ನೀರಾವರಿ ಸೌಲಭ್ಯ ದೊರೆತರೆ ರೈತನ ಬದುಕು ಹೇಗೆ ಬದಲಾಗಬಹುದು ಎಂಬುದಕ್ಕೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಸಿದ್ದಾಪುರ ಬಳಿಯ ಮಾನೆನದೊಡ್ಡಿ ಗ್ರಾಮದ ರೈತ ವಸಂತ ಬೀರಪ್ಪ ಮಾನೆ ಅವರ ಕೃಷಿ ಬದುಕು ಸಾಕ್ಷಿಯಾಗಿದೆ.
ಮಾನೆ ಅವರ ಆಹ್ವಾನದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ, ರೈತನ ತೋಟಕ್ಕೆ ಭೇಟಿ ನೀಡಿ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿದರು. ಇದೇ ವೇಳೆ ರೈತ ಮಾನೆ ಅವರು ಸಚಿವರಿಗೆ ತಾವು ಬೆಳೆದ ಹೂವು ಹಾಗೂ ತೆಂಗಿನಕಾಯಿ ನೀಡಿ ಆತ್ಮೀಯವಾಗಿ ಗೌರವಿಸಿದರು.
“16 ಎಕರೆ ಜಮೀನು ಇದ್ದರೂ ಈ ಹಿಂದೆ ನೀರಾವರಿ ಸೌಲಭ್ಯವಿಲ್ಲದೆ ಕೃಷಿಯಿಂದ ಜೀವನ ಕಟ್ಟಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ನೆರೆಯ ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕೆ ತೆರಳಬೇಕಾಗಿತ್ತು. ಆದರೆ, ತಾವು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳ ಪರಿಣಾಮ ಇಂದು ನಮ್ಮ ಹೊಲದಲ್ಲಿ ಹೂವು ಅರಳುತ್ತಿವೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇನೆ” ಎಂದು ಮಾನೆ ಸಂತಸ ಹಂಚಿಕೊಂಡರು.
ಶ್ರಾವಣ ಮಾಸದಲ್ಲಿ ಹೂವುಗಳ ಮಾರಾಟದಿಂದ ಪ್ರತಿದಿನ ಸರಾಸರಿ ₹4 ಸಾವಿರ ಆದಾಯ ಬರುತ್ತಿದೆ. ಇದರೊಂದಿಗೆ ಕಬ್ಬು, ತೆಂಗು ಹಾಗೂ ವಿವಿಧ ತರಕಾರಿಗಳನ್ನು ಬೆಳೆದು ಕೃಷಿಯಲ್ಲೇ ಸ್ವಾವಲಂಬಿ ಬದುಕು ನಡೆಸುತ್ತಿರುವುದಾಗಿ ತಿಳಿಸಿದರು.
ರೈತನ ಕೃಷಿ ಪ್ರಗತಿ ಕಂಡು ಸಂತಸ ವ್ಯಕ್ತಪಡಿಸಿದ ಸಚಿವ ಎಂ.ಬಿ. ಪಾಟೀಲ, ಕೆಲ ವರ್ಷಗಳ ಹಿಂದೆ ಇದೇ ಹೊಲಕ್ಕೆ ಭೇಟಿ ನೀಡಿದ್ದೆ. ಆಗ ಕಂಡಿದ್ದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಇಂದು ಮತ್ತಷ್ಟು ವಿಸ್ತಾರಗೊಂಡಿರುವುದು ಖುಷಿ ತಂದಿದೆ. ತಾವೇ ಬೆಳೆದ ಹೂವುಗಳನ್ನು ಪ್ರೀತಿಯಿಂದ ತೋರಿಸಿ, ತೋಟದ ಎಳನೀರಿನಿಂದ ಆತಿಥ್ಯ ನೀಡಿದ ಮಾನೆ ಅವರ ಸರಳತೆ, ಅಭಿಮಾನ ಮತ್ತು ಕೃತಜ್ಞತಾಭಾವ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು.
ವಿಜಯಪುರ | ನೀರಾವರಿ ಯೋಜನೆ ಫಲ: ಮಹಾರಾಷ್ಟ್ರಕ್ಕೆ ಕೂಲಿಗೆ ಹೋಗುತ್ತಿದ್ದ ರೈತನ ಹೊಲದಲ್ಲಿ ಈಗ ಹೂವಿನ ಘಮಲು
ನೀರಾವರಿ ಸೌಲಭ್ಯ ದೊರೆತರೆ ರೈತನ ಬದುಕು ಹೇಗೆ ಬದಲಾಗಬಹುದು ಎಂಬುದಕ್ಕೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಸಿದ್ದಾಪುರ ಬಳಿಯ ಮಾನೆನದೊಡ್ಡಿ ಗ್ರಾಮದ ರೈತ ವಸಂತ ಬೀರಪ್ಪ ಮಾನೆ ಅವರ ಕೃಷಿ ಬದುಕು ಸಾಕ್ಷಿಯಾಗಿದೆ.
ಮಾನೆ ಅವರ ಆಹ್ವಾನದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಅವರ ತೋಟಕ್ಕೆ ಭೇಟಿ ನೀಡಿ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿದರು. ಇದೇ ವೇಳೆ ರೈತ ಮಾನೆ ಅವರು ಸಚಿವರಿಗೆ ತಾವು ಬೆಳೆದ ಹೂವು ಹಾಗೂ ತೆಂಗಿನಕಾಯಿ ನೀಡಿ ಆತ್ಮೀಯವಾಗಿ ಗೌರವಿಸಿದರು.
16 ಎಕರೆ ಜಮೀನು ಇದ್ದರೂ ಈ ಹಿಂದೆ ನೀರಾವರಿ ಸೌಲಭ್ಯವಿಲ್ಲದೆ ಕೃಷಿಯಿಂದ ಜೀವನ ಕಟ್ಟಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ನೆರೆಯ ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕೆ ತೆರಳಬೇಕಾಗಿತ್ತು. ಆದರೆ, ತಾವು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳ ಪರಿಣಾಮ ಇಂದು ನಮ್ಮ ಹೊಲದಲ್ಲಿ ಹೂವು ಅರಳುತ್ತಿವೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇನೆ ಎಂದು ಮಾನೆ ಸಂತಸ ಹಂಚಿಕೊಂಡರು.
ಶ್ರಾವಣ ಮಾಸದಲ್ಲಿ ಹೂವುಗಳ ಮಾರಾಟದಿಂದ ಪ್ರತಿದಿನ ಸರಾಸರಿ ₹4 ಸಾವಿರ ಆದಾಯ ಬರುತ್ತಿದೆ. ಇದರೊಂದಿಗೆ ಕಬ್ಬು, ತೆಂಗು ಹಾಗೂ ವಿವಿಧ ತರಕಾರಿಗಳನ್ನು ಬೆಳೆದು ಕೃಷಿಯಲ್ಲೇ ಸ್ವಾವಲಂಬಿ ಬದುಕು ನಡೆಸುತ್ತಿರುವುದಾಗಿ ತಿಳಿಸಿದರು.
ರೈತನ ಕೃಷಿ ಪ್ರಗತಿ ಕಂಡು ಸಂತಸ ವ್ಯಕ್ತಪಡಿಸಿದ ಸಚಿವ ಎಂ.ಬಿ. ಪಾಟೀಲ, ಕೆಲ ವರ್ಷಗಳ ಹಿಂದೆ ಇದೇ ಹೊಲಕ್ಕೆ ಭೇಟಿ ನೀಡಿದ್ದೆ. ಆಗ ಕಂಡಿದ್ದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಇಂದು ಮತ್ತಷ್ಟು ವಿಸ್ತಾರಗೊಂಡಿರುವುದು ಖುಷಿ ತಂದಿದೆ. ತಾವೇ ಬೆಳೆದ ಹೂವುಗಳನ್ನು ಪ್ರೀತಿಯಿಂದ ತೋರಿಸಿ, ತೋಟದ ಎಳನೀರಿನಿಂದ ಆತಿಥ್ಯ ನೀಡಿದ ಮಾನೆ ಅವರ ಸರಳತೆ, ಅಭಿಮಾನ ಮತ್ತು ಕೃತಜ್ಞತಾಭಾವ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಮಾನೆನದೊಡ್ಡಿಯಲ್ಲಿ ನಡೆದ ಮರಿಗೆಮ್ಮ ಜಾತ್ರಾ ಮಹೋತ್ಸವದಲ್ಲಿ ಸಚಿವ ಎಂ.ಬಿ. ಪಾಟೀಲ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಟ್ಟೆ, ಮುಖಂಡರಾದ ಚನ್ನಪ್ಪ ದಳವಾಯಿ, ಅಶೋಕ ದಳವಾಯಿ, ನಿಂಗು ಬೆಳ್ಳಬ್ಬಿ, ಪೀರಪಟೇಲ ಪಾಟೀಲ, ರಂಗಾ ಸರಕಾರಿ, ಧನಂಜಯ ಮಾನೆ ಹಾಗೂ ರಾಘು ಸುಳ್ಳವಸ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.