ಪ್ರಸ್ತುತ ದಿನಗಳಲ್ಲಿ ಸಮಾಜಮುಖಿ ಕವನ ರಚನೆ ಬಹಳ ಅವಶ್ಯಕ. ಕನ್ನಡ ಸಾಹಿತ್ಯ ಉಗಮವಾಗಿದ್ದೇ ಕವಿತೆಗಳಿಂದ ಎಂದು ಸಿಂದಗಿಯ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಅಧ್ಯಾಪಕ ಶಿವಪ್ಪಗೌಡ ಬಿರಾದಾರ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಆದರ್ಶ ವಿದ್ಯಾಲಯ ಆಯೋಜಿಸಿದ್ದ ‘ಕನಾ೯ಟಕ ಸಂಭ್ರಮ 50’ ಹಾಗೂ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯನ್ನು ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, “ಕವನ ಸುಮ್ಮನೆ ಹುಟ್ಟುವುದಿಲ್ಲ. ಸಮಾಜದಲ್ಲಿ ಆಗಿಹೋದ ಘಟನೆಗಳ ಅನುಭವದ ಸಾರ ಕವನದಲ್ಲಿರುತ್ತದೆ. ಕಾವ್ಯ ರಚನೆಯಲ್ಲಿ ಕೇವಲ ಕಲ್ಪನೆಗಳಿದ್ದರೆ ಸಾಲದು, ಸಾಮಾಜಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಇರಬೇಕು. ಜೊತೆಗೆ ಕವನ ಆಲಿಸಿದಾಗ ಮನಸ್ಸಿಗೆ ನೆಮ್ಮದಿ ಉಂಟುಮಾಡಲು ಆಧ್ಯಾತ್ಮಿಕ ಚಿಂತನೆಗಳು ಇರಬೇಕು” ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿ, “ಸರ್ಕಾರಿ ನೌಕರರು ಕನ್ನಡ ಸಾರಸ್ವತ ಲೋಕಕ್ಕೆ ನೌಕರರ ಕೊಡುಗೆ ಅನನ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ಸರಕಾರಿ ನೌಕರರ ಸಂಘದ ವತಿಯಿಂದ ಸಹಾಯ ಸಹಕಾರ ನೀಡಲಾಗುವುದು” ಎಂದರು.
ಕಾರ್ಯಕ್ರಮದಲ್ಲಿ ಅಶೋಕ ಶುಲ್ಪಿ ಶಾಂತಪ್ಪ, ರಾಣಾಗೋಳ ಭೀಮಣ್ಣ ಹೇರೂರ, ರಾಮಪ್ಪ ಹಡಪದ, ರಮೇಶ ಪವಾರ, ರಮೇಶ ಚಟ್ಟರಕಿ, ಅಮರ ಗಾಯಕವಾಡ, ಮಲ್ಲು ಘತ್ತರಗಿ, ಅಂಬಿಕಾ ಪಾಟೀಲ, ಮಲ್ಲಮ್ಮ ಬಿರಾದಾರ, ನಟರಾಜ ಕುಂಬಾರ, ಸಿ ಎಮ್ ಪಾಟೀಲ, ಮಲ್ಲನಗೌಡ ಪಾಟೀಲ, ಗಾಯತ್ರಿ ಪಾಟೀಲ, ರಾಜಶೇಖರ ಕಂಬಾರ, ಶಾರದಾ ಮಂಗಳೂರಿನ ಮುಂತಾದವರು ಉಪಸ್ಥಿತರಿದ್ದರು