಹೇಶ ಬೆನೋರ, ಓಂಕಾರ ನಾವಿ, ಬಸವರಾಜ ಲಾಳಸಂಗಿ ಇದ್ದರು.