ಸಮಾಜದಲ್ಲಿ ಹೆಣ್ಣನ್ನು ಭೋಗದ ವಸ್ತು ರೀತಿ ಬಿಂಬಿಸುವುದನ್ನು ತಡೆಗಟ್ಟಬೇಕು. ಮೊದಲು ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹ ನಿರ್ದೇಶಕ ಫಾದರ್ ಸುಮನ್ ಬಾಲು ಹೇಳಿದರು.
ವಿಜಯಪುರ ಜೆಲ್ಲೆ ದೇವರಹಿಪ್ಪರಗಿ ತಾಲೂಕಿನ ಜೆಎಂಜೆ ಸಮಾಜ ಸೇವಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆ ಮತ್ತು ಹೊಲಿಗೆ ತರಬೇತಿ ವಿದ್ಯಾರ್ಥಿಗಳಿಗೆ ಗೌರವ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಮಹಿಳೆ ತನ್ನ ಹಕ್ಕಿಗಾಗಿ ಸತತವಾಗಿ ಹೋರಾಟ ಮಾಡಿರುವುದರ ಫಲವಾಗಿ ಇಂದು ಕನಿಷ್ಟ ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆ ಆಚರಿಸಲಾಗುತ್ತಿದೆ. ಹೋರಾಟವಿಲ್ಲದೆ ಯಾವುದೂ ಸುಲಭಕ್ಕೆ ದೊರೆಯುವುದಿಲ್ಲ. ನಿರ್ಭಯ ಘಟನೆಯತಹ ಹಲವು ಘಟನೆಗಳು ಮತ್ತೆ ಮತ್ತೆ ಮಕಳಿಸಿತ್ತಿವೆ. ಇದರ ವಿರುದ್ಧ ಹೋರಾಟ ಮಾಡುವುದರ ಮೂಲಕ ಪರ್ಯಾಯವಾಗಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಮಕ್ಕಳ ನೈತಿಕ ಮೌಲ್ಯಗಳ ಶಿಕ್ಷಣಕ್ಕೆ ಒತ್ತು ಕೊಡಬೇಕು” ಎಂದರು.
ಪ್ರಭುಗೌಡ ಲಿಂಗದಹಳ್ಳಿ ಮಾತನಾಡಿ, “ಪುರುಷ ಪ್ರಧಾನ ಮನಸ್ಥಿತಿಯಿಂದ ನಾವು ಹೊರಬರಬೇಕು. ಮಹಿಳಿಗೆ ಎಲ್ಲಾ ತರಹದ ಅವಕಾಶಗಳನ್ನು ನೀಡಿ ಅವುಗಳನ್ನು ಸದ್ಭಳಿಕೆ ಮಾಡಿಕೊಳ್ಳಲು ಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಹಾಗೂ ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸಿದರೆ ಮಾತ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆ” ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಸಚಿವರ, ಶಾಸಕರ ವೇತನ ಭತ್ಯೆ ಹೆಚ್ಚಳ ಮಾಡಿರುವುದು ವಿಪರ್ಯಾಸದ ಸಂಗತಿ: ಭಗವಾನ ರೆಡ್ಡಿ
ಕಾರ್ಯಕ್ರಮದಲ್ಲಿ ಜೆ ಎಂ ಜೆ ಸಂಸ್ಥೆಯ ನಿರ್ದೇಶಕಿ ಸಿಸ್ಟೆರ್ ಹೃದಯ ಮೆರ್ರಿ, ಪಟ್ಟಣ ಪಂಚಾಯತಿ ಮಾಜಿ ಸದಸ್ಯೆ ಗೌರಮ್ಮ, ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಸುರೇಖಾ ಬಾಗಲಕೋಟೆ, ಎದ್ದೇಳು ಕರ್ನಾಟಕ ಜಿಲ್ಲಾ ಮುಖಂಡ ಅಬ್ದುಲ್ ಖಾದರ್, ಭುವನೇಶ್ವರಿ ಕಾಂಬಳೆ ಹಾಗೂ ಜೆ ಎಂ ಜೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.