ವಿಜಯಪುರ | ‘ಜ್ಞಾನವಾಪಿ – ನಾವೆಂದೂ ಬಿಟ್ಟು ಕೊಡುವುದಿಲ್ಲ’ ಎಂದು ಎಸ್‌ಡಿಪಿಐ ಪ್ರತಿಭಟನೆ

Date:

Advertisements

ಪೂಜಾ ಸ್ಥಳಗಳ ಕಾಯ್ದೆ 1991 ಜಾರಿಯಲ್ಲಿದ್ದೂ ಜ್ಞಾನವಾಪಿ ಮಸೀದಿಯನ್ನು ಮುಸ್ಲಿಮರಿಂದ ಕಸಿಯುವ ಷಡ್ಯಂತ್ರ ನಡೆಯುತ್ತಿದೆ. ಜ್ಞಾನವಾಪಿಯನ್ನು ನಾವೆಂದೂ ಬಿಟ್ಟು ಕೊಡುವುದಿಲ್ಲ ಎಂದು ಎಸ್‌ಡಿಪಿಐ ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದೆ.

ನಗರದ ಡಾ. ಅಂಬೇಡ್ಕರ್ ವೃತ್ತದ ಬಳಿ ಎಸ್‌ಡಿಪಿಐ ಪಕ್ಷದ ನಾಯಕರು ನಡೆಸಿದ ಪ್ರತಿಭಟನೆಯಲ್ಲಿ, ಜಿಲ್ಲಾ ಸಮಿತಿ ಮುಖಂಡರು ಹಾಗೂ ನಗರ ಸಮಿತಿಯ  ಸದಸ್ಯರು ಹಾಗೂ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು. ಈ ವೇಳೆ ಜಿಲ್ಲಾಧ್ಯಕ್ಷ ಅಥಾವುಲ್ಲಾ ದ್ರಾಕ್ಷೀ ಮಾತನಾಡಿದರು.

ಯಾವುದೇ ದೇಶದಲ್ಲಿ ಜನರಿಗೆ ತಮ್ಮ ಹಕ್ಕುಗಳ ಮೇಲೆ ಪ್ರಭಲವಾದ ನಂಬಿಕೆ ಹುಟ್ಟುವುದು ಆ ಹಕ್ಕುಗಳನ್ನು ಆ ದೇಶದ ಸಂವಿಧಾನದಲ್ಲಿ ಅಳವಡಿಸಿಕೊಂಡಾಗ. ಸಂವಿಧಾನದ ಮೂಲಕ ಬರುವ ಹಕ್ಕುಗಳನ್ನು ಯಾರು ಕಸಿಯಲಾರರು ಎಂಬ ನಂಬಿಕೆ ಅಚಲವಾಗಿರುತ್ತದೆ. ಆ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸತ್ತು ಕೈಗೊಳ್ಳುವ ಕಾಯ್ದೆ, ಕಾನೂನುಗಳು ಸಂವಿಧಾನದ ಪರಿಧಿಯಲ್ಲಿರುತ್ತವೆ.

Advertisements

ಅಂತಹದ್ದೇ ಒಂದು ಕಾಯ್ದೆ 1991ರ ಪೂಜಾ ಸ್ಥಳಗಳ ಕಾಯ್ದೆ. ಹಾಗಿದ್ದೂ ಜ್ಞಾನವಾಪಿ ಮಸೀದಿಯನ್ನು ಷಡ್ಯಂತ್ರದ ಮೂಲಕ ಮುಸ್ಲಿಮರಿಂದ ಕಸಿಯುವ ಪ್ರಯತ್ನ ನಡೆಯುತ್ತಿದೆ. ಜ್ಞಾನವಾಪಿಯನ್ನು ನಾವೆಂದೂ ಮುಸ್ಲಿಂರಿಂದ ಕಸಿಯಲು ಬಿಟ್ಟು ಕೊಡುವುದಿಲ್ಲ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಜೆಪಿ ಮತ್ತು ಸಂಘಪರಿವಾರ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾರ್ಪಡಿಸಬೇಕು ಎಂದು ಷಡ್ಯಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ಮುಸ್ಲಿಮರ ಸಾಂಸ್ಕೃತಿಕ ಗುರುತುಗಳನ್ನು ಅಳಿಸಿ ಹಾಕುವ ಅಪಾಯಕಾರಿ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುತ್ತಿದೆ. ಹೆಸರು ಬದಲಾವಣೆ ಎಂಬುದು ಅವರ ಒಂದು ಅಸ್ತ್ರವಾದರೆ, ಇನ್ನೊಂದು ಪ್ರಬಲ ಅಸ್ತ್ರ ಮುಸ್ಲಿಮರ ನಂಬಿಕೆಗಳ ಮೇಲೆ ಪ್ರಹಾರ ನಡೆಸುವುದು. ಮುಸ್ಲಿಮರ ಮಸೀದಿಗಳನ್ನು ಅವರಿಂದ ಕಿತ್ತುಕೊಳ್ಳುವ ಮೂಲಕ ಅವರ ನಂಬಿಕೆಗಳ ಮೇಲೆ ಪ್ರಹಾರ ನಡೆಸಬೇಕು ಎಂಬುದು ಫ್ಯಾಸಿಸ್ಟ್ ಬಿಜೆಪಿ ಮತ್ತು ಸಂಘ ಪರಿವಾರದ ತಂತ್ರ.

ಅದರ ಭಾಗವಾಗಿ ಈಗಾಗಲೇ ಬಾಬರಿ ಮಸೀದಿಯನ್ನು ದೇಶದ ಮುಸ್ಲಿಮರ ಪಾಲಿಗೆ ಇಲ್ಲವಾಗಿಸಿದ್ದಾರೆ. ಈಗ ಜ್ಞಾನವಾಪಿ ಮಸೀದಿಯನ್ನು ಕೂಡ ಅದೇ ಸಾಲಿಗೆ ಸೇರಿಸಲು ಹವಣಿಸುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ ತನ್ನ ಆಕ್ರೋಶ ಹೊರ ಹಾಕಿದೆ.

ಯಾವೆಲ್ಲಾ ಷಡ್ಯಂತ್ರಗಳ ನಡುವೆಯೂ ಜ್ಞಾನವಾಪಿ ಮಸೀದಿಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಈ ದೇಶದ ಸಂವಿಧಾನವನ್ನು ಒಪ್ಪುವ ಎಲ್ಲರ ಮೇಲಿದೆ.  ಮೋದಿ ಸರ್ಕಾರ ತನಗೆ ದೊರೆತಿರುವ ಜನಾದೇಶವನ್ನು ದುರ್ಬಳಕೆ ಮಾಡಿಕೊಂಡು ನಡೆಸುತ್ತಿರುವ ದಾಳಿಯನ್ನು ಎದುರಿಸುವ ಶಕ್ತಿ ಮುಸ್ಲಿಮರಲ್ಲಿದೆ ಎಂದು ಸಿ.ಎ.ಎ ಹೋರಾಟದಂತಹ ಸಂದರ್ಭದಲ್ಲಿ ಈ ನಾಡಿನ ಮುಸ್ಲಿಂ ಜನಾಂಗ  ತೋರಿಸಿಕೊಟ್ಟಿದೆ.

ಜ್ಞಾನವಾಪಿ ಮಸೀದಿ ವಿಚಾರದಲ್ಲಿಯೂ ಕೂಡ ಅದೇ ಮಟ್ಟದ ಹೋರಾಟಕ್ಕೆ ಮುಸ್ಲಿಂ ಸಮುದಾಯ ಮುಂದಾಗಲಿದ್ದು ಅದಕ್ಕೆ ಇತರೇ ಸಂವಿಧಾನ ಪ್ರಿಯ ಸಮುದಾಯಗಳ ಸಂಘಟನೆಗಳ ಜೊತೆಗೂಡಿ ಎಸ್.ಡಿ.ಪಿ.ಐ ಸಂಪೂರ್ಣ ಬೆಂಬಲ ನೀಡಲಿದ್ದು ಹೋರಾಟದಲ್ಲಿ ಜೊತೆಯಾಗಲಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಅದಕ್ಕೆ ನಮಗೆ ಎಲ್ಲಾ ಅವಕಾಶಗಳನ್ನು ನೀಡುತ್ತದೆ. ಸಂವಿಧಾನ ಪ್ರತಿಪಾದಿಸುವ ಸಮಾನತೆ ಸಹೋದರತ್ವ ಸಹಬಾಳ್ವಿಗೆ ಜ್ಞಾನವಾಪಿ ಮಸೀದಿಯು ಪ್ರತೀಕವಾಗಿದ್ದು ಹಾಗಾಗಿ ಮಸೀದಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಎಸ್.ಡಿ.ಪಿ.ಐ. ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X