ವಿಜಯಪುರ ನಗರದ ಗಾಂಧಿ ಚೌಕ್‌ನಲ್ಲಿರುವ ಮಹಿಳಾ ಶಾಲಾ ಕಾಲೇಜು ಮೂಲ ಸೌಕರ್ಯಗಳಿಲ್ಲದೆ ನಲುಗುತ್ತಿದೆ. ಅಲ್ಲದೇ ಅದೇ ಹಳೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿನಿಯರಿಗಾಗಿ ನೂತನ ಕ್ಯಾಂಪಸ್ ಮಂಜೂರು ಮಾಡಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ದವಿಪ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ ಅಜಮನಿ ಮಾತನಾಡಿ, :ಗಾಂಧೀ ಚೌಕ್ ಕ್ಯಾಂಪಸ್ ನಲ್ಲಿರುವ ಮಹಿಳಾ ಶಾಲಾ ಕಾಲೇಜು ಐತಿಹಾಸಿಕ ಹಿನ್ನಲೆವುಳ್ಳದ್ದಾಗಿದೆ. ಬ್ರಿಟಿಷರ ಕಾಲದಿಂದಲ್ಲಿ ಪ್ರಾರಂಭವಾದ ಈ ಕಾಲೇಜು ತನ್ನದೇ ಆದ ವಿಶೇಷತೆ ಹೊಂದಿದೆ. ಇಲ್ಲಿ ಒಂದರಿಂದ ಪದವಿವರೆಗೆ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಾರೆ. ಆದರೆ ಈ ಕಾಲೇಜು ಹಳೇ ಶಿಥಿಲಗೊಂಡ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಕಲಿಯಲು ಬರುವ ವಿದ್ಯಾರ್ಥಿಗಳಿಗನುಗುಣವಾಗಿ ಕಟ್ಟಡಗಳು, ಕೋಣೆಗಳು, ಗ್ರಂಥಾಲಯ, ಮಹಿಳಾ ವಿಶೇಷ ಕೋಣೆಗಳು, ಗಣಕಯಂತ್ರದ ಕೊಠಡಿಗಳು, ವಿವಿಧ ತರಬೇತಿಗಳ ವ್ಯವಸ್ಥೆಗಳನ್ನ ಇಲ್ಲಿವರೆಗೆ ನೀಡದೆ ಇರುವುದು ಜನಪ್ರತಿನಿಧಗಳ ನಿಶ್ಕಾಳಜಿಯಾಗಿದೆ. ಕೂಡಲೇ ಇಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು” ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಯ ವಿಚಾರವನ್ನ ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ, ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲು ಕರೆ ಕೊಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಶಿಥಿಲಗೊಂಡಿರುವ ಬಂಗಾರ ಗುಂಡಿಯ ಸರ್ಕಾರಿ ಶಾಲೆ: ಜೀವ ಭಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು!
ಈ ಸಂದರ್ಭದಲ್ಲಿ ಸಂದೇಶ್ ಕುರಿ, ಯಮನೂರಿ ಮಾದರ, ಯಾಶೀನ್ ಇನಾಮದಾರ, ವಿರೇಶ್ ಕೊಪ್ಪಳ, ಪ್ರತಾಪ, ಸೌಮ್ಯ, ವಿಜಯಲಷ್ಮಿ, ವಿದ್ಯಾರ್ಥಿನಿಯರು ಇದ್ದರು.