ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹುಮುಖ್ಯವಾದ್ದುದು. ಅವರು ಮನಸು ಮಾಡಿದರೆ ದೇಶವನ್ನೆ ಆಳಬಲ್ಲರು ಆದರೆ ಈಗಿನ ಯುವಕರು ತಮ್ಮ ಯೌವನಾವಸ್ಥೆಯಲ್ಲಿ ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಎಂದು ಮುಧೋಳದ ಅಂತ್ಯೋದಯ ಸಂಸ್ಥೆ ಮುಖ್ಯಸ್ಥರಾದ ಆಂತೋನಿ ಸಿ ಬೇಸರ ವ್ಯಕ್ತಪಡಿಸಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ವಿಜಯಪುರ ಹಾಗೂ ಜೀವನಜ್ಯೋತಿ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಒಕ್ಕೂಟದ ಸಹಯೋಗದಲ್ಲಿ ವಿಜಯಪುರ ನಗರದ ಲೊಯೋಲಾ ಪಿ ಯು ಕಾಲೇಜು ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಆಶಾಕಿರಣ ಯುವಜನರಿಗೆ ಸಾಮಾಜಿಕ ವಿಶ್ಲೇಷಣೆ ಕುರಿತು ಎರಡು ದಿನದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
“ಸಮಾಜದಲ್ಲಿ ನಡೆಯುವ ತಾರತಮ್ಯ, ಜಾತಿ ಭೇದ, ಹಾಗೂ ಸಮಾನತೆಯ ವ್ಯವಸ್ಥೆಯ ವಿರುದ್ದ ಯುವಜನರು ಮುಂದಾಗದೇ ಮೌನ ವಹಿಸುತ್ತಿದ್ದಾರೆ. ಇದು ಆಘಾತಕಾರಿ ವಿಷಯವಾಗಿದೆ. ಸಮಾಜದ ಒಂದು ಮುಖ್ಯ ವ್ಯವಸ್ಥೆಯ ಬಗ್ಗೆ ಯುವಕರು ತಿಳಿದುಕೊಳ್ಳಬೆಕು, ಸಂಘಟಿತರಾಗಬೆಕು, ಸಂವಿಧಾನ ಬದ್ಧ ಬದುಕು ಬದಕಲು ಮುಂದಾಗಬೇಕು” ಎಂದು ಕರೆ ನಿಡಿದರು.
ವಿಮುಕ್ತ ದೇವದಾಸಿ ತಾಯಂದಿರ ವೇದಿಕೆ ಸಂಚಾಲಕ ಚಂದಲಿಗ ಕಲಾಲಬಂಡಿ ಅತಿಥಿ ಭಾಷಣ ಮಾಡಿ, “ಯುವಕರು ಸಮಾಜದಲ್ಲಿ ಬದಲಾಣೆ ಮಾಡುವುದಾದರೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಹಾಗೂ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದರೆ ಸಮುದಾಯದಲ್ಲಿ ಅಥವಾ ಸಮಾಜದಲ್ಲಿ ಅತಿ ಶೀಘ್ರದಲ್ಲಿ ಗಣನೀಯ ಪರಿವರ್ತನೆ ಕಾಣಲು ಸಾದ್ಯವಾಗಿದೆ. ಅದಕ್ಕೆ ಇಂತಹ ಅರ್ಥಪೂರ್ಣವಾದ ತರಬೇತಿಗಳಲ್ಲಿ ಭಾಗಿಯಾಗಬೇಕು: ಎಂದು ಯುವಪೀಳಿಗೆಯನ್ನು ಉತ್ತೇಜೀಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ವಿದ್ಯಾರ್ಥಿಗಳು ಗಾಂಧಿಯವರ ಆದರ್ಶ ಅಳವಡಿಸಿಕೊಳ್ಳಬೇಕು: ಕಸಾಪ ಅಧ್ಯಕ್ಷ ಪಾಂಡುರಂಗ ಜಟ್ಟಗನ್ನವರ
ಜೀವನ ಜ್ಯೋತಿ ಮಾಜಿ ದೇವದಾಸಿ ತಾಯಂದಿರ ಒಕ್ಕೂಟ ಜಿಲ್ಲಾಧ್ಯಕ್ಷೆ ರೇಣುಕಾ ಎಂಟಮಾನ್ ಮಾತನಾಡಿ, “ದೇವದಾಸಿ ಮಕ್ಕಳನ್ನು ಉದ್ದೇಶಿಸಿ ಅವರವರ ತಾಯಾಂದಿರ ಕಷ್ಟವನ್ನು, ನೋವನ್ನು, ಅರ್ಥಮಾಡಿಕೊಂಡು ತಮ್ಮ ತಾಯಾಂದಿರಿಗೆ ಸರ್ಕಾರದಿಂದ ಸಿಗಬೇಕಾಗಿರುವ ಸೌಲಭ್ಯ ಪಡೆಯುವುದ್ದಕ್ಕಾಗಿ ಪಣತೊಟ್ಟು ಹೋರಾಡಬೇಕು. ತಮ್ಮ ತಾಯಂದಿರ ಕನಸು ನನಸು ಮಾಡಬೇಕು” ಎಂದು ತಿಳಿಸಿದ್ದರು.