ವಿಜಯಪುರ | ಕಾರ್ಯಕರ್ತರಿಗೆ ಸಮಾನ ಅವಕಾಶ ನೀಡಿ, ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ: ಪ್ರದೀಪ್ ಪಾಟೀಲ್

Date:

ರಾಜಕೀಯದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಹೊಸ ನಾಯಕತ್ವಕ್ಕೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಬೇಕು. ಅಧಿಕಾರವೆಂಬುದು ಕುಟುಂಬದ ಆಸ್ತಿಯಲ್ಲ, ಅದು ಜನರ ವಿಶ್ವಾಸದಿಂದ ದೊರೆತ ಜವಾಬ್ದಾರಿ ಎಂದು ಗ್ರಾಮ ಸ್ವರಾಜ್ಯ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಚ. ಪಾಟೀಲ್ ನಾಗರದಿನ್ನಿ ಹೇಳಿದರು.

- Advertisement -

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, “ಒಂದು ಕಾಲದಲ್ಲಿ ಸಾಮಾನ್ಯ ಕಾರ್ಯಕರ್ತರ ಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ಜನರೊಂದಿಗಿನ ನಿರಂತರ ಸಂಪರ್ಕವನ್ನು ಗುರುತಿಸಿ ಅವರನ್ನು ನಾಯಕತ್ವದ ಹಂತಕ್ಕೆ ಬೆಳೆಸುವ ರಾಜಕೀಯ ವ್ಯವಸ್ಥೆ ಇತ್ತು. ಆದರೆ, ಇಂದು ರಾಜಕೀಯವು ನಿಧಾನವಾಗಿ ಕುಟುಂಬ ರಾಜಕಾರಣದತ್ತ ಸಾಗುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ” ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

“ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮಾಜಿ ಶಾಸಕರು ಹಾಗೂ ಸಂಸದರು ತಮ್ಮ ಮಕ್ಕಳನ್ನು ಚುನಾವಣಾ ಕಣಕ್ಕೆ ಇಳಿಸಲು ಸಿದ್ಧತೆ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇಂತಹ ಸಂದರ್ಭದಲ್ಲಿ ಜನರು ವ್ಯಕ್ತಿಗಳ ಸೇವೆ, ಸಾಮರ್ಥ್ಯ ಮತ್ತು ಜನಪರ ಕಾರ್ಯಗಳನ್ನು ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಕಾರ್ಯಕರ್ತರು ಕೇವಲ ಮತಗಳನ್ನು ತರುವ ಯಂತ್ರಗಳಲ್ಲ; ಅವರೇ ಭವಿಷ್ಯದ ನಾಯಕರು ಎಂದು ಪ್ರತಿಪಾದಿಸಿದ ಅವರು, ಗ್ರಾಮ ಪಂಚಾಯಿತಿಯಿಂದ ವಿಧಾನಸಭೆ ಮತ್ತು ಲೋಕಸಭೆಯವರೆಗೆ ಹೊಸ ಮುಖಗಳಿಗೆ ಅವಕಾಶ ದೊರೆಯುವಂತಹ ರಾಜಕೀಯ ಸಂಸ್ಕೃತಿ ನಿರ್ಮಾಣವಾಗಬೇಕು” ಎಂದರು.

“ಚುನಾವಣೆಯಲ್ಲಿ ಹಣಬಲ, ಕುಟುಂಬದ ಪ್ರಭಾವ ಅಥವಾ ರಾಜಕೀಯ ಪರಂಪರೆಗಿಂತ ಜನರೊಂದಿಗೆ ನಿರಂತರವಾಗಿ ಕೆಲಸ ಮಾಡುವ ವ್ಯಕ್ತಿಯ ಸೇವೆ ಮತ್ತು ಸಾಮರ್ಥ್ಯಕ್ಕೆ ಆದ್ಯತೆ ನೀಡಬೇಕು. ಕಾರ್ಯಕರ್ತರನ್ನು ನಾಯಕತ್ವದ ಹಂತಕ್ಕೆ ಬೆಳೆಸುವ ರಾಜಕಾರಣಿಗಳು ಬೇಕೇ ಹೊರತು, ಅವರನ್ನು ಅಧಿಕಾರ ತಲುಪುವ ಮೆಟ್ಟಿಲುಗಳಾಗಿ ಬಳಸಿಕೊಳ್ಳುವ ರಾಜಕೀಯ ವ್ಯವಸ್ಥೆ ಬೇಡ. ಇಂದು ದೇಶಕ್ಕೆ ಮತ್ತು ರಾಜ್ಯಕ್ಕೆ ಅಗತ್ಯವಿರುವುದು ಕುಟುಂಬದ ಆಧಾರದ ಮೇಲಿನ ನಾಯಕತ್ವವಲ್ಲ, ಜನರಿಂದ ಬೆಳೆದುಬಂದ ನಾಯಕತ್ವ. ಅಧಿಕಾರ ಕೆಲವೇ ವ್ಯಕ್ತಿಗಳ ಅಥವಾ ಕುಟುಂಬಗಳ ಕೈಯಲ್ಲಿ ಕೇಂದ್ರೀಕೃತವಾಗದೆ, ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯ ಮೂಲಕ ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಹೊಸ ನಾಯಕತ್ವ ಬೆಳೆಯುವ ವ್ಯವಸ್ಥೆ ನಿರ್ಮಾಣವಾಗಬೇಕು” ಎಂದು ತಿಳಿಸಿದರು.

ಸಮಾನ ಅವಕಾಶವೇ ನಿಜವಾದ ಪ್ರಜಾಪ್ರಭುತ್ವದ ಆಶಯವಾಗಿದೆ. ಕಾರ್ಯಕರ್ತರಿಗೆ ಅವಕಾಶ, ಹೊಸ ನಾಯಕತ್ವಕ್ಕೆ ಪ್ರೋತ್ಸಾಹ ಹಾಗೂ ಜನರಿಗೆ ಅಧಿಕಾರ ಎಂಬ ತತ್ವದೊಂದಿಗೆ ರಾಜಕೀಯ ಪಕ್ಷಗಳು ಮುನ್ನಡೆಯಬೇಕು ಎಂದು ಪ್ರದೀಪ್ ಚ. ಪಾಟೀಲ್ ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರದಲ್ಲಿ ಮುಂದುವರಿದ ರಕ್ತಪಾತ: ತೌಬಾಲ್‌ನಲ್ಲಿ ಭುಗಿಲೆದ್ದ ಘರ್ಷಣೆ; ಒಬ್ಬರು ಸಾವು, ಹಲವರಿಗೆ ಗಾಯ

ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಳವಾಗುತ್ತಲೇ ಇದೆ. ತೌಬಾಲ್ ಜಿಲ್ಲೆಯಲ್ಲಿ ಭಾನುವಾರ ನಡೆದ ತೀವ್ರ...

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಕಾರಿನ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್?‌

ಬಾಲಿವುಡ್ ನಟ ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಭಾನುವಾರ ಗುಂಡಿನ...

ಬಸವಕಲ್ಯಾಣ | ಕೃಷಿ, ಪರಿಸರ ಸಾಹಿತ್ಯದ ಭಾಗವಾಗಲಿ

ಪರಿಸರ ಪ್ರಜ್ಞೆ ಇಂದಿನ ಅಗತ್ಯವಾಗಿದ್ದು, ಕೃಷಿ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳು...

ಬೀದರ್‌ | ಜಗತ್ತಿನ ಮೊದಲ ಮಹಿಳಾ ತತ್ವಜ್ಞಾನಿ ಮಹಾದೇವಿಯಕ್ಕ: ಸಂತೋಷ ನಾಗರಾಳೆ

ಅಕ್ಕಮಹಾದೇವಿ ಮಹಿಳಾ ಸ್ವಾತಂತ್ರ್ಯ, ಸ್ವಾಭಿಮಾನ, ಸದಾಚಾರ ಹಾಗೂ ಸದ್ಭಕ್ತಿಯಂತಹ ಮಹೋನ್ನತ ಮೌಲ್ಯಗಳಿಗೆ...