ಅಪರಿಚಿತ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಅಲ್ಮೆಲ್‌ನಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಯುವಕನನ್ನು ಅಲ್ಮೆಲ್‌ನ ಪರಶುರಾಮ ಮ್ಯಾಕೇರಿ(22) ಎಂದು ಗುರುತಿಸಲಾಗಿದೆ. ಅಲ್ಮೆಲ್‌ನ ಬಬಲೇಶ್ವರ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪರಶುರಾಮ್ ಕೊಲೆ ಆರೋಪದ ಮೇಲೆ ಕೃಷ್ಣ, ಚಿದಾನಂದ, ಮಲ್ಲು ದೇಸಾಯಿ ಮತ್ತು ಶಿವಣ್ಣ ಹೊಟಗಿ ಎಂಬ ನಾಲ್ವರನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಹಂತನಮನೆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ; ಪ್ರಕರಣ ದಾಖಲಿಸಲು ಪೊಲೀಸರ ಮೀನಮೇಷ
ವಿಜಯಪುರ ಎಸ್‌ಪಿ ರಿಷಿಕೇಶ್ ಸೋನವಾನೆ ಮಾಧ್ಯಮಗಳೊಂದಿಗೆ ಮಾತನಾಡಿ, ಪರಶುರಾಮ್ ಅತಿಯಾದ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಕೃಷ್ಣ ಮತ್ತು ಇತರರಿಗೆ ಹಣವನ್ನು ಸಾಲವಾಗಿ ನೀಡಿದ್ದರು. ಅವರು ನೀಡಬೇಕಾದುದಕ್ಕಿಂತ ಹೆಚ್ಚಿನದನ್ನು ಪಾವತಿಸುವಂತೆ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಕೃಷ್ಣ ಮತ್ತು ಇತರರು ಯೋಜನೆ ರೂಪಿಸಿ ಪರಶುರಾಮನನ್ನು ಹತ್ಯೆ ಮಾಡಿದ್ದಾರೆ” ಎಂದು ಹೇಳಿದರು.
