ವಚನಗಳನ್ನು ಓದುವುದರಿಂದ ಮನುಷ್ಯನಲ್ಲಿ ಬದಲಾವಣೆ ತರುತ್ತವೆ. ಇಂದಿನ ಮಕ್ಕಳಿಗೆ ವಚನಗಳು ದಾರಿ ದೀಪ. ಅಲ್ಲಮ ಪ್ರಭುಗಳು ಅಂದಿನ ಕಾಲದಲ್ಲಿ ದೀನ ದಲಿತ ಶೋಷಿತ ವರ್ಗದವರ ಜನರ ಧ್ವನಿಯಾಗಿದ್ದರು ಎಂದು ಶಾಲಿನಿ ಮಾಣಿಕ್ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಘಟಕ, ತಾಲೂಕು ಮಹಿಳಾ ಕದಳಿ ವೇದಿಕೆ, ಮೆಟ್ರಿಕ್ ನಂತರದ ಡಿ ದೇವರಾಜ ಅರಸ್ ವಿದ್ಯಾರ್ಥಿನಿಯರ ವಸತಿ ನಿಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದ ಬಸವಕಲ್ಯಾಣದಲ್ಲಿರುವ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಶರಣ ಅಲ್ಲಮಪ್ರಭುಗಳ ಕುರಿತು ಮಾತನಾಡಿ, “ಅಲ್ಲಮಪ್ರಭುಗಳ ವಚನಗಳು ಸರ್ವಕಾಲಿಕ ಸತ್ಯ. ಅನುಭವ ಮಂಟಪದಲ್ಲಿರುವ ಶರಣ ಶರಣೆಯರು ಜತೆಗೂಡಿ ತಮ್ಮ ಅನುಭವದ ಸಾರವನ್ನು ಜನರಿಗೆ ತಿಳಿಸುತ್ತಿದ್ದರು. ಬಸವಣ್ಣನವರು, ಅಕ್ಕಮಹಾದೇವಿಯವರು, ಚನ್ನಬಸವಣ್ಣ ಸಿದ್ದರಾಮಯ್ಯ, ಮಾದರ ಚೆನ್ನಯ್ಯ, ಸಮಗಾರ ಹರಳಯ್ಯ ಇವರ ಜೊತೆಗೂಡಿ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಮನುಷ್ಯ ಕಾಯಕದಿಂದ ಶ್ರೇಷ್ಠನಾಗುತ್ತಾನೆ ಎನ್ನುವ ತತ್ವವನ್ನು ಪ್ರತಿಪಾದಿಸಿದರು” ಎಂದು ಹೇಳಿದರು.
ಪಾರ್ವತಿ ಸೋಮಶೇಖರ್ ಸುರಪುರ, ದತ್ತಿದಾನಿಗಳ ಫೋಟೋ ಪೂಜೆ ಹಾಗೂ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆಯಾದ ಗಂಗಾ ಗಲಗಲಿ ತಮ್ಮ ಆಶಯ ನುಡಿಯಲ್ಲಿ ಶರಣ ಸಾಹಿತ್ಯ ಬೆಳೆದು ಬಂದ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಮಕ್ಕಳಿಗೆ ತಪ್ಪದೇ ದಡಾರ ಲಸಿಕೆ ಹಾಕಿಸಬೇಕು: ಡಾ.ಹನುಮಂತಪ್ಪ
ಕಾರ್ಯಕ್ರಮದ ದತ್ತಿದಾನಿ ದಿ. ಸಂಗಮ್ಮ ಸುರಪುರ ಹಾಗೂ ದಿ. ಸಂದೇಶ್ ಸುರಪುರ ಇವರ ಕುರಿತು ಶರಣ ಸಾಹಿತ್ಯ ಅಧ್ಯಕ್ಷ ಬಿ ಎಸ್ ಪಾಟೀಲ್ ದತ್ತಿಸ್ಮರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ವಸತಿ ಮೇಲ್ವಿಚಾರಿಕಿ ಎಸ್ ಎಸ್ ಜಟಗೊಂಡ ಮಾತನಾಡುತ್ತ, ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ” ಎಂದರು.
ಎಸ್ ಐ ಸೂಗೂರು ಸ್ವಾಗತಿಸಿದರು. ನಿರೂಪಣೆ ಕುಮಾರಿ ಐಶ್ವರ್ಯ ಮಾವಿನ ಮರ ಮಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ಈ ಸಂದರ್ಭದಲ್ಲಿ ಸಾವಿತ್ರಿ ವಾಲಿಕಾರ್ ಸೇರಿದಂತೆ ಸಿಬ್ಬಂದಿಗಳು ಇದ್ದರು.