ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದ ಭೀಮಾ ನದಿಗೆ 6000 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ ಕರ್ನಾಟಕದ ಬರಗುಡಿ ಗ್ರಾಮದ ಬಳಿಯ ನದಿಗೆ ನೀರು ಪ್ರವೇಶಿಸಿದೆ. ನೀರಿನ ಸಮಸ್ಯೆ ಎದುರಿಸುತ್ತಿದ್ದ ಚಡಚಣ, ಇಂಡಿ, ಆಲಮೇಲ, ಸಿಂಧಗಿ ಭಾಗದ 26 ಗ್ರಾಮಗಳಿಗೆ ಇದರಿಂದ ಅನುಕೂಲವಾಗಲಿದೆ.
ಈ ಹಿಂದೆ ಹಲವು ಬಾರಿ ಪ್ರಗತಿಪರ ರೈತ ಸಂಘಟನೆಗಳು ಹೋರಾಟ ಮಾಡಿರುವ ಕಾರಣ ಈಗ ಸಮಸ್ಯೆಗೆ ಪರಿಹಾರ ಸಿಕ್ಕಿರುವುದು ರೈತರಿಗೆ ಸಂತಸವಾಗಿದೆ. ಶಾಸಕ ವಿಠಲ್ ಕಟಕದೊಂಡ, ವಿಜಯಪುರ ಜಿಲ್ಲಾಧಿಕಾರಿಗಳು, ಸೊಲ್ಲಾಪುರದ ಜಿಲ್ಲಾಧಿಕಾರಿ, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಸಂಸದ ಪ್ರಣತಿ ಸಿಂಧೆ ಅವರಿಗೆ ಮನವಿ ಮಾಡಿಕೊಂಡ ಬಳಿಕ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಾರ್ವಜನಿಕರ ದಾಹ ತಣಿಸಲು ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಕೆ
ಭೀಮ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಾಲ್ಕು ಬ್ಯಾರೇಜ್‌ಗಳು ಭರ್ತಿಯಾಗಿದ್ದು, ಮುಂದಿನ ಭಾಗಕ್ಕೆ ನೀರು ಸುಗಮವಾಗಿ ಹರಿಯಲಿದೆ. ಗ್ರಾಮಗಳಿಗೆ ಮಾತ್ರವಲ್ಲದೆ ಮಹಾರಾಷ್ಟ್ರದ ಅಕ್ಕಲಕೋಟಕ್ಕೂ ನೀರು ಲಭಿಸಲಿದೆ.