ಮಗಳನ್ನು ಪ್ರೀತಿಸಿದ್ದ ಯುವಕನ ಮೇಲೆ ಯುವತಿಯ ಕುಟುಂಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಘಟನೆ ಸೋಮವಾರ ರಾತ್ರಿ ನಡೆದಿದ್ದು, ಯುವಕ ರಾಹುಲ್ ಬಿರಾದಾರ್ಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಕೃತ್ಯ ಎಸಗಿದ ಆರೋಪಿಗಳಿಗೆ ಕೆಲ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ನಗರದ ರಾಹುಲ್ ಮತ್ತು ಯುವತಿ ಐಶ್ವರ್ಯ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿ ಕುಟುಂಬಕ್ಕೆ ತಿಳಿದು, ರಾಜಿ ಪಂಚಾಯತಿ ನಡೆಸಿದ್ದರು. ಪೋಷಕರ ಮಾತಿನಂತೆ ಇಬ್ಬರು ದೂರವಾಗಿದ್ದರು.
ಆದರೆ, ಬೇಸರಗೊಂಡಿದ್ದ ಯುವಕ ಆಗ್ಗಾಗ್ಗೆ ಯುವತಿಯ ಮನೆ ಬಳಿ ಓಡಾಡುತ್ತಿದ್ದ. ಆತನಿಗೆ ಕರೆ ಮಾಡಿದ್ದ ಯುವತಿ, ಮನೆ ಎದುರು ಬಾರದಂತೆ ಕೇಳಿದ್ದಳು. ಅದಾಗ್ಯೂ, ಮಾತಿಗೆ ಮಾತು ಬೆಳೆದು, ನಿನ್ನ ಮನೆಗೆ ಬರುತ್ತೇನೆಂದ ರಾಹುಲ್, ಐಶ್ವರ್ಯ ಮನೆಗೆ ಹೋಗಿದ್ದಾನೆ.
ಈ ವೇಳೆ, ರಾಹುಲ್ ಮೇಲೆ ಯುವತಿಯ ತಂದೆ ಅಪ್ಪು ಮದರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ರಾಹುಲ್‌ಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ, ಯುವತಿಯ ತಂದೆ, ಚಿಕ್ಕಪ್ಪ, ಚಿಕ್ಕಮ್ಮಗೂ ಸುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ, ಯುವಕನೇ ಪೆಟ್ರೋಲ್ ತಂದು, ತಮ್ಮ ಮಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ್ದ ಎಂದು ಯುವತಿಯ ಕುಟುಂಬವೂ ಆರೋಪಿಸಿದೆ. ಎರಡೂ ಕುಟುಂಬದ ಸದಸ್ಯರು ಪರಸ್ಪರ ವಿರುದ್ಧ ದೂರು ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯೆಗೆ ಸರಿಯಾದ ಉದ್ಯೋಗವಿಲ್ಲದ ಯುವಕರು ಹಾದಿ ತಪ್ಪಿರುವ ನಿದರ್ಶನಗಳು