ಭಾರತೀಯತೆ ಎನ್ನುವುದು ನಾಮವಲ್ಲ, ಅದು ಪ್ರತಿಯೊಬ್ಬರ ನಾಡಿಯಲ್ಲಿ ಸೇರಿಕೊಂಡಿರುವ ಆತ್ಮೀಯತೆ ಎಂದು ವಿಜಯಪುರದ ಖ್ಯಾತ ವೈದ್ಯೆ ರೇಖಾ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ʼಇದಾತಯೆ ಅದಬೆ ಇಸ್ಲಾಮಿ ಹಿಂದ್ʼ ಎನ್ನುವ ಸಾಹಿತ್ಯಿಕ ಸಂಸ್ಥೆ ಹಮ್ಮಿಕೊಂಡಿದ್ದ ಬಹುಭಾಷಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಎಲ್ಲ ಕವಿತೆಗಳ ಸಮಾನತೆಯನ್ನಾಧರಿಸಿದ ಒಕ್ಕೂಟ ಭಾರತ ವ್ಯವಸ್ಥೆಗೆ ಇಂದು ಅಗತ್ಯವಾಗಿರುವ ವಿಚಾರಗಳನ್ನು ವ್ಯಕ್ತಪಡಿಸಿ ಪ್ರಬುದ್ಧ ಭಾರತ ಮತ್ತು ಸಮತೆಯ ಭಾರತ ರಚನೆಯಾಗಬೇಕಾದರೆ ಭಾರತೀಯತೆಯ ಜೊತೆಗೆ ಭ್ರಾತೃತ್ವ ಭಾವನೆಯನ್ನೂ ಬೆಳಸಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಭಾರತೀಯ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮೌಲಾನಾ ಅಬುಲ್ ಕಲಾಂ ಆಜ಼ಾದ್ ಪಾತ್ರರಾಗಿದ್ದರು: ಮುಖ್ಯಶಿಕ್ಷಕ ಖಾಜಿ
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನವಾಜ಼್ ಖಾನ್ ಮಾತನಾಡಿ, “ಭಾರತೀಯತೆ ಉಳಿಯುವುದು, ಪ್ರೀತಿ ಮತ್ತು ಭ್ರಾತೃತ್ವದಿಂದಲೇ ಹೊರತು ದ್ವೇಷ, ಅಸೂಯೆಯಿಂದಲ್ಲ” ಎಂದರು.
ಕವಿಗೋಷ್ಠಿಯಲ್ಲಿ ಮೆಹಬೂಬ ಸಾಹೇಬ, ಸಾಹೇಬಲಾಲ ನದಾಫ ಸೇರಿದಂತೆ ಇತರರು ತಮ್ಮ ಕವಿತೆಗಳನ್ನು ವಾಚನ ಮಾಡಿದರು.