ಮೈಸೂರು ಭಾಗದಲ್ಲಿ ವಿಜಯನಗರ ಅರಸರ ಕಾಲದ ಮುಂದುವರಿದ ಮತ್ತು ಪ್ರಾದೇಶಿಕವಾಗಿ ತನ್ನದೇ ಆದ ಭಿನ್ನತೆಯನ್ನು ಮೈಗೂಡಿಸಿಕೊಂಡು ನಾಲ್ಕೈದು ಶತಮಾನದ ಚರಿತ್ರೆ ಹೊಂದಿದ ಕಲಾ ಶೈಲಿಯೇ ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಯ ಶೈಲಿ ಎಂದು ಹಿರಿಯ ಕಲಾವಿದ ಪಿ ಎಸ್ ಕಡೆಮನಿ ತಿಳಿಸಿದರು.
ವಿಜಯಪುರ ನಗರದ ಚಾಣಕ್ಯ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಲಲಿತ ಅಕಾಡೆಮಿ ಹಾಗೂ ಚಾಣಕ್ಯ ಕಾಲೇಜು ಆಶ್ರಯದಲ್ಲಿ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೇಡಿ ನಡೆದ ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪಿ ಎಸ್ ಕುಮಾರ ಮಾತನಾಡಿ, “ಕಲಾ ಪ್ರಕಾರಗಳನ್ನು ಪುನರ್ ಬೆಳೆಸುವ ಕಾರ್ಯಗಳು ತುರ್ತಾಗಿ ಆಗಬೇಕಾಗಿದೆ. ಈ ಕಲೆ ಉಳಿಯಬೇಕಾದರೆ ಯುವ ಕಲಾವಿದರು ತಮ್ಮ ಕಲಾಕೃತಿಗಳಲ್ಲಿ ಈ ರೀತಿಯ ಶೈಲಿಗಳನ್ನು ಬೆಳೆಸಿಕೊಳ್ಳಬೇಕು” ಎಂದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಷ್ಣು ಸಿಂಧೆ ಮಾತನಾಡಿ, “ವಿಜಯನಗರ ಅರಸರು ತಮ್ಮಲ್ಲಿ ವಿಜಯನಗರ ಶೈಲಿಯ ಕಲೆಯನ್ನು ಬೆಳೆಸಿದರು. ಅವರಿಗೆ ಸಾಮಂತರಾಗಿದ್ದ ಮೈಸೂರು ಒಡೆಯರು ತಮ್ಮ ರಾಜ್ಯದಲ್ಲಿ ಅಂದು ಈ ಮೈಸೂರು ಶೈಲಿಯ ಚಿತ್ರಕಲೆಯನ್ನು ಬೆಳೆಸಿದರು. ಈ ಎರಡೂ ಶೈಲಿಗಳಿಂದ ನಮ್ಮ ನಾಡು ಇಂದು ವಿಶ್ವಾದ್ಯಂತ ಹೆಸರು ಪಡೆದಿದೆ. ಯುವ ಕಲಾವಿದರು ಮತ್ತಷ್ಟು ಈ ಶೈಲಿಯ ಕಲೆಯನ್ನು ಬೆಳಸಲಿ” ಎಂಸು ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಗ್ರಾಮ ಪಂಚಾಯಿತಿ ಉಪಚುನಾವಣೆ; ಸಂತೆ, ಜಾತ್ರೆ ನಿಷೇಧ
ಈ ಸಂದರ್ಭದಲ್ಲಿ ಅಕಾಡೆಮಿಯ ರಿಜಿಸ್ಟರ್ ಬಿ ನೀಲಮ್ಮ, ಅಕಾಡೆಮಿ ಸದಸ್ಯೆ ರಾಜೇಶ್ವರಿ ಮೋಪಗಾರ, ಎಚ್ ಎನ್ ರವೀಶ್, ಚಾಣಕ್ಯ ಕಾಲೇಜಿನ ಪ್ರಾಚಾರ್ಯರಾದ ಎಸ್ ಟಿ ಮರೆವಾಡ, ವೆಂಕಟೇಶ ಬಡಿಗೇರ, ಬಾಬುರಾವ ನಡೋನಿ, ಆಶಾ ನಡೋಣಿ, ರಮೇಶ್ ಚೌವ್ಹಾಣ ಸೇರಿದಂತೆ ಇತರರು ಇದ್ದರು.