ವಿಜಯಪುರ | ಇಂಡಿ ಪ್ರತ್ಯೇಕ ಜಿಲ್ಲೆ ರಚನೆ ಮತ್ತು ಆರ್ಟಿಕಲ್ 371(ಜೆ) ಸೇರ್ಪಡೆಗೆ ಆಗ್ರಹ

Date:

Advertisements

ಇಂಡಿ ಪ್ರತ್ಯೇಕ ಜಿಲ್ಲಾ ರಚನೆ ಘೋಷಣೆ ಹಾಗೂ ಸಂವಿಧಾನ ವಿಧಿ 371(ಜೆ) ಸೇರ್ಪಡೆಗೆ ಆಗ್ರಹಿಸಿ ಇಂಡಿ ಜಿಲ್ಲಾ ಹೋರಾಟ ಸಮಿತಿ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇಂಡಿ ಅಡತ(ಎಪಿಎಂಸಿ) ವ್ಯಾಪಾರಸ್ಥರು, ಎಪಿಜೆ ಅಬ್ದುಲ್ ಕಲಾಂ, ಡಿಎಸ್‌ಎಸ್‌ ಒಕ್ಕೂಟ, ಮಾಜಿ ಸೈನಿಕರ ಸಂಘ, ಅನುದಾನ ರಹಿತ-ಸಹಿತ ಶಾಲಾ ಕಾಲೇಜುಗಳು, ಸಮಸ್ತ ಕಿರಾಣಿ ವ್ಯಾಪಾರಸ್ಥರ ಸಹಯೋಗದಲ್ಲಿ ಪ್ರತಿಭಟನೆ ನಡೆಸಿದರು.

“ವಿಜಯಪುರ ಜಿಲ್ಲೆಯಲ್ಲಿನ ಸಮಗ್ರವಾದ ಇಂಡಿ ತಾಲೂಕು ತೀವ್ರ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನೂ ಪ್ರಗತಿ ಕಾಣಬೇಕಾಗಿದೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisements

“ಒಂದು ಜಿಲ್ಲೆಯಾಗಲು ಸಂಬಂಧಿಸಿದಂತೆ ಆ ಪರಿಸರದಲ್ಲಿ ಬೇಕಾಗಿರುವ ಪೂರಕ ಅಂಶಗಳು ಇಂಡಿಯಲ್ಲಿ ಸಾಕಷ್ಟು ಇವೆ. ಅದರಂತೆ ಪದವಿ ಕಾಲೇಜುಗಳು, ಎಂಜಿನಿಯರಿಂಗ್/ಡಿಪ್ಲೋಮಾ ಕಾಲೇಜುಗಳು, ಪ್ಯಾರಾ ಮೆಡಿಕಲ್/ನರ್ಸಿಂಗ್ ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳು‌ ಸೇರಿದಂತೆ ಹಲವಾರು ವೈವಿದ್ಯಮಯ ಸ್ವರೂಪದ ಕಾಲೇಜುಗಳ ಸ್ಥಾಪನೆಗೆ ಹಾಗೂ ಅವುಗಳ ಸಂಬಧಿತ ಗಡಿನಾಡು ಅಭಿವೃದ್ಧಿಗಾಗಿ ಸದರಿ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಹಾಗೆಯೇ ಇಂಡಿ ನಗರವನ್ನು ಸಂವಿಧಾನದ ವಿಧಿ 371(ಜೆ) ಅಡಿ ಸೇರ್ಪಡೆಗೆ ಶೀರ್ಘದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜ್ಯಾದ್ಯಂತ ಹೆಚ್ಚುವರಿ ಬಸ್‌ ಒದಗಿಸಲು ಆಗ್ರಹ

ಈ ವೇಳೆ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಜಟ್ಟಪ್ಪ ರವಳಿ, ಗೌರವಾಧ್ಯಕ್ಷ ಭೀಮಣ್ಣ ಕೌಲಗಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾಳೆ, ಉಪಾಧ್ಯಕ್ಷ ಇಲಿಯಾಸ್ ಬೋರಾಮಣಿ, ಜಾವೀದ್ ಮೋಮಿನ, ಬಾಬುರಾವ ಗುಡಿಮಣಿ ಡಿಎಸ್‌ಎಸ್ ತಾಲೂಕು ಮುಖಂಡರುಗಳಾದ ಧರ್ಮರಾಜ ವಾಲಿಕಾರ, ಮೆಹಬೂಬ್ ಅರಬ್, ಸದಾಶಿವ ಪ್ಯಾಟಿ, ರಮೇಶ್ ಕಲ್ಯಾಣಿ, ಮಹೇಶ್ ಹೊನ್ನ ಬಿಂದ್ಗಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರುಗಳಾದ ರುಕುಮುದ್ದೀನ್ ತದ್ದೇವಾಡಿ, ಶೇಖರ್ ನಾಯಕ್, ಮಹಿಳಾ ಬ್ಲಾಕ್ ಅಧ್ಯಕ್ಷರುಗಳಾದ ನಿರ್ಮಲ ತಳಕೇರಿ, ಸುಗಂಧ ಬಿರಾದಾರ, ಸಂಜುದಾದ ರಾಥೋಡ್, ಮಲ್ಲನಗೌಡ ಪಾಟೀಲ್, ಜೀತಪ್ಪ ಕಲ್ಯಾಣಿ, ಶಿವಯೋಗಪ್ಪ ಚೆನ್ನಗೊಂಡ, ಹುಚ್ಚಪ್ಪ ತಳವಾರ, ಆಸಿಫ್ ಕಾರಬಾರಿ ಸೇರಿದಂತೆ ಹಲವು ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು, ಗಣ್ಯರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X