“ದಲಿತ ಹಿರಿಯ ಹೋರಾಟಗಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಾಗವಾರ ಬಣದ ರಾಜ್ಯ ಸಂಚಾಲಕರಾಗಿದ್ದ ಲಕ್ಷ್ಮಿನಾರಾಯಣ ನಾಗವಾರ ಅವರ ನುಡಿ ನಮನ ಕಾರ್ಯಕ್ರಮ ನಾಳೆ ಜರುಗಲಿದೆ” ಎಂದು ಡಿ ಎಸ್ ಎಸ್ ಮುಖಂಡ ಚೆನ್ನು ಕಟ್ಟಿಮನಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಜಯಪುರ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಲಕ್ಷ್ಮೀನಾರಾಯಣ ನಾಗವಾರ ಅವರ ನುಡಿ ನಮನ ಕಾರ್ಯಕ್ರಮವು “ಕಂದಗಲ್ ಹನುಮಂತರಾಯ ರಂಗಮಂದಿದಲ್ಲಿ ಬೆಳೆಗ್ಗೆ 11:30ಕ್ಕೆ ನುಡಿ ನಮನ ಕಾರ್ಯಕ್ರಮ ಜರುಗಲಿದೆ” ಎಂದರು.
“ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಅನಿಲ ಹೊಸಮನಿ ಅವರ ಭಾಷಾಂತರ ಮಾಡಿದ “ಡಾ ಬಿ ಆರ್ ಅಂಬೇಡ್ಕರ್” ಬರಹ ಮತ್ತು ಭಾಷಣಗಳ ಶಿಕ್ಷಣ, ವಿದ್ಯಾರ್ಥಿ, ಯುವಜನ’ ಕೃತಿಯನ್ನು ಲಕ್ಷ್ಮೀನಾರಾಯಣ ನಾಗವಾರ ಅವರಿಗೆ ಅರ್ಪಿಸಲಿದ್ದಾರೆ. ಈ ಕೃತಿಯನ್ನು ಲಡಾಯಿ ಪ್ರಕಾಶನ ಹೊರತಂದಿದೆ” ಎಂದು ಹೇಳಿದರು.
“ಜಿಲ್ಲೆಯ ಜನತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನುಡಿನಮನ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು” ಚೆನ್ನು ಕಟ್ಟಿಮನಿ ಮನವಿ ಮಾಡಿದರು.
