ನಿವೃತ್ತ ಶಿಕ್ಷಕ ದಿ.ದ್ಯಾಮನಗೌಡ ಅ.ಪಾಟೀಲ, ಉತ್ನಾಳ ಸ್ಮರಣಾರ್ಥ 2ನೇ ರಾಜ್ಯಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ-2026-27 ಸೆ.26 ಹಾಗೂ 27ರಂದು ವಿಜಯಪುರ ನಗರದಲ್ಲಿ ನಡೆಯಲಿದೆ. ನಗರದ ಡಾಲರ್ಸ್ ಕಾಲೋನಿಯ ಲೋಕ ಕಲ್ಯಾಣ ಶಾಲೆಯ ಸಭಾಭವನದಲ್ಲಿ ಎರಡು ದಿನಗಳ ಕಾಲ ಸೋಲೋ, ಡಬಲ್ ಹಾಗೂ ಮಿಕ್ಸ್‌ಡ್ ಡಬಲ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಸೂರ್ಯ ನಮಸ್ಕಾರ ತರಬೇತುದಾರರು ಹಾಗೂ ಕ್ರೀಡಾಪಟುಗಳು ಸೇರಿದಂತೆ 6 ವರ್ಷ ಮೇಲ್ಪಟ್ಟ ಬಾಲಕರು, ಬಾಲಕಿಯರು, ಮಹಿಳೆಯರು ಹಾಗೂ ಪುರುಷರು ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಅಖಿಲ ಕರ್ನಾಟಕ ಸೂರ್ಯ ನಮಸ್ಕಾರ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ನಂ. ಬಾಗೇವಾಡಿ, ಉತ್ನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





