ವಿಜಯಪುರಕ್ಕೆ ತೆರಳುತ್ತಿದ್ದ ಬಸ್‌ನ ಟೈರ್ ಸ್ಪೋಟಗೊಂಡು, ಇಡೀ ಬಸ್ ಹೊತ್ತಿ ಉರಿದಿರುವ ಘಟನೆ ವಿಜಯಪುರದ ಹಿಟ್ಟನಹಳ್ಳಿ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಜನತಾ ಟ್ರಾವೆಲ್ಸ್‌ನ ಬಸ್ ಹೊತ್ತಿ ಉರಿದಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೆದ್ದಾರಿಯಲ್ಲಿ ತೆರಳುವಾಗಿ ಬಸ್‌ನ ಟೈರ್ ಸ್ಪೋಟಿಸಿದೆ. ಕೂಡಲೇ, ಪ್ರಯಾಣಿಕರೆಲ್ಲರೂ ಬಸ್‌ನಿಂದ ಕೆಳಗಿಳಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇಡೀ ಬಸ್ ಸುಟ್ಟುಹೋಗಿದೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳ ಬಂದು ಬೆಂಕಿ ನಂದಿಸಿದ್ದಾರೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.